ಇಂಡಿ: ಜಾನಪದ ಕಲೆ ನಶಿಸುತ್ತಿರುವದು ಖೇದಕರಸಂಗತಿ: ತಾಲೂಕಾ ಅಧ್ಯಕ್ಷ ಪಾಟೀಲರ ಅಭಿಪ್ರಾಯ

ಲೋಕದರ್ಶನ ವರದಿ

ಇಂಡಿ 12: ಎಲ್ಲಾ ಕಲೆಗಳ ಮೂಲ ಬೇರು ಎಂದರೆ ಜಾನಪದ ಕಲೆ ಇಂತಹ ಶ್ರೀಮಂತ ಕಲೆಯನ್ನು ಗ್ರಾಮೀಣ ಭಾಗದಲ್ಲಿ ಮಾತ್ರ ಜೀವಂತವಾಗಿದೆ ಉಳಿದ ನಗರಗಳಲ್ಲಿ ನಶಿಸುತ್ತಿರುವದು ಖೇದಕರಸಂಗತಿ ಎಂದು  ಕ.ಜಾ.ಪ ತಾಲೂಕಾ ಅಧ್ಯಕ್ಷ ಆರ್.ವ್ಹಿ ಪಾಟೀಲ ವಿಷಾದ ವ್ಯಕ್ತ ಪಡಿಸಿದರು.

ತಾಲೂಕಿನ ಹಿರೇ ಮಸಳಿ ಗ್ರಾಮದ ಮಲ್ಲಯ್ಯನ ದೇವಸ್ಥಾನದ ಸಭಾ ಭವದಲ್ಲಿ ಹಮ್ಮಿಕೊಂಡ  ಕ.ಜಾ.ಪ ವಲಯದ ಹಾಗೂ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ  ಪ್ರತಿಷ್ಠಾನ  (ರಿ) ಪಡಗಾನೂರ ಮತ್ತು ಹಿರೇಮಸಳಿ-ತಾಂಬಾ  ಕ.ಜಾ.ಪ ಗ್ರಾಮ ಘಟಕದ ವತಿಯಿಂದ ಜಾನಪದ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ದೇಶದ ಕಲೆ ಸಂಸ್ಕೃತಿ ಚೀರವಾಗಿರಲು ಹಳ್ಳಿಗಳೇ ಮೂಲ ಆಧಾರ ಸ್ತಂಬ  ಹಳ್ಳಿಗಳ ಸುಧಾರಣೆಯೇ ದೇಶದ ಸುಧಾರಣೆ ಭಾರತ ದೇಶದ ಸಂಸ್ಕೃತಿಕ ತೋಟಿಲ್ಲು ಎಂದರೆ ಗ್ರಾಮೀಣ ಭಾಗ. ಜಾನಪದ ಸಾಹಿತ್ಯದಷ್ಟು ಶ್ರೀಮಂತಿಕೆ ಯಾವ ಸಾಹಿತ್ಯದಲ್ಲಿ ಸಿಗುವದಿಲ್ಲ. ನಮ್ಮ ಪೂರ್ವಜರು ಇದನ್ನು ಕಲಿಯಲು ಯಾವ ಪಾಠಶಾಲೆಗೆ ಅಲೇದಾಡಲ್ಲಿಲ್ಲ  ಬಿಸುವಾಗ .ಕುಟ್ಟುವಾಗ, ಹಂತ್ತಿ ಹೊಡೆಯುವಾಗ, ದಣಿವಾದಾಗ,  ನೋವು ನಲಿವುಗಳಲ್ಲಿ ಸಂತೋಷಗಳಲ್ಲಿ ತನ್ನಿಂದ ತಾನೆ ಅರಳಿದ ಸಾಹಿತ್ಯವೇ ಅದು ಜಾನಪದವಾಗಿ ಹುಟ್ಟಿಕೊಂಡಿದೆ. ಜಾನಪದ ಸಾಹಿತ್ಯ ಮನಕ್ಕೆ ಮದವನ್ನು ನೀಡುತ್ತದೆ. ದಣಿದವರಿಗೆ ಆಯಾಸ ನಿಗಿಸುತ್ತದೆ.ಸಂತೋಷ ಆಹ್ಲಾದವನ್ನುಂಟು ಮಾಡುವ ಸಾಹಿತ್ಯ ಜಾನಪದ ಸಾಹಿತ್ಯದಲ್ಲಿದೆ. ಇಂದು ಮೋಹದ ಪೆಟ್ಟಿಗೆ ಬಂದು ಯುವ ಸಮುದಾಯದ ತಲೆ ಕೆಡಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಅಧುನಿಕ ಜಗತ್ತಿನ ಬೆನ್ನು ಹತ್ತಿ ಹಿಂದಿನ ಪೌರಾಣಿಕ ಸಾಹಿತ್ಯ ಮರೆಮಾಚುತ್ತಿರುವದು ದುರಂತ. ಇಡೀ ಸಾಹಿತ್ಯಗಳ ತಾಯಿಬೇರು ಎಂದರೆ ಜಾನಪದ ಸಾಹಿತ್ಯ ಇಂತಹ ಶ್ರೀಮಂತ ಸಾಹಿತ್ಯವನ್ನು ಉಳಿಸಿ ಬೇಳೆಸಬೇಕಾಗಿದೆ ಎಂದರು.

       ವೇದ ಮೂರ್ತ ಮಹಾಂತಯ್ಯಾ ಸ್ವಾಮಿಗಳು ದಿವ್ಯಸಾನಿಧ್ಯವಹಿಸಿದರು. ಗ್ರಾ.ಪಂ ಅಧ್ಯಕ್ಷ ಸಿದ್ದರಾಯ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದರು.  ಮನೋಜಕುಮಾರ ಪಾಟೀಲ,  ಕಜಾಪ ವಲಯ ಅಧ್ಯಕ್ಷರಾಗಿ ಶಿವಾನಂದ ವಾಲಿಕಾರ, ತಾಲೂಕಾ ಅಧ್ಯಕ್ಷ ಆರ್ ವ್ಹಿ ಪಾಟೀಲ, ಬಸಣ್ಣಾ ಶಿರಕನ್ನಳ್ಳಿ, ಮುತ್ತಣ್ಣಾ ಹಂಜಗಿ, ಕಾಶಿರಾಯಗೌಡ ಪಾಟೀಲ, ಸುಕ್ರಾಮಸಿಂಗ ರಜಪೂತ, ಬಸೀರ ಮುಲ್ಲಾ, ಗ್ರಾಮ ಘಟಕದ ಅಧ್ಯಕ್ಷೆ ಶರಣಮ್ಮಾ ದೇವರಮನಿ, ಸಂಜಿವ ಮಲಕಗೊಂಡ, ಸಂತೋಷ ವಾಲಿಕಾರ, ಪ್ರವೀಣ ಮನಮಿ ವೇದಿಕೆಯಲ್ಲಿದ್ದರು.