ಧಾರ್ಮಿಕ ಭಾವನೆಗೆ ಧಕ್ಕೆ ; ಬ್ರಾಹ್ಮಣ ಸಮಾಜ ಖಂಡನೆ

Hurting religious sentiments; Brahmin community condemns

ಧಾರ್ಮಿಕ ಭಾವನೆಗೆ ಧಕ್ಕೆ ; ಬ್ರಾಹ್ಮಣ ಸಮಾಜ ಖಂಡನೆ  

  ಹೂವಿನಹಡಗಲಿ 19 :  ’ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲುಹೋಗಿದ್ದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದಕ್ಕೆ ನೋವುಂಟು ಮಾಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು. ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ತಾಲೂಕು  ಬ್ರಾಹ್ಮಣ ಸಮಾಜದಿಂದ ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ಅವರು, ’ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಪವಿತ್ರ ಜನಿವಾರ ತೆಗೆಯಲು ಹೇಳಿರುವುದು ನೋವಿನ ಸಂಗತಿ.  

ಇದು ವಿದ್ಯಾರ್ಥಿಗಳ ಮನಸ್ಸಿಗೆ ಆಘಾತ ತಂದಿದೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿ ಸರ್ಕಾರ ವನ್ನು ಒತ್ತಾಯಿಸಿದ್ದಾರೆ. ಸಮಾಜದ ತಾಲ್ಲೂಕು ಉಪಾಧ್ಯಕ್ಷ ಅಶ್ವಥ್ ನಾರಾಯಣ. ಹನುಮಂತರಾವ್‌.ವೇಣುಗೋಪಾಲ ಆಚಾರ್ಯ. ಗುರುರಾಜ್‌.ಎಸ್‌. ರಾಘುನಂದಾನ. ಜಿ.ಕೇಶವ.ವಸಂತರಾವ್‌. ನೀಲಕಂಠ.ಜೋಷಿ.   ಧರ. ಭರತ್‌. ಹರೀಶ್‌. ರಾಘವೇಂದ್ರ ರಾವ್‌.ರಂಗ ರವ್‌. ವೀಣಭಟ್ಟ್‌. ಮೇಘಾನಾ.ರಾಧ.