ಬಿಜೆಪಿಗೆ ಭಾರೀ ಹಿನ್ನಡೆ: ಶಾಸಕ ವಿಶ್ವಾಸ ವೈದ್ಯ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ನೂರಾರು ಕಾರ್ಯಕರ್ತರ ಸೇರೆ​‍್ಡ

ಬಿಜೆಪಿಗೆ ಭಾರೀ ಹಿನ್ನಡೆ: ಶಾಸಕ ವಿಶ್ವಾಸ ವೈದ್ಯ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ನೂರಾರು ಕಾರ್ಯಕರ್ತರ ಸೇರೆ​‍್ಡ  Huge setback for BJP: Hundreds of workers join Congress led by MLA Vishwas Vaidya

ಸವದತ್ತಿ 24: ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದ್ದು, ವಿವಿಧ ಗ್ರಾಮಗಳ ನೂರಾರು ಸಕ್ರಿಯ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಶಾಸಕ ವಿಶ್ವಾಸ ವೈದ್ಯ ಹಾಗೂ ಮಾಜಿ ಶಾಸಕ ಆರಿ​‍್ವ. ಪಾಟೀಲ್ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು.  

ತಾಲೂಕಿನ ಸವದತ್ತಿ ನಗರ, ರೈನಾಪೂರ, ಬೆನಕಟ್ಟಿ, ಮುನವಳ್ಳಿ (ವಾರ್ಡ್‌ 9 ಮತ್ತು 10), ಆಲದಕಟ್ಟಿ ಹಾಗೂ ಮಬನೂರ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಯ ಧೋರಣೆಗಳಿಂದ ಬೇಸತ್ತು ಕಾಂಗ್ರೆಸ್ ಧ್ವಜ ಹಿಡಿದರು. ಪಕ್ಷಕ್ಕೆ ಸೇರಿದ ಎಲ್ಲ ಕಾರ್ಯಕರ್ತರನ್ನು ಶಾಸಕರು ಹಾಗೂ ಹಿರಿಯ ಮುಖಂಡರು ಕಾಂಗ್ರೆಸ್ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.  

ಇದೇ ವೇಳೆ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ  ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ನಮ್ಮ ಅವಧಿಯಲ್ಲಿ ಆಗುತ್ತಿರುವ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ದೃಶ್ಯವನ್ನು ನೋಡುತ್ತಿದ್ದರೆ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಬಂದ ಎಲ್ಲರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಹಾಗೂ ಗೌರವ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಬಳಿಕ ಮಾಜಿ ಶಾಸಕ ಆರಿ​‍್ವ. ಪಾಟೀಲ್ ಮಾತನಾಡಿ, ಹಿಂದೆ ದೇಶದಲ್ಲಿ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಇತ್ತು. ಇಂದು ಕಾಲಾನಂತರದಲ್ಲಿ ಹಲವಾರು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಹುಟ್ಟಿಕೊಂಡಿವೆ. ಆದರೆ, ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ, ಸಮಾಜದಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಬಯಸುವ ಏಕೈಕ ಸೌಹಾರ್ದತೆಯ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷದ ಮಾತ್ರ. ಕಾರ್ಯಕರ್ತರ ಸೇರೆ​‍್ಡಯಿಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ ಎಂದರು.  

ಪಕ್ಷ ಸೇರೆ​‍್ಡ ಹಿರಿಯ ಮುಖಂಡ ಪುಂಡಲೀಕ ಮೇಟಿ, ಮೈಲಾರ​‍್ಪ ಹೊಸಮನಿ, ವಿಠ್ಠಲ ಹುಲಕುಂದ, ವೆಂಕೆಣ್ಣ ಕಳಗುಡಿ, ಹಣಮಂತ ಹೊಸಮನಿ, ಫಕೀರ​‍್ಪ ಜಾವೂರ, ವಿಠ್ಠಲ ಗಲಬಿ, ಅಶೋಕ ಹುಲಕುಂದ, ರವಿ ಅಡಕೆ, ಶಿವಪ್ಪ ಪಟ್ಟಣಶೆಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.