ಗದುಗಿನ ಜನತೆಯು ತೋರಿದ ಪ್ರೀತಿಯಿಂದಾಗ ಬಿಟ್ಟು ಹೋಗಲು ಮನಸ್ಸಿಲ್ಲ
I don't want to leave because of the love shown by the people of Gadug
ಗದಗ 19: ನಗರದಲ್ಲಿ ನಡೆದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳವನ್ನು ಗದುಗಿನ ಜನತೆ ಅತ್ಯಂತ ಭಕ್ತಿಪೂರ್ವಕವಾಗಿ ಯಶಸ್ವಿಗೊಳಿಸಿದ್ದಾರೆ. ಈ ಸೇವಾಕಾರ್ಯದ ಫಲದಿಂದ ಲೋಕಲ್ಯಾಣವಾಗಲಿದೆ ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಹೇಳಿದರು.
ಅವರ ನಗರದಲ್ಲಿ ಅತಿರುದ್ರಯಾಗವನ್ನು ಯಶಸ್ವಿಗೊಳಿಸಿದ ಗುರೂಜಿ ಅವರನ್ನು ಬಿಳ್ಕೋಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಗರದಲ್ಲಿ ಅತಿರುದ್ರಯಾಗ ಯಶಸ್ವಿಯಾಗಲು ಇಲ್ಲಿನ ಜನತೆ ಹಾಗೂ ಸೇವಾಕಾರ್ಯಕರ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ವ್ಯರ್ಥವಾಗುವದಿಲ್ಲ. ಈ ಮಹಾಯಜ್ಞದಲ್ಲಿ ಕಳೆದ ಎಂಟು ದಿನಗಳವರೆಗೆ ನಡೆದ ಮಹಾಯಾಗದ ಭಸ್ಮವನ್ನು 60 ದಿನಗಳ ನಂತರ ಪ್ರಯಾಗರಾಜದಲ್ಲಿ, ತುಂಗಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಮತ್ತು ಗದುಗಿನ ಜನತೆಗೂ ಸಹ ನೀಡಲಾಗುವುದು ಎಂದು ಹೇಳಿದರು.
ಇಲ್ಲಿ ಜರುಗಿದ ಮಹಾಯಾಗದಿಂದ ಮತ್ತು ಭಕ್ತರು ತೋರಿದ ಪ್ರೀತಿಯು ನನ್ನನ್ನು ಕಟ್ಟಿ ಹಾಕಿರುವದರಿಂದ ಗದಗ ನಗರವನ್ನು ಬಿಟ್ಟು ಹೋಗಲು ಮನಸ್ಸಿಲ್ಲ ಆದರೂ ದೈವಿಚ್ಚೇಯಂತೆ ಮುಂದಿನ ಸೇವಾಕಾರ್ಯಗಳನ್ನು ನಡೆಸಬೇಕಾಗಿರುವುದರಿಂದ ನಾನು ಹೋಗುವದು ಅನಿವಾರ್ಯವಾಗಿದೆ. ಕಳೆದ 10 ವರ್ಷಗಳಿಂದ ನಾನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಮಠವನ್ನು ನಿರ್ಮಿಸಿ ನೆಲೆಸಿದ್ದೆನೆ. ಭಕ್ತರು ನಮ್ಮ ಬೇಟಿಯಾಗಲು ಅಲ್ಲಿಗೆ ಬರಬಹುದು ಎಂದು ಹೇಳಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 