ತಂದೆ ತಾಯಿಯನ್ನು ಬಡಬಗ್ಗರಲ್ಲಿ ಕಾಣುತ್ತಿದ್ದೇನೆ: ಮನಿಯಾರ

ಲೋಕದರ್ಶನವರದಿ

ತಾಳಿಕೋಟೆ22: ರಂಜಾನ್ ಹಬ್ಬವೆಂಬುದು ಮುಸ್ಲಿಂ ಬಾಂದವರಿಗೆ ಅತ್ಯಂತ ಪವಿತ್ರಹಬ್ಬವಾಗಿದೆ ಈ ಹಬ್ಬದಲ್ಲಿ ಎಲ್ಲರೂ ಸಮಾನಾಂತರದಿಂದ ಹಬ್ಬವನ್ನು ಸಂಭ್ರಮಿಸಬೇಕೆಂಬುದು ಇಸ್ಲಾಂ ಧರ್ಮದ ಸಂದೇಶವಾಗಿದೆ ಎಂದು ಸಮಾಜ ಸೇವಕ ಗಣಿ ಉದ್ಯಮಿ ಅಯೂಬ ಮನಿಯಾರ ಅವರು ಹೇಳಿದರು.

ಶುಕ್ರವಾರರಂದು ಪಟ್ಟಣದ ಕೊತರ್ಿಹಾಲ್ನಲ್ಲಿ ಮುಸ್ಲಿಂ ಸಮಾಜದ ಕಡುಬಡವರಿಗೆ ರಂಜಾನ್ ಹಬ್ಬದ ಕಿಟ್ಗಳನ್ನು ವೈಯಕ್ತಿಕವಾಗಿ ವಿತರಿಸಿ ಮಾತನಾಡುತ್ತಿದ್ದ ಅವರು ನಾವು ಕೂಡಾ ಕಡುಬಡತನವನ್ನು ಅನುಭವಿಸಿ ಬಂದವರಾಗಿದ್ದೇವೆ ಬಡವರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕೆಂಬುದು ನಮ್ಮ ತಂದೆ ತಾಯಿ ಹೇಳುತ್ತಾ ಬಂದ ಪಾಠ ನನ್ನನ್ನು ಎತ್ತರ ಮಟ್ಟದಲ್ಲಿ ಬೆಳೆಸಿದೆ ಅಂತಹ ತಂದೆ ತಾಯಿಯ ಕನಸ್ಸಿನ ಕೂಸಾದ ನಾನು ಅವರ ನೆನಪಿಗಾಗಿ ಪ್ರತಿವರ್ಷವೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಹಬ್ಬಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳ ಕಿಟ್ಗಳನ್ನು ವೈಯಕ್ತಿಕವಾಗಿ ಸಿದ್ದಪಡಿಸಿ ವಿತರಿಸುತ್ತಾ ಬಂದಿದ್ದೇನೆ ಪ್ರತಿಭಾರಿಯೂ ಈ ಹಬ್ಬದ ಸಂದರ್ಬದಲ್ಲಿ ನೇತ್ರ ತಪಾಸಣೆ ಮತ್ತು ಉಚಿತ ಚಿಕೀತ್ಸಾ ಶಿಭಿರವನ್ನು ನಡೆಸಿ ಬಡವರಿಗೆ ಅನುಕೂಲ ಮಾಡಿಕೊಡುತ್ತಾ ಬಂದಿದ್ದೆ ಆದರೆ ಈ ಭಾರಿ ಕೊರೊನಾ ವೈರಸ್ ಎಂಬ ಹೆಮ್ಮಾರಿ ವಿಶ್ವದೆಲ್ಲದೇ ತನ್ನ ಭಾವುವನ್ನು ಚಾಚಿಕೊಂಡು ನಿಂತಿದೆ ಇಂತಹ ಸಂದರ್ಬದಲ್ಲಿ ನೇತ್ರ ತಪಾಸಣೆ ಶಿಬಿರವನ್ನು ನಡೆಸಲಿಕ್ಕೆಯಾಗಿಲ್ಲಾ ಮುಂದಿನದಿನಗಳಲ್ಲಿ ಮತ್ತೇ ಇಂತಹ ಶಿಬಿರಗಳ ಮೂಲಕ ಬಡವರಿಗೆ ಸಹಾಯ ಹಸ್ತ ಕಲ್ಪಿಸುವಂತಹ ಕಾರ್ಯ ಮಾಡುತ್ತೇನೆಂದರು.

