ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಅವಶ್ಯಕ : ಶ್ರೀಕಾಂತ ಪಾಟೀಲ್

ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಅವಶ್ಯಕ : ಶ್ರೀಕಾಂತ ಪಾಟೀಲ್     Human values ​​are essential for students: Srikanth Patil

ಗದಗ  24: ಮಗುವಿನ ಭವಿಷ್ಯ ಉಜ್ವಲವಾಗಲು ಪೋಷಕ, ಶಿಕ್ಷಕ, ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ತುಂಬಬೇಕಾದ ಅವಶ್ಯಕತೆ ಇದೆ ಎಂದು  ಆದಿಯೋಗಿ ಎಜ್ಯುಕೇಷನಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಇನ್ ಸೈಟ್ ಅಕಾಡೆಮಿ ಸಂಚಾಲಕರಾದ ಶ್ರೀಕಾಂತ ಪಾಟೀಲ್ ಹೇಳಿದರು.  

ಅವರು ರವಿವಾರ ಮೈಲಾರ​‍್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನ, ಆದಿಯೋಗಿ ಎಜ್ಯುಕೇಷನಲ್ ಟ್ರಸ್ಟ್‌ ನಿರ್ವಹಣೆಯ ಇನ್ ಸೈಟ್ ಅಕಾಡೆಮಿಯಿಂದ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಹಾಗೂ ಪಾಲಕರ ಚಿಂತನ ಮಂಥನದಲ್ಲಿ ಮಾತನಾಡಿದರು.  

ಪೋಷಕ, ಶಿಕ್ಷಕ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿದಾಗ ಮಾತ್ರ ಮಗುವಿನ ಭವಿಷ್ಯ ಉಜ್ವಲಗೊಳ್ಳುತ್ತದೆ. ಸಂಸ್ಕಾರಯುತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಬೆಳಸಬೇಕಿದೆ. ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣದ ಮೂಲಕ ಮಾತ್ರ ಅವರಲ್ಲಿ ಆದರ್ಶ ತುಂಬಲು ಸಾಧ್ಯ ಎಂದರು.  

ಇಂದಿನ ವಿದ್ಯಾರ್ಥಿಗಳಿಗೆ ಗುರಿನೇ ಇಲ್ಲ. ಆದರೆ ಪಾಲಕರಾದವರು ತಮ್ಮ ಮಕ್ಕಳಲ್ಲಿ ಭವಿಷ್ಯದ ಗುರಿಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಈ ಮೂಲಕ ಗುರಿಯ ಕಡೆಗೆ ಸಾಗಲು ಪ್ರೇರೇಪಿಸಬೇಕು. ಮಕ್ಕಳು ನಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ನಮ್ಮನ್ನು ಅನುಕರಿಸಿ ನಾವು ಮಾಡಿದಂತೆ ನಡೆಯುತ್ತಾರೆ. ಹೀಗಾಗಿ ಪಾಲಕರು ಹಾಗೂ ಶಿಕ್ಷಕರಾದ ನಾವುಗಳು ನಡೆದುಕೊಳ್ಳುವ ರೀತಿಯೂ ಕೂಡ ಮಕ್ಕಳ ಮೇಲೆ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದರು. ಆದಿಯೋಗಿ ಎಜ್ಯುಕೇಷನಲ್ ಟ್ರಸ್ಟ್‌ ನ ಕಾರ್ಯದರ್ಶಿ   ಪವನ್ ಕುಮಾರ್ ಮಾತನಾಡಿ, ಪಾಲಕರ ಸಹಕಾರವೇ ಶಿಕ್ಷಕರಿಗೆ ಉತ್ತೇಜನ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಸಹಭಾಗಿತ್ವ ಕೂಡ ಅತ್ಯವಶ್ಯಕವಾಗಿದೆ. ನಿಮ್ಮ ಮಕ್ಕಳು ಶಿಕ್ಷಣ ಕೇಂದ್ರಕ್ಕೆ ದಾಖಲು ಮಾಡಿದರೆ ಪಾಲಕರ ಜವಾಬ್ದಾರಿ ಮುಗಿಯಲಿಲ್ಲ, ಪಾಲಕರಾದವರು ಶಿಕ್ಷಕರು ಹಾಗೂ ಪಾಲಕರ ಸಂವಾದ, ಚರ್ಚೆ ಮುಖ್ಯವಾಗಿದೆ ಎಂದರು. ಈ ವೇಳೆ ಕಾಲೇಜಿನ ಪ್ರಾಚಾರ್ಯ ಶರತ್ ಕುಮಾರ್ ಸಿ.ಎಸ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ ಪದಾಧಿಕಾರಿಗಳೊಂದಿಗೆ ಪಾಲಕರು ಸಂವಾದ ನಡೆಸಿದರು. ಪ್ರಾಧ್ಯಾಪಕರಾದ ರಕ್ಷಿತಾ ಸೇರಿದಂತೆ ಪಾಲಕರು ಇದ್ದರು. ಅಶೋಕ ಚವ್ಹಾಣ್ ನಿರೂಪಿಸಿ, ವಂದಿಸಿದರು.