ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ಚುನಾವಣೆ: ಸ್ವಾಭಿಮಾನಿ ಪೆನಲ್‌ಗೆ ಗೆಲುವು: ಜಾರಕಿಹೊಳಿ ಕುಟುಂಬಕ್ಕೆ ಭಾರಿ ಮುಖಭಂಗ
Hukkeri Rural Electricity Cooperative Society elections: Swabhimani Panel wins: A huge embarrassment
ವರದಿ - ಎಂ.ಬಿ. ಘಸ್ತಿ
ಸಂಕೇಶ್ವರ: ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಜಿದ್ದಾ ಜಿದ್ದಿನ ಪ್ರತಿಷ್ಠೆಯ ಚುನಾವಣೆಯಲ್ಲಿ ಸ್ವಾಭಿಮಾನಿ ಪೆನಲ್‌ದ 15 ಅಭ್ಯರ್ಥಿಗಳು ಜಯ ಸಾಧಿಸುವ ಮೂಲಕ ಎ.ಬಿ. ಪಾಟೀಲ ಮತ್ತು ರಮೇಶ ಕತ್ತಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದಾರೆ.
ದೇಶದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ನಿಯಮಿತ ಹುಕ್ಕೇರಿ, ಇದರ ಆಡಳಿತ ಮಂಡಳಿಯ ಚುನಾವಣೆಯು ದಿನಾಂಕ 28 ರಂದು ನಡೆದು ದಿವಂಗತರಾದ ಅಪ್ಪಣಗೌಡಾ ಪಾಟೀಲ, ಬಸಗೌಡಾ ಅಪ್ಪಯ್ಯಗೌಡಾ ಪಾಟೀಲ, ವಿಶ್ವನಾಥ ಕತ್ತಿ ಮತ್ತು ಎಲ್.ಕೆ. ಖೋತ, ಉಮೇಶ ವಿಶ್ವನಾಥ ಕತ್ತಿ ಇವರು ವಿದ್ಯುತ ಸಹಕಾರಿ ಸಂಘದ ಏಳ್ಗೆಗಾಗಿ ಶ್ರಮ ವಹಿಸಿದ್ದರು. ಮಾಜಿ ಸಚಿವ ಎ.ಬಿ. ಪಾಟೀಲ ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿ ಹುಕ್ಕೇರಿ ಮತಕ್ಷೇತ್ರದ ಶಾಸಕ ನೀಖೀಲ ಉಮೇಶ ಕತ್ತಿ ಇವರ ಮಾರ್ಗದರ್ಶನದಲ್ಲಿ ಸ್ವಾಭಿಮಾನಿ ಪೆನಲ್‌ನಲ್ಲಿ 15 ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು, ಪ್ರತಿ ಸ್ಪರ್ಧೆಯಲ್ಲಿ ರಾಜ್ಯದ ಲೋಕಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅರಭಾಂವಿ ಕ್ಷೇತ್ರದ ಶಾಸಕ ಭಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ತಿನ ಸದಸ್ಯ ಲಖನ್ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರ ನೇತೃತ್ವದಲ್ಲಿ ಸಹಕಾರ ಮಹರ್ಷಿ ಅಪ್ಪಣಗೌಡಾ ಪಾಟೀಲ ಎಂಬ ಹೆಸರಿನ ಮೇಲೆ ಪೆನಲ್‌ನಲ್ಲಿ ಪ್ರತಿ ಸ್ಪರ್ಧಿಯಾಗಿ 15 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದರು. ಈ ಜಿದ್ದಾ ಜಿದ್ದಿಯ ಚುನಾವಣೆಯಲ್ಲಿ ಸ್ವಾಭಿಮಾನಿ ಪೆನಲ್‌ದ 15 ಅಭ್ಯರ್ಥಿಗಳು ವಿಜಯ ದಶಮಿಯ ಶುಭ ಮೂಹುರ್ತದಲ್ಲಿ ಚುನಾಯಿತರಾಗಿ ಎ.