ಇರಾಕ್ ಶಿಬಿರದ ಮೇಲೆ ದಾಳಿ : ದೃಢಪಟ್ಟ ಮೂವರು ಸಿಬ್ಬಂದಿ ಸಾವು ವಾಷಿಂಗ್ಟನ್

 ವಾಷಿಂಗ್ಟನ್, ಮಾ 12, ರಷ್ಯಾದಲ್ಲಿ ನಿರ್ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಪರಾಭವಗೊಳಿಸಲು ಇರಾಕ್ ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ನೇತೃತ್ವದ ಮೈತ್ರಿ ಪಡೆ ದೃಢಪಡಿಸಿದೆ.  ಇರಾಕ್ ನ ತಾಜಿ ಶಿಬಿರದ ಮೇಲೆ ಮಾ 11 ರಂದು ರಾಕೆಟ್ ದಾಳಿಯ ವೇಳೆ ಮೈತ್ರಿ ಪಡೆಯ ಮೂವರು ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮೈತ್ರಿಪಡೆಯ ವಕ್ತಾರರ ಹೇಳಿಕೆ ತಿಳಿಸಿದೆ.  ಈ ದಾಳಿಯಲ್ಲಿ ಸುಮಾರು 12 ಜನ ಗಾಯಗೊಂಡಿದ್ದಾರೆ ಎಂದೂ ಸಹ ಅವರು ಮಾಹಿತಿ ನೀಡಿದ್ದಾರೆ.  ಇದಕ್ಕೂ ಮುನ್ನ ಇಬ್ಬರು ಅಮೆರಿಕನ್ನರು ಮತ್ತು ಓರ್ವ ಬ್ರಿಟಿಷ್ ನಾಗರಿಕ ಈ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಮೆರಿಕ ಮಾಧ್ಯಮ ವರದಿ ಮಾಡಿತ್ತು.  ದಾಳಿ ಕುರಿತ ತನಿಖೆ ಪ್ರಗತಿಯಲ್ಲಿದೆ ಎಂದೂ ಸಹ ಅವರು ಹೇಳಿದ್ದಾರೆ.