ಪತ್ರಕರ್ತರ ಪ್ರೀತಿಪೂರ್ವಕ ಪ್ರಶ್ನೆಗೆ ನನ್ನ ಸಹಮತವಿದೆ: ಸಚಿವ ಆನಂದಸಿಂಗ್

ಬಳ್ಳಾರಿ14 : ಪ್ರತಿಯೊಬ್ಬ ಪತ್ರಕರ್ತರಿಗೂ ಪ್ರಶ್ನಿಸುವ ಹಕ್ಕಿದೆ. ಆದರೆ, ಆ ಪ್ರಶ್ನೆಯು ಪ್ರೀತಿಪೂರ್ವಕ ಆಗಿರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸಲಹೆ ನೀಡಿದರು.

        ಬಳ್ಳಾರಿಯ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಕೋವಿಡ್-19 ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತದ ವರ್ತನೆಯ ವಿರುದ್ಧ ಪತ್ರಕರ್ತರು ಧ್ವನಿ ಎತ್ತಿದಾಗ ಈ ಮೇಲಿನ ಧಾಟಿಯಲ್ಲೇ ಉತ್ತರ ಕೊಟ್ಟರು. ಪತ್ರಕರ್ತರಿಗೆ ಪ್ರಶ್ನಿಸುವ ಹಕ್ಕಿದೆ. ಆದರೆ, ಅದು ಪ್ರೀತಿ ಪೂರ್ವಕವಾದ ಪ್ರಶ್ನೆಯಾಗಿರಬೇಕು. ಜಿಲ್ಲಾಡಳಿತ ಮತ್ತು ಮಾಧ್ಯಮದವರ ನಡುವಿನ ಸೇತುವೆಯಾಗಿ ನಾನು ಕಾರ್ಯನಿರ್ವಹಿಸುವೆ. ಸಮಸ್ಯೆಗಳಿವೆ. ಇಲ್ಲ ಅಂತಾ ನಾನು ಹೇಳೋಕೆ ಹೋಗಲ್ಲ. ನಮ್ಮಲ್ಲಿ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಯಾರೆಂಬುದೇ ಗೊತ್ತಿಲ್ಲ ಅಂತಾ ಅಮಾಯಕರೂ ಇದ್ದಾರೆ. 

     ಕೊಪ್ಪಳ ಜಿಲ್ಲೆಯ ಹೂಕೋಸು ಬೆಳೆದ ರೈತನೊಬ್ಬ ನನಗೆ ಕರೆಮಾಡಿ, ನಾನು ಹೂಕೋಸು ಬೆಳೆದಿರುವೆ. ಯಾವ ಮಾಕರ್ೆಟ್ಗೆ ತೆಗೆದುಕೊಂಡ ಹೋಗ್ಬೇಕು ಅಂತಾ ಕೇಳಿದಾ ಆತ. ನಾನು ಸಾವಧಾನವಾಗಿ ಆತನಿಗೆ ಕೇಳ್ದೆ. ಯಾವ ಊರು? ನಿಮ್ಮ ಊರಿನ ಶಾಸಕರು ಯಾರು? ಅಂತಾ ನಾನು ಆತನಿಗೆ ಕೇಳಿದೆ. ಅದೆಲ್ಲ ಗೊತ್ತಿಲ್ಲ. ನಿಮ್ಮ ನಂಬರ್ ಟಿವಿ ಪರದೆಯ ಮೇಲೆ ಬರುತ್ತಿತ್ತು. ಅದಕ್ಕೆ ಕರೆಮಾಡ್ದೆ ಅಂತಾ ಅಮಾಯಕ ರೈತರು ಇದ್ದಾರೆ ನಮ್ಮಲ್ಲಿ ಎಂದರು ಸಚಿವ ಆನಂದಸಿಂಗ್. 

    ಸುರಕ್ಷತೆಯ ದೃಷ್ಟಿಯಿಂದ ನಿರ್ಬಂಧ ಹೇರಿರುವೆ : ಕೊರೊನಾ ಸೋಂಕಿನ ಭೀತಿಯಿಂದ ಜಿಲ್ಲಾಡಳಿತ ಕೈಗೊಳ್ಳುವ ಕೋವಿಡ್-19ರ ಸಭೆಗಳಿಗೆ ಮಾಧ್ಯಮದವರನ್ನ ಹೊರಗಿಟ್ಟಿದ್ದೇವೆ. ಅದು ನಿಮ್ಮ-ನಮ್ಮಗಳ ಸುರಕ್ಷತೆಯ ದೃಷ್ಟಿಯಿಂದಾಗಿ ಹೊರಗಿಟ್ಟೀವಿ. ಹೊರತುಪಡಿಸಿ ಅನ್ಯ ದೃಷ್ಟಿಯಿಂದಲ್ಲ. ಅದಕ್ಕೆ ಮಾಧ್ಯಮದವರೂ ಸ್ಪಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.