ಐಪಿಎಲ್ ಹರಾಜು: ಆರ್ಸಿಬಿ ಪಾಲಾದ ಪಿಂಚ್, ಮೋರಿಸ್

ಕೋಲ್ಕತಾ, ಡಿ 19 :        2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ  ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಸಾಗರೋತ್ತರ ಆಟಗಾರ ಆಸ್ಟ್ರೇಲಿಯಾದ ಹಿರಿಯ ವೇಗಿ ಪ್ಯಾಟ್ ಕಮಿನ್ಸ್, ಸಹ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ದಕ್ಷಿಣ ಆಪ್ರಿಕಾದ ಕ್ರಿಸ್ ಮೋರಿಸ್ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.

ಇದುವರೆಗೂ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದೆ ನಿರಾಸೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಬಲಿಷ್ಟ ತಂಡ ಕಟ್ಟುವ ಯೋಜನೆಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಇಬ್ಬರು ಪ್ರಮುಖ ಆಟಗಾರರನ್ನು ತನ್ನ ತೆಕ್ಕಗೆ ಹಾಕಿಕೊಳ್ಳುವಲ್ಲಿ ಸಫಲವಾಗಿದೆ.

ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆ್ಯರೋನ್ ಪಿಂಚ್ ಅವರನ್ನು 4.40ಕೋಟಿ ರೂ. ನೀಡಿ ಖರೀದಿಸಿದೆ. ಆ ಮೂಲಕ ಪಾರ್ಥಿವ್ ಪಟೇಲ್ ಅವರ ಜತೆಗೆ ಮತ್ತೊರ್ವ ಆರಂಭಿಕ ಸಿಕ್ಕಂತಾಗಿದೆ. ಇದರ ಜತೆಗೆ, ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿ ರೂ.ಗೆ ಆರ್ಸಿಬಿ ತನ್ನ ತೆಕ್ಕಗೆ ಹಾಕಿಕೊಂಡಿದೆ.

ಅತ್ಯಂತ ದುಬಾರಿ ಆಟಗಾರ ಎಂದೆನ್ನಲಾಗುತ್ತಿದ್ದ 2 ಕೋಟಿ ರೂ. ಮೂಲ ಬೆಲೆಯ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸಲು ಆರಂಭದಿಂದಲೂ ಫ್ರಾಂಚೈಸಿಗಳ ನಡುವೆ ಭಾರು ಪೈಪೋಟಿ ನಡೆದಿತ್ತು. ಆದರೆ, ಕೊನೆಯ ಹಂತದಲ್ಲಿ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 15.50ಕೋಟಿ ರೂ.ಗೆ ಖರದಿಸಿತು.

ಭಾರತದ ಆಟಗಾರರಲ್ಲಿ ಪ್ರಮುಖರಾಗಿದ್ದ 1.5 ಕೋಟಿ ಮೂಲ ಬೆಲೆ ಹೊಂದಿದ್ದ ರಾಬಿನ್ ಉತ್ತಪ್ಪ ಅವರ ಮೇಲೂ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅವರನ್ನು ಖರೀದಿಸಲು ಯಾವ ತಂಡಗಳು ಅಷ್ಟೊಂದು ಆಸಕ್ತಿ ತೋರದ ಕಾರಣ ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 3 ಕೋಟಿ ರೂ. ಬಿಕರಿಯಾದರು. ಕರ್ನಾಟಕ ಮತ್ತೊಬ್ಬ ಆಟಗಾರ ಸ್ಟುವರ್ಟ್ ಬಿನ್ನಿ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಹಾಗಾಗಿ, ಅವರು ಅನ್ಸೋಲ್ಡ್ ಆಗಿ ಉಳಿದರು. 

ಆಟಗಾರ        ಬೆಲೆ ಖರೀದಿಸಿದ ತಂಡ 

ಪ್ಯಾಟ್ ಕಮಿನ್ಸ್     15.50 ಕೋಟಿ ಕೆಕೆಆರ್ 

ಮ್ಯಾಕ್ಸ್ವೆಲ್     10.75 ಕೋಟಿ ಕಿಂಗ್ಸ್ ಇಲೆವೆನ್ ಪಂಜಾಬ್ 

ಕ್ರಿಸ್ ಮೋರಿಸ್     10 ಕೋಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 

ಸ್ಯಾಮ್ ಕರ್ರನ್     5.50 ಕೋಟಿ ಚೆನ್ನೈ ಸೂಪರ್ ಕಿಂಗ್ಸ್ 

ಇಯಾನ್ ಮಾರ್ಗನ್    5.25ಕೋಟಿ  ಕೆಕೆಆರ್ 

ಆ್ಯರೋನ್ ಪಿಂಚ್    4.40 ಕೋಟಿ ಆರ್ಸಿಬಿ 

ರಾಬಿನ್ ಉತ್ತಪ್ಪ    3 ಕೋಟಿ ಆರ್ಆರ್ 

ಕ್ರಿಸ್ ಲೀನ್    2 ಕೋಟಿ ಮುಂಬೈ ಇಂಡಿಯನ್ಸ್ 

ಜೇಸನ್ ರಾಯ್    1.50 ಕೋಟಿ ಡೆಲ್ಲಿ ಕ್ಯಾಪಿಟಲ್ಸ್ 

 ಕ್ರಿಸ್ ವೋಕ್ಸ್    1.50 ಕೋಟಿ  ಡೆಲ್ಲಿ ಕ್ಯಾಪಿಟಲ್ಸ್ 

ಶೆಲ್ಡನ್ ಕಾಟ್ರೆಲ್   8.50 ಕೋಟಿ ಕಿಂಗ್ಸ್ ಇಲೆವೆನ್ ಪಂಜಾಬ್ 


ಆನ್ ಸೋಲ್ಡ್ ಆದ ಪ್ರಮುಖರು 

ಯೂಸಫ್ ಪಠಾಣ್ 

ಸ್ಟುವರ್ಟ್ ಬಿನ್ನಿ 

ಕಾಲಿನ್ ಡಿ ಗ್ರಾಂಡ್ಹೋಮ್