ಧಾರವಾಡ 22: ದಿ. ಎಂ.ಡಿ. ಗೋಗೇರಿಯವರ ಸಾಹಿತ್ಯದಲ್ಲಿ ಹಾಸ್ಯವೇ ಪ್ರಧಾನ ಅಂಶ. ತಮ್ಮ ನವಿರಾದ ಹಾಸ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಅವರ ಸಾಹಿತ್ಯದಲ್ಲಿದೆ ಎಂದು ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಡಾ.ಬಸು ಬೇವಿನಗಿಡದ ಅಭಿಪ್ರಾಯ ಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಡಿ.ಗೋಗೇರಿದತ್ತಿ ಅಂಗವಾಗಿ ಆಯೋಜಿಸಿದ್ದ ‘ಎಂ. ಡಿ. ಗೋಗೇರಿಯವರ ಬದುಕು-ಬರಹ ಅವಲೋಕನ ಹಾಗೂ ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ “ಗೋಗೇರಿಯವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು” ಕುರಿತುಉಪನ್ಯಾಸ ನೀಡಿದರು.
ಎಂ.ಡಿ. ಗೋಗೇರಿಅವರು ಬರೆದ ‘ಚುನಾವಣೆಗೆ ನಿಂತ ನಮ್ಮಕಡೆಮನಿ ಹನಮಂತ...’ ಎಂಬ ಕವನವು ನಾಡಿನಾದ್ಯಂತ ಸಾಹಿತ್ಯಾಸಕ್ತರ ಮನೆ ಮನದಲ್ಲಿಇನ್ನೂಜೀವಂತವಾಗಿದೆ. ಮಾನವೀಯ ಮೌಲ್ಯಗಳಾದ ಸರ್ವಧರ್ಮ ಸಮಾನತೆ, ಸೌಹಾರ್ಧತೆ, ಸರ್ವರ ಹಿತರಕ್ಷಣೆ, ಪರೋಪಕಾರ, ನಿರಾಡಂಬರತೆ ಮುಂತಾದಜೀವನ ಮೌಲ್ಯಗಳನ್ನು ಜನಮಾನಸದಲ್ಲಿತಮ್ಮ ಸಾಹಿತ್ಯದ ಮೂಲಕ ಬಿತ್ತಿದರು. ಇವು ಬರಿ ಅವರ ಉಪದೇಶಗಳಾಗಿರಲಿಲ್ಲ ಹಾಗೆ ನಡೆದು ತೋರಿಸಿದರು ಎಂದು ಹೇಳಿದರು.
ಸಾಹಿತಿ ಎ.ಎ. ದರ್ಗಾ ‘ಎಂ.ಡಿ.ಗೋಗೇರಿಅವರ ಸಾಹಿತ್ಯದಲ್ಲಿ ಹಾಸ್ಯ-ವಿಡಂಬಣೆ’ ಕುರಿತು ಮಾತನಾಡಿ, ಎಂ.ಡಿ. ಗೋಗೇರಿಯವರ ಸಮಗ್ರ ಸಾಹಿತ್ಯದಲ್ಲಿ ಪ್ರಾಸಬದ್ಧ ಪದ ಪದಪುಂಜಗಳದ್ದೇ ಪ್ರಧಾನ ವಿಷಯ.ಅವರ ವಿರುದ್ಧಾರ್ಥಕ ಪದಗಳಲ್ಲೂ ಮನೋಜ್ಞ ಹಾಸ್ಯವಿತ್ತು.ಸಮಾಜದಜ್ವಲಂತ ವಿಷಯಗಳನ್ನೇ ಹಾಸ್ಯದ ಮೂಲಕ ಸಮಾಜವನ್ನುತಿದ್ದುವಕಾರ್ಯ ಮಾಡಿದರುಎಂದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣಕುಂಟಿ ಮಾತನಾಡಿ, ಎಂ.ಡಿ. ಗೋಗೇರಿ ಸ್ವಸಾಮರ್ಥ್ಯದಿಂದಲೇ ಸಾಹಿತ್ಯದ ಸಾಧಕರಾಗಿದ್ದಾರೆ.ಅವರ ಸಾಹಿತ್ಯದತುಂಬಾಗ್ರಾಮೀಣ ಬದುಕಿನ ಸಮಗ್ರ ನೈಜಚಿತ್ರಣವಿದೆ.ನಾನು ಮಕ್ಕಳ ಸಾಹಿತಿಯಾಗಲುಅವರದ್ದೇ ಪ್ರೇರಣೆಎಂದು ಹೇಳಿದರು.
ದತ್ತಿದಾನಿ ಪರವಾಗಿ ತೌಶೀಫ್ ಗೋಗೇರಿ ಮಾತನಾಡಿದರು.ಕವಿಗೋಷ್ಠಿಯಲ್ಲಿ ಶಿವು ಬನ್ನೂರ, ಶಾಹೀನಬಾನು ಬಳ್ಳಾರಿ, ಅಕ್ಬರಲಿ ಸೋಲಾಪೂರ, ಶ್ರೀನಿವಾಸ ಪಾಟೀಲ, ಜಯಶ್ರೀ ಪಾಟೀಲ, ಸುಧಾಕಬ್ಬೂರ, ಅಶ್ಪಾಕ ಪೀರಜಾದೆ, ಲೈಲಾ. ಜಿ, ಮಧುಮತಿ ಸಣಕಲ್, ರಾಹುಲ್‌ಉಪ್ಪಾರ ಕವನ ವಾಚಿಸಿದರು.ಕವನ ವಾಚಿಸಿದ ಕವಿಗಳನ್ನು ಗೌರವಿಸಲಾಯಿತು.
ವೀರಣ್ಣ ಒಡ್ಡೀನ ಸ್ವಾಗತಿಸಿದರು, ಡಾ.ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು.ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀಶೈಲ ಹುದ್ದಾರ, ಡಾ.ಲಿಂಗರಾಜ ಅಂಗಡಿ, ಆನಂದ ಪಾಟೀಲ, ಜಿ. ಬಿ.ಸಜ್ಜನ, ಎಂ. ಜಿ. ಸುಬೇದಾರ, ಶಾಂತವೀರ ಬೆಟಗೇರಿ, ಹ.ಬಿ. ಸಂತೋಜಿ, ಆತ್ಮಾನಂದಗದ್ದಿಕೇರಿ, ಪರವೀನದರ್ಗಾ ಸೇರಿದಂತೆ ಶಹನಾಜ ಆರ್.ಗೋಗೇರಿ ಹಾಗೂ ಎಂ. ಡಿ. ಗೋಗೇರಿ ಪರಿವಾರದವರು ಇದ್ದರು.