ಬಿ. ಪಾಟೀಲ ಮತ್ತು ರಮೇಶ ಕತ್ತಿ ಇವರ ಪನೆಲ್‌ವು ಚುನಾಯಿತಗೊಂಡು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ನಿಯಮಿತ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ಚಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚುನಾವಣೆಯು ಜಾರಕಿಹೊಳಿ ಕುಟುಂಬದ ಹಾಗೂ ಎ.ಬಿ. ಪಾಟೀಲ - ಕತ್ತಿ ಕುಟುಂಬವು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ತಂತ್ರ ಪ್ರತಿ ತಂತ್ರಗಳನ್ನು ರೂಪಿಸಿ ಪ್ರತಿಸ್ಪರ್ಧಿಯಾದ ಜಾರಕಿಹೊಳಿ ಇವರ ಪೆನಲ್ ಅಭ್ಯರ್ಥಿಗಳನ್ನು ಧೂಳಿಪಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದವರ ಹೆಸರುಗಳು ಇಂತಿವೆ, ಸಾಮಾನ್ಯ ಮತಕ್ಷೇತ್ರದಿಂದ ಲವ (ಪೃಥ್ವಿ) ರಮೇಶ ಕತ್ತಿ ಇವರು ಪಡೆದ ಮತಗಳು 21809 ಪಡೆದು 7803 ಲೀಡಮತಗಳಿಂದ ಗೆದ್ದಿದ್ದಾರೆ, ಬಸನಗೌಡಾ ಕಲಗೌಡಾ ಪಾಟಿಲ ಇವರು ಪಡೆದ ಮತಗಳು 20844 ಪಡೆದು 6737 ಲೀಡಮತಗಳಿಂದ ಗೆದ್ದಿದ್ದಾರೆ, ವಿನಯ (ಎ.ಬಿ. ಪುತ್ರ) ಅಪ್ಪಯ್ಯಗೌಡಾ ಪಾಟೀಲ ಇವರು ಪಡೆದ ಮತಗಳು 19925 ಪಡೆದು 5848 ಲೀಡಮತಗಳಿಂದ ಗೆದ್ದಿದ್ದಾರೆ, ಶಿವನಗೌಡಾ ಸತ್ಯಪ್ಪಾ ಮದವಾಲ ಇವರು ಪಡೆದ ಮತಗಳು 15538 ಪಡೆದು 4461 ಲೀಡಮತಗಳಿಂದ ಗೆದ್ದಿದ್ದಾರೆ, ಮಹಾವೀರ ವಸಂತ ನಿಲಜಗಿ ಇವರು ಪಡೆದ ಮತಗಳು 18583 ಪಡೆದು 4506 ಲೀಡಮತಗಳಿಂದ ಗೆದ್ದಿದ್ದಾರೆ, ಶಿವಾನಂದ (ನಂದು) ಶಿವಪುತ್ರ ಮುಡಸಿ ಇವರು ಪಡೆದ ಮತಗಳು 18719 ಪಡೆದು 4642 ಲೀಡಮತಗಳಿಂದ ಗೆದ್ದಿದ್ದಾರೆ, ಬಸವರಾಜ ಲಕ್ಷ್ಮಣ ಮುನ್ನೋಳಿ ಇವರು ಪಡೆದ ಮತಗಳು 18406 ಪಡೆದು 4329 ಲೀಡಮತಗಳಿಂದ ಗೆದ್ದಿದ್ದಾರೆ, ಕೆಂಪಣ್ಣಾ ಸಾತಪ್ಪಾ ವಾಸೇದಾರ ಇವರು ಪಡೆದ ಮತಗಳು 17873 ಪಡೆದು 3796 ಲೀಡಮತಗಳಿಂದ ಗೆದ್ದಿದ್ದಾರೆ, ಮಹಾದೇವ ಬಾಬು ಕ್ಷೀರಸಾಗರ ಇವರು ಪಡೆದ ಮತಗಳು 17393 ಪಡೆದು 3316 ಲೀಡಮತಗಳಿಂದ ಗೆದ್ದಿದ್ದಾರೆ, ಮಹಿಳಾ ಮೀಸಲು ಮತಕ್ಷೇತ್ರದಿಂದ ಮಹಬೂಬಿ ಗೌಸಆಜಂ ನಾಯಿಕವಾಡಿ ಇವರು ಪಡೆದ ಮತಗಳು 19863 ಪಡೆದು 6493 ಲೀಡಮತಗಳಿಂದ ಗೆದ್ದಿದ್ದಾರೆ, ಮಂಗಲ ಗುರುಸಿದ್ದಪ್ಪಾ ಮೂಡಲಗಿ ಇವರು ಪಡೆದ ಮತಗಳು 19468 ಪಡೆದು 6098 ಲೀಡಮತಗಳಿಂದ ಗೆದ್ದಿದ್ದಾರೆ, ಹಿಂದೂಳಿದ ವರ್ಗ (ಬ) ಭರಮಣ್ಣಾ ಸತ್ತೆಪ್ಪಾ ನಾಯಿಕ ಇವರು ಪಡೆದ ಮತಗಳು 18795 ಪಡೆದು 5486 ಲೀಡಮತಗಳಿಂದ ಗೆದ್ದಿದ್ದಾರೆ, ಹಿಂದೂಳಿದ ವರ್ಗ (ಅ) ಗಜಾನನ ನಿಂಗಪ್ಪಾ ಕ್ವಳ್ಳಿ ಇವರು ಪಡೆದ ಮತಗಳು 20427 ಪಡೆದು 12339 ಲೀಡಮತಗಳಿಂದ ಗೆದ್ದಿದ್ದಾರೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶ್ರೀಮಂತ ಗಂಗಪ್ಪಾ ಸನ್ನಾಯಿಕ ಇವರು ಪಡೆದ ಮತಗಳು 20250 ಪಡೆದು 7531 ಲೀಡಮತಗಳಿಂದ ಗೆದ್ದಿದ್ದಾರೆ, ಪರಿಶಿಷ್ಟ ಪಂಗಡ ಮೀಸಲು ಬಸವಣ್ಣಿ ಸಣ್ಣಪ್ಪಾ ಲಂಕೆಪ್ಪಗೋಳ ಇವರು ಪಡೆದ ಮತಗಳು 18262 ಪಡೆದು 3931 ಲೀಡಮತಗಳಿಂದ ಗೆದ್ದಿದ್ದಾರೆ, ಹೀಗೆ ಒಟ್ಟು 15 ಅಭ್ಯರ್ಥಿಗಳು ಹುಕ್ಕೇರಿ ತಾಲೂಕಿನಲ್ಲಿ ಗುಲಾಲನ್ನು ಎರಚಿ ಎಲ್ಲ ಕಾರ್ಯಕರ್ತರು ಮಧ್ಯ ರಾತ್ರಿ 2 ಗಂಟೆಯಿಂದ ಪಟಾಕಿ ಸಿಡಿಸಿ ಬೆಳಗಿನ 6 ಗಂಟೆಯವರೆಗೆ ಸಂಭ್ರಮಾಚರಣೆ ಮಾಡಿದರು. ರಾಷ್ಟ್ರದ ನಾಯಕರಲ್ಲಿ ಗುರುತಿಸಿಕೊಂಡಿರುವ ಮತ್ತು ರಾಜ್ಯದ 2028 ರಲ್ಲಿ ಮುಖ್ಯಮಂತ್ರಿ ತಾವೆ ಅಂತಾ ಹೇಳಿಕೊಂಡಿರುವ ಸತೀಶ ಜಾರಕಿಹೊಳಿ ಇವರಿಗೆ ಈ ಚುನಾವಣೆಯು ಭಾರಿ ಮುಖಭಂಗವಾಗಿದೆ. ಈ ಚುನಾವಣೆಯು ರಾಜ್ಯದ ನಾಯಕರ ಗಮನ ಸೆಳೆದಿತ್ತು.
ಕಳೆದ 30 ವರ್ಷಗಳಿಂದ ಕತ್ತಿ ಕುಟುಂಬದ ಹಿಡಿತದಲ್ಲಿತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘ. ಈ ಬಾರಿ ಚುನಾವಣೆ ಜರುಗಿ ನೇರಾನೇರ ಕತ್ತಿ, ಎ.ಬಿ.ಪಾಟೀಲ ಮತ್ತು ಜಾರಕಿಹೊಳಿ ಕುಟುಂಬದ ಮಧ್ಯೆ ಸ್ಪರ್ಧೆ ಏರ್ಪಟಟಿತ್ತು. ಪ್ರಜ್ಞಾವಂತ ಮತದಾರರು ತಮ್ಮ ಸ್ವಾಭಿಮಾನ ಮೆರೆದು, ತಮ್ಮ ಕ್ಷೇತ್ರದವರನ್ನೇ ಚುನಾಯಿಸಿ ಒಂದು ಇತಿಹಾಸವನ್ನು ಸ್ಥಾಪಿಸಿದ್ದಾರೆ. ಪೆನಲ್‌ನ 15 ಅಭ್ಯರ್ಥಿಗಳನ್ನು ಚುನಾಯಿಸಿದ್ದು ಒಂದು ಪವಾಡವನ್ನೇ ರಚಿಸಿದ್ದಾರೆ.
ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಸುನೀಲ ಅಣ್ಣಾಸಾಹೇಬ ಪರ್ವತರಾವ, ರೋಹನ ನೇಸರಿ, ಸುಭಾಷ ಕಾಸರಕರ, ಚಿದಾನಂದ ಕರ್ದನ್ನವರ, ಪಿಂಟೂ ಕೋಳಿ, ಎಂ.ಬಿ. ಘಸ್ತಿ, ಕುಮಾರ ಬಸ್ತವಾಡಿ, ಅಣ್ಣಪ್ಪಾ ಸಂಗಾಯಿ, ಗಂಗಾರಾಮ ಭೂಸಗೋಳ, ಪ್ರಕಾಶ ಇಟೇಕಾರ, ಹಾರುಣ ಮುಲ್ಲಾ ಹಾಗೂ ಎಲ್ಲ ಪುರಸಭೆಯ ಸದಸ್ಯರು ವ್ಯಾಪಕವಾಗಿ ಪ್ರಚಾರದಲ್ಲಿ ತೊಡಗಿದ್ದನ್ನು ಸ್ಮರಿಸಬಹುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 