ಫೆ, 28ಕ್ಕೆ ಬೃಹತ್ ಹಿಂದೂ ಸಮ್ಮೇಳನ
Huge Hindu conference on Feb 28th
ಹೂವಿನ ಹಡಗಲಿ 23: ಹಿಂದೂ ಸಮ್ಮೇಳನ ಅಂಗವಾಗಿ ಫೆ.28ರಂದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅದ್ಯಕ್ಷರು,ವಕೀಲರಾದ ಎಂ.ಪರಮೇಶ್ವರ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿ ಹಿಂದೂ ಧರ್ಮದ ಜಾಗೃತಿ ಗಾಗಿ ಫೆ.28ರಂದು ಪಟ್ಟಣದ ತಾಲೂಕು ಕ್ರೀಡಾಂಗಣ ದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದರು. ಗೌರವಾಧ್ಯಕ್ಷ ಬೀರಬ್ಬಿ ಬಸವರಾಜ, ಕಾರ್ಯಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಹಿಂದೂ ಸಮ್ಮೇಳನ ರಾಷ್ಟ್ರ ಜಾಗೃತಿಯ ಕುರಿತು ಸಭೆಯಲ್ಲಿ ಮಾತನಾಡಿದರು.
ಉಪಾಧ್ಯಕ್ಷ ಹೆಚ್. ಪೂಜಪ್ಪ ಮಾತನಾಡಿ ಹಿಂದೂ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು. ಸಮ್ಮೇಳನ ಸಂಚಲನ ಸಮಿತಿ ಅಧ್ಯಕ್ಷ ಪೂಜಾರ ಮಲ್ಲಿಕಾರ್ಜುನ, ಕಾರ್ಯದರ್ಶಿ ಡಾ. ಲಕ್ಷ್ಮಣ್ ನಾಯ್ಕ್, ಸಹ ಕಾರ್ಯದರ್ಶಿ ಈಟಿ. ಲಿಂಗರಾಜ, ಖಜಾಂಚಿ ಮಂಜುನಾಥ ಜೈನ್, ಸಮಿತಿಯ ಮುಖಂಡರಾದ ಹಣ್ಣಿ ಶಶಿಧರ, ತಳಕಲ್ ಕರಿಬಸಪ್ಪ, ವಿಲ್ಸನ್ ಸ್ವಾಮಿ, ಆರ್. ಟಿ. ನಾಗರಾಜ, ಜೆ. ಶಿವರಾಜ, ಲಂಕೇಶ್, ಪರಶುರಾಮ್ ಕಲಾಲ್, ಅಕ್ಕಸಾಲಿ ಹನುಮೇಶ್, ಈಶ್ವರಗೌಡ, , ಹಿಂದೂ ಕಾರ್ಯಕರ್ತರು ಇದ್ದರು. ಹಿಂದೂ ಸಮ್ಮೇಳನದ ಸಹ ಸಂಚಾಲಕ ಪುನೀತ್ ದೊಡ್ಮನೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 