ಬಹಮಾಸ್ನಲ್ಲಿ ಡೋರಿಯನ್ ಚಂಡಮಾರುತ ಅಬ್ಬರ: ಸಾವಿನ ಸಂಖ್ಯೆ 43ಕ್ಕೆ ಏರಿಕೆ

 ಮಾಸ್ಕೋ, ಸೆ 7:  ಬಹಮಾಸ್ನಲ್ಲಿ ಭೀಕರ ಡೋರಿಯನ್ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 43 ಜನರಿಗೆ ಏರಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಧಾನಿ ಹ್ಯೂಬರ್ಟ್ ಮಿನ್ನಿಸ್ ಕಚೇರಿ ತಿಳಿಸಿದೆ.  ಚಂಡಮಾರುತದಿಂದ 30 ಜನರು ಸಾವನ್ನಪ್ಪಿದ್ದಾರೆ ಎಂದು ಮಿನ್ನಿಸ್ ಗುರುವಾರ ಹೇಳಿದ್ದರು.   'ಇದುವರೆಗೆ 43ಮಂದಿ ಮೃತಪಟ್ಟಿರುವುದು ಅಧಿಕೃತವಾಗಿ ತಿಳಿದುಬಂದಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.  ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪ್ರಧಾನ ಮಂತ್ರಿ ವಕ್ತಾರ ಎರಿಕಾ ವೆಲ್ಸ್ ಕಾಕ್ಸ್ ಶುಕ್ರವಾರ ತಿಳಿಸಿರುವುದಾಗಿ ಎನ್ಬಿಸಿ ನ್ಯೂಸ್ ವರದಿ ಮಾಡಿದೆ.   ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.  ಅಬಾಕೊ ಮತ್ತು ಗ್ರ್ಯಾಂಡ್ ಬಹಾಮಾ ದ್ವೀಪಗಳಲ್ಲಿ ಸುಮಾರು 70,000 ಸಂತ್ರಸ್ತರಿಗೆ ತುರ್ತು ನೆರವಿನ  ಅವಶ್ಯಕತೆಯಿದೆ.  ಕಳೆದ ವಾರಾಂತ್ಯದಲ್ಲಿ ಚಂಡಮಾರುತ ಬಹಮಾಸ್ ದ್ವೀಪವನ್ನು ಅಪ್ಪಳಿಸಿತ್ತು.  ಎರಡು ದಿನಗಳಿಂದ ದ್ವೀಪ ರಾಷ್ಟ್ರದ ಉತ್ತರ ಭಾಗವನ್ನು ಭೀಕರ ಚಂಡಮಾರುತ ಹಾನಿ ಮಾಡಿದೆ.  ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆ ಹೇಳಿರುವಂತೆ, ಚಂಡಮಾರುತದಿಂದ ಸುಮಾರು 13,000 ಮನೆಗಳು ಹಾನಿಗೊಂಡಿವೆ ಇಲ್ಲ ನಾಶವಾಗಿವೆ. ಅಬಾಕೋಸ್ ಮತ್ತು ಗ್ರ್ಯಾಂಡ್ ಬಹಮಾದಲ್ಲಿ ಹೆಚ್ಚು ಸಾವು-ನೋವು ಮತ್ತು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.