ಇನ್ನೋರ್ವ ಮಾನವ ಹಕ್ಕುಗಳ ಕಲ್ಯಾಣ ಮಂಡಳಿತ ತಾಲೂಕಾ ಅಧ್ಯಕ್ಷ ಶಮಶುದ್ದೀನ ನಾಲಬಂದ  ಅವರು ಮಾತನಾಡಿ ಸದಾ ಸಮಾಜದ ಚಿಂತನೆಯೊಂದಿಗೆ ಮುನ್ನಡೆದಿರುವ ಅಯೂಬ ಮನಿಯಾರ ಅವರು ಪ್ರತಿ ವರ್ಷವೂ ರಂಜಾನ ಹಬ್ಬದ ಸಮಯದಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ ಮುಸ್ಲಿಂ ಸಮಾಜದಲ್ಲಿ ಅನೇಕರು ಶ್ರೀಮಂತರಿದ್ದಾರೆ ಬಡವರಿಗೆ ಸಹಾಯ ಮಾಡುವ ಹೃದಯ ವೈಶಾಲತೆ ಎಂಬುದು ಬೇಕಾಗುತ್ತದೆ ಅಂತಹ ಹೃದಯ ವೈಶಾಲತೆಯನ್ನು ಅಯೂಬ ಮನಿಯಾರ ಅವರು ಹೊಂದಿದ್ದಾರೆ.

           ಈ ಭಾರಿಯ ರಂಜಾನ್ ಹಬ್ಬದ ಸಂದರ್ಬದಲ್ಲಿ ಸಾಕಷ್ಟು ಜನರಿಗೆ ಕಷ್ಟದ ಜೊತೆಗೆ ತೊಂದರೆಯು ಕೂಡಾ ಆಗುತ್ತಿದೆ ಕೊರೊನಾ ಮಹಾ ಮಾರಿ ದೇಶದೆಲ್ಲಡೆ ತನ್ನ ಉಪಟಳವನ್ನು ಮುಂದುವರೆಸಿದೆ ಈ ರೋಗವನ್ನು ತಡೆಗಟ್ಟಬೇಕೆಂಬುದು ಇಡೀ ಜಗತ್ತವೇ ಹೋರಾಟವನ್ನು ನಡೆಸಿದೆ.

        ಈ ರೋಗವನ್ನು ತಡೆಗಟ್ಟಲು ಮನೆಯಲ್ಲಿಯೇ ರಂಜಾನ್ ಹಬ್ಬದ ದೇವರಿಗೆ ಪ್ರಾರ್ಥನೆ ಸಂದರ್ಬದಲ್ಲಿ ಎಲ್ಲರೂ ಕೇಳಿಕೊಳ್ಳುವಂತಾಗಬೇಕು ಜಾತಿ ಕುಲವನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಹೋರಾಡುವಂತಾಗಲಿ ದೇಶದಲ್ಲಿ ಮೊದಲಿನಂತೆ ಸಂತೋಷಬರಿತರಾಗಿ ಎಲ್ಲರೂ ತಮ್ಮ ಕಾಯಕದಲ್ಲಿ ತೊಡುಗುವಂತಾಗಲಿ ಪ್ರಾಥರ್ಿಸೋಣವೆಂದರು.

ಶಿಕ್ಷಕ ಮಹ್ಮದಕಾಸೀಮ್ ನಮಾಜಕಟ್ಟಿ ಅವರು ಮಾತನಾಡಿದರು.

ಈ ಸಮಯದಲ್ಲಿ ಮುಖಂಡರುಗಳಾದ ದಾಹುಲ್ ಸೋಠೆ, ಹುಸೇನ ಪಟೇಲ, ಮುಜಾಹಿದ್ ನಮಾಜಕಟ್ಟಿ, ಶಿಕ್ಷಕ ಅಮೀನಸಾಬ ನಮಾಜಕಟ್ಟಿ, ಮಶಾಕ ನಗಾಚರ್ಿ, ಪರವಿನ ಮನಿಯಾರ, ಆಫ್ರೀನ್ ನಮಾಜಕಟ್ಟಿ, ಮೊದಲಾದವರು ಉಪಸ್ಥಿತರಿದ್ದರು.