ಜಪಾನ್ ನಲ್ಲಿ ಚಂಡಮಾರುತ ಹಗಿಬಿಸ್ : ಪನಾಮಾ ನೌಕೆ ಮುಳುಗಿ 9 ಜನ ಕಣ್ಮರೆ

ಟೋಕಿಯೋ, ಅ 13:   ಜಪಾನ್ ನಲ್ಲಿ ಚಂಡಮಾರುತ ಹಗಿಬಿಸ್ ಗೆ ಗಲ್ಫ್ ಆಫ್ ಟೋಕ್ಯೋದಲ್ಲಿ ಪನಾಮಾ ದೋಣಿ ಮುಳುಗಿ 9 ಜನರು ಕಣ್ಮರೆಯಾಗಿದ್ದಾರೆ.      

  ಮೂವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಮೂವರು ಮ್ಯಾನ್ಮಾರ್ ನಾಗರಿಕರು, ಏಳು ಮಂದಿ ಚೀನಾದವರು ಮತ್ತು ಇಬ್ಬರು ವಿಯೆಟ್ನಾಂ ಗೆ ಸೇರಿದವರು ಇದರಲ್ಲಿ ಪಯಣಿಸುತ್ತಿದ್ದರು ಎನ್ನಲಾಗಿದೆ.     

  ಅಲ್ಲದೇ ಈ ಚಂಡಮಾರುತಕ್ಕೆ 8 ಜನರು ಬಲಿಯಾಗಿದ್ದು ಕನಿಷ್ಠ 17 ಜನರು ಕಣ್ಮರೆಯಾಗಿದ್ದಾರೆ.     

  ನೂರಾರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.    

  ಕನಿಷ್ಠ ಐವರು ಮೃತಪಟ್ಟು, 11 ಜನರು ಕಣ್ಮರೆಯಾಗಿದ್ದು ಎಂದು ಈ ಹಿಂದಿನ ವರದಿ ತಿಳಿಸಿತ್ತು.    

  ಚಂಡಮಾರುತದ ಕಾರಣ ಸ್ಥಳಾಂತರಗೊಳ್ಳುವಂತೆ ಲಕ್ಷಾಂತರ ಜನರಿಗೆ ಅಲ್ಲಿನ ಆಡಳಿತ ಸೂಚನೆ ನೀಡಿದೆ.