ಧೈರ್ಯದಿಂದ ಜನಪರ ಕೆಲಸ ಮಾಡಲು ಬದ್ಧನಿದ್ದೇನೆ: ಶಾಸಕ ಮಾನೆ
I am committed to working for the people with courage: MLA Mane
ಹಾನಗಲ್ 30: ತಮಗೆ ಯಾರ ಭಯವೂ ಇಲ್ಲ, ಧೈರ್ಯದಿಂದ ಜನಪರ ಕೆಲಸ ಮಾಡಲು ಬದ್ಧನಿದ್ದೇನೆ ್ಲ, ಗಟ್ಟಿಯಾಗಿ ಜೊತೆ ನಿಂತರೆ ಬದಲಾವಣೆ ತರಲು ಸಾಧ್ಯವಿದೆ. ಮಾಡುವ ಕೆಲಸದಲ್ಲಿ ಅಡ್ಡಿ ಬರದಿದ್ದರೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಮಾಡಬಹುದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ನೌಕರರ ಭವನದಲ್ಲಿ ನಗರ ವರ್ತಕರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಶಿಗ್ಗಾಂವಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಗುಂಡು ಹಾರಿಸಿದ ಹಾನಗಲ್ ಪಿಎಸ್‌ಐ ಸಂಪತ್ ಆನಿಕಿವಿ ಹಾಗೂ ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಲೆ ಅಪರಾಧಿಗಳ ಮೇಲೆ ಗುಂಡು ಹಾರಿಸಿ ಧೈರ್ಯ ತೊರಿದ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿದ ಹಾನಗಲ್ ಪಿಎಸ್‌ಐ ಸಂಪತ್ ಆನಿಕಿವಿ ಹಾಗೂ ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಮಾತನಾಡಿ, ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಕಷ್ಟು ಅವಕಾಶಗಳಿವೆ. ಹೊಸ, ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಮಾಹಿತಿ ನೀಡಿ, ಸಾಥ್ ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಅಪರಾಧ ಕೃತ್ಯ ಮಟ್ಟ ಹಾಕಬಹುದಾಗಿದೆ. ಒಬ್ಬ ಪೊಲೀಸ್ ಅಧಿಕಾರಿಯಿಂದ ಎಲ್ಲ ಸಾಧ್ಯವಿಲ್ಲ, ಕೆಳ ಹಂತದ ಸಿಬ್ಬಂದಿ ಸಹ ಸಹಕಾರ ನೀಡಿದ್ದರಿಂದ ಅಪರಾಧಿ ಕೃತ್ಯಗಳಲ್ಲಿ ತೊಡಗುವರಿಗೆ ಬುದ್ದಿ ಕಲಿಸಲು ಸಾಧ್ಯವಾಗಲಿದೆ. ಯಾವುದೇ ಸಂದರ್ಭದಲ್ಲಿ ನಮ್ಮ ಮೇಲೆ ಒತ್ತಡ ಹಾಕದೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಶಾಸಕ ಶ್ರೀನಿವಾಸ ಮಾನೆ ಸದಾ ಪ್ರೇರೇಪಿಸಿದ್ದಾರೆ ಎಂದು ನೆನಪಿಸಿಕೊಂಡರು.
ನ್ಯಾಯವಾದಿ ಸೋಮಶೇಖರ ಕೋತಂಬರಿ,ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಬಿ.ಕಲಾಲ, ಯಲ್ಲಪ್ಪ ಕಿತ್ತೂರ, ಜೆಡಿಎಸ್ ಅಧ್ಯಕ್ಷ ಆರ್.ಬಿ.ಪಾಟೀಲ, ಅನಿತಾ ಡಿಸೋಜಾ, ರಾಜೂ ಗೌಳಿ ಮಾತನಾಡಿದರು. ಗುರುರಾಜ ನಿಂಗೋಜಿ, ಆದರ್ಶ ಶೆಟ್ಟಿ, ಎಸ್.ಅಮರೇಂದ್ರ, ಜಾಫರಸಾಬ ಖೇಣಿ, ಮಂಜಣ್ಣ ನಾಗಜ್ಜನವರ, ಕೆ.ಟಿ.ಕಲಗೌಡ್ರ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಜಣ್ಣ ಸಿಂಧೂರ, ರವಿ ದೇಶಪಾಂಡೆ, ರಾಜಕುಮಾರ ಶಿರಪಂತಿ, ಅರುಣ ಕಿತ್ತೂರ, ಮುನ್ನಾ ಬೇಗ್, ಚಂದ್ರು ಮಲಗುಂದ, ಕೃಷ್ಣ ಬಾಗಲೆ ಇದ್ದರು. ನಿಖಿತಾ ಮಾಳಗಿ ಪ್ರಾರ್ಥಿಸಿದರು. ಮಾಲತೇಶ ಹುಡೇದ ಸ್ವಾಗತಿಸಿದರು.ಮಹೇಶ ಸಾತಪತಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 