ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ, ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷಾ ವರದಿ

ನವದೆಹಲಿ, ಫೆ ೨೮ :    ಆ ಅಧಿಕಾರಿಯನ್ನು  ಕಿರಾತಕರು  ಒಮ್ಮೆಲೆ   ಕೊಲ್ಲಲಿಲ್ಲ !  ನಿಧಾನವಾಗಿ .ತಡೆದು, ತಡೆದು. ಆರು ಗಂಟೆಗಳ  ಚಿತ್ರಹಿಂಸೆ ನೀಡಿ   ನರಕವನ್ನೇ  ತೋರಿಸಿದರು. ಕರುಣೆ,  ಕನಿಕರ   ಎಂಬ  ಪದಗಳ  ಆರ್ಥವನ್ನು  ಮರೆತು. ಆಕ್ಷರಶಃ   ೪೦೦ ಬಾರಿ   ಕತ್ತಿಯಿಂದ   ದೇಹದ  ವಿವಿದ  ಅಂಗಗಳನ್ನು  ಇರಿದು  ಇರಿದು   ಕರುಳು  ಹೊರತೆಗೆದು  ಕೊನೆಗೆ ಉಸಿರು ತೆಗೆದಿದ್ದಾರೆ!.    ನಂತರ  ಮೃತ ದೇಹವನ್ನು  ಒಳಚರಂಡಿಗೆ ಎಸೆಯಲಾಗಿದೆ.

ದೆಹಲಿ ಒಳಚರಂಡಿಯಲ್ಲಿ ಶವವಾಗಿ   ಪತ್ತೆಯಾಗಿದ್ದ    ಗುಪ್ತಚರ ದಳದ  ಯುವ ಅಧಿಕಾರಿ ಅಂಕಿತ್ ಶರ್ಮಾ  ಸಾವಿಗೆ ಮುನ್ನ   ಅನುಭವಿಸಿದ  ನರಕಯಾತನೆ ಇದು.   ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಮ್ಮ ವರದಿಯಲ್ಲಿ   ಈ ಅಂಶಗಳನ್ನು  ದಾಖಲಿಸಿದ್ದಾರೆ.

ಶರ್ಮಾ  ಶರೀರದ  ಒಂದೂ  ಅಂಗವನ್ನು ಬಿಡದೆ   ಎಲ್ಲಾ ಭಾಗಗಳ  ಮೇಲೂ   ಕತ್ತಿಯಿಂದ  ದಾಳಿ  ನಡೆಸಿದ್ದಾರೆ  ಎಂದು   ವರದಿಯಲ್ಲಿ  ವಿವರಿಸಿದ್ದಾರೆ.  ನಾಲ್ಕರಿಂದ ಆರು ಗಂಟೆಗಳ ಕಾಲ .. ಕನಿಷ್ಠ ಆರು ಜನರು ಈ ದುಷ್ಕೃತ್ಯ  ಎಸಗಿರುವ  ಸಾಧ್ಯತೆಯಿದೆ  ಎಂದು ವಿವರಿಸಿದ್ದಾರೆ.  

ತಮ್ಮ  ವೈದ್ಯಕೀಯ ವೃತ್ತಿ ಜೀವನದಲ್ಲಿ    ಈವರೆಗೆ  ಇಂತಹ  ದಾರುಣ  ಅಂಗಚ್ಚೇದನವನ್ನು  ನಾವು     ನೋಡಿರಲಿಲ್ಲ ಎಂದು ಅವರು  ವೈದ್ಯರು ಹೇಳಿದ್ದಾರೆ. ಅಂಕಿತ್ ಶರ್ಮಾ   ಕುಟುಂಬ ನೀಡಿದ  ದೂರಿನ  ಹಿನ್ನಲೆಯಲ್ಲಿ   ಪೊಲೀಸರು  ಆಪ್  ಮಾಜಿ ನಾಯಕ  ತಾಹಿರ್  ಹುಸೇನ್   ವಿರುದ್ದ   ಹತ್ಯೆ  ಪ್ರಕರಣ ದಾಖಲಿಸಿದ್ದಾರೆ.