ಬಹಾಮಾಸ್ ನಲ್ಲಿ ಚಂಡಮಾರುತ: ಮೃತರ ಸಂಖ್ಯೆ 30ಕ್ಕೆ ಏರಿಕೆ

ಮಾಸ್ಕೋ, ಸೆಪ್ಟೆಂಬರ್ 6:    ಬಹಾಮಾಸ್ ನಲ್ಲಿ ಡೋರಿಯನ್ ಎಂಬ ಚಂಡಮಾರುತದಿಂದ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಜೊತೆಗೆ ಹೆಚ್ಚಿನ ಆಸ್ತಿಪಾಸ್ತಿಗೆ ನಷ್ಟವಾಗಿದೆ ಎಂದು ಪ್ರಧಾನಿ ಹಬಟರ್್ ಮಿನ್ನಿಸ್ ಹೇಳಿದ್ದಾರೆ.  ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದು ಅವರ ಪ್ರಕಾರ  ಸಾವಿನ ಸಂಖ್ಯೆ 30 ದಾಟಿದೆ ಎಂದು ಅವರು ಗುರುವಾರ ಸಿಎನ್ಎನ್ ಸುದ್ದಿವಾಹಿನಿಗೆ ತಿಳಿಸಿ, ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯೂ ಇದೆ ಎಂದು ಅವರು ಹೇಳಿದರು.   ದ್ವೀಪ ರಾಷ್ಟ್ರದ ಒಂದು ಸಣ್ಣ ಭಾಗದಲ್ಲಿ ಮಾತ್ರ ಚಂಡಮಾರುತ ಭೂಕುಸಿತವನ್ನು ಉಂಟುಮಾಡಿ,  ಹೆಚ್ಚು ಹಾನಿ ಮಾಡಿದೆ ಅಬಾಕೋ ದ್ವೀಪಗಳಲ್ಲಿನ 80 ಜನರನ್ನು ರಕ್ಷಿಸಿ, ಬೇರಡೆಗೆ   ಸ್ಥಳಾಂತರಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂಡಮಾರುತವು ವಾರಾಂತ್ಯದಲ್ಲಿ ಬಹಾಮಾಸ್ ತಲುಪಿ  ಎರಡು ದಿನಗಳಿಂದ ದ್ವೀಪ ರಾಷ್ಟ್ವವನ್ನು ತಲ್ಲಣಗೊಳಿಸಿದೆ. ಅಂತಾರಾಷ್ಟ್ರೀಯ ರೆಡ್ಕ್ರಾಸ್ನ ಪ್ರಕಾರ, ಚಂಡಮಾರುತದಿಂದ ಸುಮಾರು 13,ಸಾವಿರ ಮನೆಗಳು ಹಾನಿಗೆ ಒಳಗಾಗಿವೆ ಜೊತೆಗೆ ಭಾರಿ ಪ್ರಮಾಣದ ಆಸ್ತಿಪಾಸ್ತಿಗೂ   ಹಾನಿಯಾಗಿದೆ ಎಂದೂ ವರದಿಯಾಗಿದೆ.