ಪೊಲೀಸ್ ಹುತಾತ್ಮರ ದಿನಾಚರಣೆ: ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಣೆ

ಪೋಲಿಸ್ ಹುತಾತ್ಮರ ದಿನಾಚರಣೆ
ಪೊಲೀಸ್ ಹುತಾತ್ಮರ ದಿನಾಚರಣೆ: ಹುತಾತ್ಮರ  ಸ್ಮಾರಕಕ್ಕೆ ಪುಷ್ಪಗುಚ್ಛ   ಅರ್ಪಣೆ 

ಕಾರವಾರ :  ಪೊಲೀಸ್ ಕವಾಯತು  ಮೈದಾನದಲ್ಲಿ ಬುಧವಾರ ಪೊಲೀಸ್ ಹುತಾತ್ಮರ ದಿನದ ಅಂಗವಾಗಿ ಜಿಲ್ಲಾ ನ್ಯಾಯಾಧೀಶೆ ವಿಪುಲಾ.  ಎಂ. ಬಿ. ಪೂಜಾರ, ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛವಿಟ್ಟು ಗೌರವ ಸಲ್ಲಿಸಿದರು. 
ಜಿಲ್ಲಾ  ಪೊಲೀಸ್ ಇಲಾಖೆ ವತಿಯಿಂದ  ಹಮ್ಮಿಕೊಂಡ ಪೊಲೀಸ್  ಹುತಾತ್ಮರ  ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ  ಡಾ.  ಹರೀಶಕುಮಾರ್ ,   ಜಿಲ್ಲಾ  ಪಂಚಾಯತ್  ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ ಎಂ.  ರೋಷನ್,  ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್  ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ  ಪೊಲೀಸ್ ಸ್ಮಾರಕಕ್ಕೆ  ಹೂ ಗುಚ್ಛ ಅರ್ಪಿಸಿ  ಗೌರವ ನಮನ ಸಲ್ಲಿಸಿದರು.  
 ಇದೆ  ಸಂದರ್ಭದಲ್ಲಿ  ಶಸಸ್ತ್ರ ಪೊಲೀಸ ಪಡೆ
ಯಿಂದ ಶಸಸ್ತ್ರ ಕವಾಯತು ನಡೆಸಿ,  ಎರಡು ನಿಮಿಷಗಳ ಕಾಲ ಮೌನ ಆಚರಿಸಿ, ಗಾಳಿಯಲ್ಲಿ  ಮೂರು ಸುತ್ತು ಗುಂಡು ಹಾರಿಸಿ, 
ರಾಷ್ಟ್ರಗೀತೆ  ಹಾಡಿ  ಗೌರವ  ಸಲ್ಲಿಸಲಾಯಿತು . 
 ಸಂಜೆ  ರವೀಂದ್ರನಾಥ  ಟ್ಯಾಗೋರ ಕಡಲ ತೀರದಲ್ಲಿ  ಜಿಲ್ಲಾ  ಸಶಸ್ತ್ರ  ಮೀಸಲು ಪಡೆ ಬ್ಯಾಂಡ್ ಸಿಬ್ಬಂದಿಯವರಿಂದ ಬ್ಯಾಂಡ್ ಸಂಗೀತ  ಪ್ರದರ್ಶನ ನೀಡಿ,   ಪೊಲೀಸ್  ಹುತಾತ್ಮರಿಗೆ  ಗೌರವ ನೀಡಿದರು.