ತೆಂಗಿನ ಕಾಯಿಯಲ್ಲಿ ಮಾನವನ ಮುಖಾಕೃತಿ

ಧಾರವಾಡ, ಜು. 19 : ಸಸ್ಯ, ಲತೆ, ಕಾಯಿ, ಹೂವು, ಎಲೆ, ಶಿಲೆ, ಕಾಷ್ಠ ಮುಂತಾದವುಗಳ ಮೂಲಕ ನಡೆಯುವ ಅನೇಕ ವಿಸ್ಮಯಗಳಿಗೆ ನಿಸರ್ಗ ನಿರಂತರ ಸಾಕ್ಷಿಯಾಗುತ್ತದೆ. ಕೆಲವೊಮ್ಮೆ ಊಹೆಗೂ ನಿಲುಕದ ಅನೇಕ ಸಂಗತಿಗಳು ನಿಸರ್ಗದ ಮಡಿಲಲ್ಲಿ ಮೂಡಿನಿಂತು ಅಚ್ಚರಿ ಮೂಡಿಸುತ್ತವೆ. 

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ 'ಜೀವನ ಶಿಕ್ಷಣ' ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ಅವರ ಸ್ವಗ್ರಾಮ ಅಮ್ಮಿನಬಾವಿಯ ಮನೆಯ ಹಿತ್ತಲದಲ್ಲಿ ಬೆಳೆದ ತೆಂಗಿನ ಕಾಯಿಯಲ್ಲಿ ಮಾನವನ ಮುಖಾಕೃತಿ ಮೂಡಿರುವುದೂ ಅಚ್ಚರಿಯ ಸಂಗತಿಯಾಗಿದೆ. ಈ ತೆಂಗಿನಕಾಯಿಯನ್ನು ಸುಲಿಯುವ ಸಂದರ್ಭದಲ್ಲಿ ಅದನ್ನು ಪೂರ್ಣ ಸುಲಿದಾಗ ಈ ಮಾನವನ ಮುಖಾಕೃತಿ ಕಂಡು ಬಂದಿದೆ.