ಟೋಕಿಯೋ, ಅ 12 ಚಂಡಮಾರುತ ಹಗಿಬಿಸ್ ಬೀಸಲಿರುವ ಹಿನ್ನೆಲೆಯಲ್ಲಿ ಜಪಾನ್ ವಿಮಾನಯಾನ ಸಂಸ್ಥೆ 1929 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದುಪಡಿಸಿದೆ. ಜೆ ಎ ಎಲ್ ಮತ್ತು ಎ ಎನ್ ಎ ಸೇರಿದಂತೆ 13 ವಿಮಾನಯಾನ ಸಂಸ್ಥೆಗಳು 1667 ದೇಶೀಯ ಹಾಗೂ 262 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಿವೆ. ಗ್ರೇಟರ್ ಟೋಕಿಯೋ ಪ್ರದೇಶ ಸೇರಿದಂತೆ ಜಪಾನ್ ನ ಪೆಸಿಫಿಕ್ ಕರಾವಳಿಯಲ್ಲಿ ಶನಿವಾರ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಇದೀಗ ಜಪಾನ್ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬಿರುಗಾಳಿ ಬೀಸಿದೆ. ಪ್ರತೀಕೂಲ ಹವಾಮಾನದ ಕಾರಣ ಸುಮಾರು 45 ಸಾವಿರಕ್ಕೂ ಹೆಚ್ಚು ಜನರು ವಿದ್ಯುತ್ ಸಮಸ್ಯೆ ಎದುರಿಸಿದ್ದಾರೆ. ಶನಿವಾರ ರಸ್ತೆ ಮತ್ತು ರೈಲು ಸಂಚಾರ ರದ್ದುಪಡಿಸುವುದಾಗಿ ಅಲ್ಲಿನ ಪ್ರಾಧಿಕಾರ ತಿಳಿಸಿದೆ.ಇಡಾ ಚಂಡಮಾರುತಕ್ಕಿಂತ ಹಗಿಬಿಸ್ ಚಂಡಮಾರುತ ಪ್ರಬಲವಾಗಿದೆ ಎಂದು ಹವಾಮಾನ ಶಾಸ್ತ್ರಜ್ಞರು ಹೇಳಿದ್ದರು.1958 ರಲ್ಲಿ ಬೀಸಿದ ಇಡಾ ಚಂಡಮಾರುತ 1269 ಜನರನ್ನು ಬಲಿಪಡೆದಿತ್ತು.