ಲೋಕದರ್ಶನವರದಿ
ಧಾರವಾಡ೦೭ : ಪ್ರತಿಯೊಬ್ಬ ಮನುಷ್ಯನಿಗೂ ಸಾಮಾಜಿಕ ಪರಿಸರದಲ್ಲಿ ಆತನ ಹುಟ್ಟಿನಿಂದ ನಿಸರ್ಗದತ್ತವಾಗಿ ಬರುವ ಹಕ್ಕುಗಳೆ ಮಾನವ ಹಕ್ಕುಗಳು. ಸಾಮಾಜಿಕ ಲೋಕದಲ್ಲಿ ಮನುಷ್ಯನಿಗೆ ವಿಭಿನ್ನವಾದ ಮತ್ತು ವಿಶೇಷವಾದ ಸಾಮಾಜಿಕ ಸ್ಥಾನ, ಮಾನ, ಘನತೆ, ಗೌರವ, ಸಮ್ಮಾನಗಳಂಥ ವಿಶೇಷ ಹಕ್ಕುಗಳು ಸಹಜವಾಗಿಯೆ ಇವೆ, ಇವುಗಳನ್ನೇ ಸರಳ ಭಾಷೆಯಲ್ಲಿ ಮಾನವ ಹಕ್ಕುಗಳೆಂದು ಕರೆಯಲಾಗುವುದು ಎಂದು ಖ್ಯಾತ ನ್ಯಾಯವಾದಿಗಳು ಹಾಗೂ ಗೌಹಾಟಿ, ಆಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರೊಫೆಸರ ಡಾ. ಲೋಹಿತ ನಾಯ್ಕರ ಅಭಿಪ್ರಾಯಪಟ್ಟರು.
ಕನರ್ಾಟಕ ವಿದ್ಯಾವರ್ಧಕ ಸಂಘವು ಎಂ. ಸಿ. ಬಂಡಿ ವಕೀಲರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ``ಮಾನವ ಹಕ್ಕುಗಳು : ಸ್ಥಿತಿ-ಗತಿ'' ವಿಷಯದ ಕುರಿತು ಅವರು ಮಾತನಾಡಿ, ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಸಾಮಾಜಿಕ ಮತ್ತು ಆಥರ್ಿಕ ವಿಕಸನದ ಜೊತೆಗೆ ಸಾಮಾಜಿಕ ನ್ಯಾಯ ಕೂಡ ಸಿಗಬೇಕು ಎನ್ನುವ ಕಾರಣಕ್ಕಾಗಿಯೇ ಈ ಮಾನವ ಹಕ್ಕುಗಳ ಆಂದೋಲನ ಆರಂಭವಾಗಿದೆ ಎಂದರು.
ಅಂದು ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆ ಮಾಡಿದ ಪರಿಣಾಮವಾಗಿ ಮಾನವ ಹಕ್ಕುಗಳ ಸಂರಕ್ಷಣೆ ಆಗಬೇಕೆಂಬ ಕೂಗು ಪ್ರಾರಂಭವಾಯಿತು ಎಂದು ಡಾ. ಲೋಹಿತ ನಾಯ್ಕರ ಮುಂದುವರೆದು ಮಾತನಾಡುತ್ತ ಹೇಳಿದರು.
ಡಾ. ಲೋಹಿತ ನಾಯ್ಕರ, ಕನರ್ಾಟಕದ ವಚನ ಚಳುವಳಿಯ ಸಾರವೂ ಕೂಡ ಮಾನವ ಹಕ್ಕುಗಳ ಸಂರಕ್ಷಣೆಯ ಕೂಗಿನ ಭಾಗವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಮನುಷ್ಯನನ್ನು ಹೇಗೆ ಗೌರವದಿಂದ ಕಾಣಬೇಕೆಂದು ಹೇಳುತ್ತಲೇ, ದಯವೇ ಧರ್ಮದ ಮೂಲ ಎಂಬ ಮಹಾಮಂತ್ರವನ್ನು ಶರಣ ಚಳುವಳಿ ಜಗತ್ತಿಗೆ ನೀಡಿದೆ ಎಂದು ಹೇಳಿದರು.
ಕನರ್ಾಟಕ ಉಚ್ಛನ್ಯಾಯಾಲಯದ ಹಿರಿಯ ಸರಕಾರಿ ವಕೀಲರು ಮತ್ತು ಕನರ್ಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷರೂ ಆದ ಸಿ. ಎಸ್. ಪಾಟೀಲ ಅವರು ಮಾತನಾಡಿ, ನಮ್ಮ ದೇಶ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಲ್ಲಿ ದೊಡ್ಡ ದೇಶವಾಗಿದ್ದು ಇಲ್ಲಿ ವೈವಿಧ್ಯಮಯ ಜನಾಂಗವಿದ್ದು, ಇಂದು ಮಾನವ ಹಕ್ಕುಗಳ ಉಲ್ಲಘಂನೆ ಆಗಲು ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಎಂ. ಸಿ. ಬಂಡಿ ವಕೀಲರು ಹಾಗೂ ಸಂಘದ ಕಾಯರ್ಾಧ್ಯಕ್ಷರಾದ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ಸ್ವಾಗತಿಸಿದರು. ಶ್ರಿವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಸಿ. ಎಸ್. ಪೊಲೀಸ ಪಾಟೀಲ ವಕೀಲರು ಶ್ರೀಯುತ ಎಂ. ಸಿ. ಬಂಡಿ ವಕೀಲರಿಗೆ ವಕೀಲ ವೃಂದದ ಪರವಾಗಿ ಜನ್ಮದಿನದ ಶುಭ ಹಾರೈಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ), ಗೌರವ ಉಪಾಧ್ಯಕ್ಷರಾದ ಬಿ. ಎಲ್. ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ, ಪೂಣರ್ಿಮಾ ಹೆಗಡೆ (ಉಡಿಕೇರಿ), ಪ್ರೊ. ಹರ್ಷ ಡಂಬಳ, ಎಂ. ಸುದರ್ಶನರಾಜ, ವೀರಣ್ಣ ಒಡ್ಡೀನ, ಶಂಕರಲಿಂಗ ಶಿವಳ್ಳಿ, ಬಿ. ಕೆ. ಹೊಂಗಲ, ರಾಘವೇಂದ್ರ ಕುಂದಗೋಳ, ಮಾಂತೇಶ ನರೇಗಲ್ಲ, ನಾಗಭೂಷಣ ಹಾಗೂ ಬಂಡಿ ವಕೀಲರ ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.