ಬೀಜಿಂಗ್, ಆ 10 ಚಂಡಮಾರುತ ಲಿಕಿಮಾ ಶನಿವಾರ ಚೀನಾದ ಪೂರ್ವ ಪ್ರಾಂತ್ಯದ ವೆಂಲಿಂಗ್ ಅಪ್ಪಳಿಸುವ ಮುನ್ನವೇ ಸುಮಾರು ಹತ್ತು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಗಂಟೆಗೆ 187 ಕಿಲೋಮೀಟರ್ ವೇಗದಲ್ಲಿ ಬೀಸಿರುವ ಪ್ರಬಲ ಚಂಡಮಾರುತದಿಂದಾಗಿ ಅನ್ಹುಯಿ, ಫುಜಿಯಾನ್, ಜಿಯಾಂಗ್ಸು ಮತ್ತು ಜೇಜಿಯಾಂಗ್ ಗಳಲ್ಲಿ ಭಾರೀ ಮಳೆಯಾಗಲಿದೆ.
ಶುಕ್ರಮಾರ ಮಧ್ಯಾಹ್ನ ತುತರ್ು ಎಚ್ಚರಿಕೆ ನೀಡಿ ಸುಮಾರು 7 ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು. ಪ್ರಾಂತ್ಯದಲ್ಲಿ ದೋಣಿ ಸಂಚಾರ, ವಿಮಾನ ಹಾರಾಟ, ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ಸುಮಾರು ಒಂದು ಸಾವಿರ ಸಿಬ್ಬಂದಿ, 150 ಅಗ್ನಿಶಾಮಕ ವಾಹನ, 153 ದೋಣಿಗಳೊಂದಿಗೆ ಸ್ಥಳೀಯ ಆಡಳಿತ ಪರಿಹಾರ ಕಾರ್ಯಕ್ಕೆ ಸಜ್ಜಾಗಿದೆ.
ಶನಿವಾರ ಬೆಳಗಿನ ವೇಳೆಗೆ ಸುಮಾರು ಎರಡೂವರೆ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ,
ಚಂಡಮಾರುತದಿಂದಾಗಿ ಸುಮಾರು ಮೂರು ಸಾವಿರ ಮರಗಳು ಬುಡಮೇಲಾಗಿವೆ, 100 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. 80 ವಿದ್ಯುತ್ ಕಂಬಗಳನ್ನು ಮತ್ತೆ ನಿಲ್ಲಿಸಲಾಗಿದೆ.
ಲಿಕಿಮಾ ಗಂಟೆಗೆ 15 ಕಿಲೋಮೀಟರ್ ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿದ್ದು ನಂತರ ಪಶ್ಚಿಮ ದಿಕ್ಕಿಗೆ ಬೀಸಲಿದೆ ಎಂದು ಹೇಳಲಾಗಿದೆ.