ಯುವಜನೋತ್ಸವ ಜನಪದ ಹಾಡಿನಲ್ಲಿ ಹುಲಕೋಟಿ ಕಾಲೇಜಿನ ತಂಡಕ್ಕೆ ದ್ವಿತಿಯ ಸ್ಥಾನ

 ಯುವಜನೋತ್ಸವ ಜನಪದ ಹಾಡಿನಲ್ಲಿ ಹುಲಕೋಟಿ ಕಾಲೇಜಿನ ತಂಡಕ್ಕೆ ದ್ವಿತಿಯ ಸ್ಥಾನ Hulakoti College team wins second place in Yuvajanotsava folk song competition

ಲೋಕದರ್ಶನ ವರದಿ 

ಯುವಜನೋತ್ಸವ ಜನಪದ ಹಾಡಿನಲ್ಲಿ ಹುಲಕೋಟಿ ಕಾಲೇಜಿನ ತಂಡಕ್ಕೆ ದ್ವಿತಿಯ ಸ್ಥಾನ 


ಗದಗ 26 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮ್ಹಾನ್ಸ್‌, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಲಾಯನ್ಸ್‌ ಶಿಕ್ಷಣ ಸಂಸ್ಥೆ, ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ-2025’ ಪ್ರಯುಕ್ತ ಆಯೋಜಿಸಿದ್ದ ‘ಜೀವನ ಕೌಶಲ್ಯ ತರಬೇತಿ ಮತ್ತು ಯುವ ಕಾರ್ಯಾಗಾರ’ದಲ್ಲಿ ಹುಲಕೋಟಿಯ ಕೆ.ಎಚ್‌. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ಜಾನಪದ ಹಾಡಿನ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದಿದೆ. ತಂಡದಲ್ಲಿ ರಂಜಿತಾ ಕಡಿಯವರ, ಭಾಗ್ಯಲಕ್ಷ್ಮಿ ಚಿಕ್ಕನವರ, ಉಮಾ ಮಾದರ, ಪೂಜಾ ಹಡಪದ, ಪೂಜಾ ಹೊಸಮನಿ, ವಿಜಯಲಕ್ಷ್ಮಿ ಶಿರುಂದ, ಲಕ್ಷ್ಮಿ ಹೊಸಳ್ಳಿ, ಗೌರಮ್ಮ ಹೊಸಳ್ಳಿ, ಪವಿತ್ರಾ ಹಡಪದ ಭಾಗವಹಿಸಿದ್ದರು. ವಿಜೇತ ತಂಡಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಂಶುಪಾಲೆ ಪ್ರೊ. ಸುಧಾ ಕೌಜಗೇರಿ, ಐಕ್ಯುಎಸಿ ಸಂಚಾಲಕ ಡಾ. ಜಿತೇಂದ್ರ ಜಹಾಗೀರದಾರ, ಸಾಂಸ್ಕೃತಿಕ ವಿಭಾಗದ ಸಂಚಾಲಕ ರಮೇಶ ಹುಲಕುಂದ, ಎನ್‌.ಎಸ್‌.ಎಸ್‌. ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಸೇರಿದಂತೆ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗ್ರಾಮದ ಗುರುಹಿರಿಯರು ಶುಭ ಹಾರೈಸಿದ್ದಾರೆ.