ಜನರಿಗೆ ಸಾರ್ವಜನಿಕರಿಂದ ಮಾನವೀಯ ನಿಧಿ ಸಂಗ್ರಹಣೆ
Humanitarian fundraising from the public for the people
ಮುದ್ದೇಬಿಹಾಳ 19: ಪಂಜಾಬ್‌ನಲ್ಲಿ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 3.5 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಮಾನವಿಯ ಮೌಲ್ಯದಡಿಯಲ್ಲಿ ಪ್ರತಿಯೊಬ್ಬರು ದೇಣಿಗೆ ನೀಡಿ ಅಲ್ಪ ಆರ್ಥಿ ಸಹಾಯದಲ್ಲಿ ಎಲ್ಲ ಕೈಜೊಡಿಸಬೇಕು ಎಂದು ಮುಖಂಡ ಪಿಂಟು ಸಾಲಿಮನಿ ಹೇಳಿದರು.
ಪಟ್ಟಣದ ಇಂದಿರಾ ಸರ್ಕಲ್ ನಲ್ಲಿ ಹಮದರ್ದ ಸೋಸಿಯಲ್ ವೇಲ್ಫರ್ , ಟ್ರಸ್ಟ್ ಹಾಗೂ ಮುಸ್ಲಿಂ ಸಮಾಜದಿಂದ ಹಾಗೂ ಬೈತುಲ್ ಮಾಲ್ ಸಂಘಟನೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರವಾಹ ಪೀಡಿತ ಪಂಜಾಬ್ ಜನರಿಗೆ ಸಾರ್ವಜನಿಕರಿಂದ ಮಾನವೀಯ ನೀಧಿ ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು.
ಪ್ರಕೃತಿ ಯಾರ ಸೊತ್ತು ಅಲ್ಲ ನಮ್ಮ ಭಾಗದಲ್ಲಿಯೂ ಕೂಡ ಹಲವು ಬಾರಿ ಇಂತಹ ಪ್ರವಾಹಗಳನ್ನು ಎದುರಿಸಿದ ಘಟನೆಗಳು ನಮ್ಮ ಕಣ್ಣೆದುರಿಗಿವೆ. ಇಂತಹ ಸಂದರ್ಭದಲ್ಲಿ ಬೇರೆ ರಾಜ್ಯದವರು ಜಿಲ್ಲೆಯರುವ ನಮ್ಮಲ್ಲಿ ಜನರಿಗೆ ದೇಣಿಗೆ ಕೋಟ್ಟು ಹೊಟ್ಟೆಗೆ ಅನ್ನ, ಬಟ್ಟೆ ಹಾಗೂ ಇತರೇ ಅಗತ್ಯ ದಿನಸಿ ಕಿಟ್ ಗಳನ್ನು ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಈ ವೇಳೆ ಯಾರೂ ಕೂಡ ಆ ಜಾತಿ ಈ ಜಾತಿ ಎಂದು ನೋಡದೇ ಎಲ್ಲರೂ ಸಮಾನರು ಎನ್ನುವ ಭಾವನೆಯೊಂದಿಗೆ ನೆರೆ ರಾಜ್ಯವಾದ ಪಂಜಾಬ್ ನಲ್ಲಿ ಪ್ರವಾಹಗೊಂಡು ಸಾವಿರಾರು ಕುಟುಂಭಗಳು ಒಂದು ತುತ್ತಿಗೂ ಪರದಾಡುವಂತಾಗಿದೆ. ಸಧ್ಯ ಪ್ರವಾಹ ಪೀಡಿತ ಪಂಜಾಬ್ ನೋಡಲು ಹೃದಯ ಭಾರವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾನವಿಯತೆ ಮೇರೆಯಬೇಕಿದೆ ಈ ನಿಟ್ಟಿನಲ್ಲಿ ಪಟ್ಟಣದ ಮುಸ್ಲಂ ಸಮಾಜದಿಂದ ಪ್ರವಾಹ ಪೀಡಿತ ಜನರಿಗೆ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಜಾತ್ಯಾತೀತವಾಗಿ ಎಲ್ಲರೂ ದೇಣಿಗೆ ನೀಡಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿ ಪ್ರತಿಯೊಬ್ಬರು ಕೈಲಾದಷ್ಟು ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೋಳ್ಳುತ್ತೇನೆ ಜತೆಗೆ ಕುಟುಂಬದವರನ್ನು ಕಳೆದುಕೊಂಡವರಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ. ಪರಿಹಾರ ಕಾರ್ಯಗಳಿಗೆ ಕೈ ಜೋಡಿಸಿ. ಪಂಜಾಬ್‌ನಲ್ಲಿರುವ ಜನರಿಗೆ ಇದು ಕಠಿಣ ಸಮಯ. ಈ ಪ್ರತಿಕೂಲ ಪರಿಸ್ಥಿತಿ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಮುಖಂಡರಾದ ಜಬ್ಬಾರ ಗೊಲಂದಾಜ, ಯಾಶಿನ ಅತ್ತಾರ, ಯಾಶಿನ ಮುಲ್ಲಾ, ದಾದಾ ಎತ್ತಿಮನಿ, ಮುನ್ನಾ ಮಕಾನದಾರ, ರಫೀಕ ಮಕಾನದಾರ, ಇಶಾಕ್ಷಾ ಮಕಾನದಾರ, ಅಲ್ಲಾಭಕ್ಷ ನಾಯ್ಕೋಡಿ, ಶಬ್ಬೀರ ಕಲ್ಮೀನಿ, ಜಬ್ಬಾರ ಮಕಾನದಾರ, ಯೂಸೂಫ್ ನಾಯ್ಕೋಡಿ, ರಮಜಾನ್ ನದಾಫ್, ಹುಸೇನ್ ಮುಲ್ಲಾ, ಸಿಕಂದರ್ ಜಾನ್ವೇಕರ, ಶಬ್ಬೀರ ಸಂಕನಾಳ, ಯೂಸೂಫ್ ಮೂಲಿಮನಿ, ಎ ಕೆ ಮಕ್ತೇದಾರ, ಸುಲೇಮಾನ ಮಮದಾಪೂರ, ಫಾರೂಕ್ ಚೌಧರಿ, ಫಾರೂಖೆ ಮಮದಾಪೂರ, ತೌಶೀಫ್ ನಾಯ್ಕೋಡಿ,ಯಾಶಿನ್ ಸೋಟೆ, ಜುಬೇರ ಮೋಮಿನ್, ಸೋಮಪಿಯಾನ್ ಮೋಮಿನ್, ಸಿರಾಜ್ ಮೋಮಿನ್ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 