ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಹೃತಿಕ್ ಭಾಷಣ

ಮುಂಬೈ 20      ಬಾಲಿವುಡ್ ನಟ ಹೃತಿಕ್ ರೋಷನ್ ವಿಶ್ವದ ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಸಿದ್ಧರಾಗಿದ್ದಾರೆ 

ವಿದ್ಯಾರ್ಥಿ ಒಕ್ಕೂಟದ ಪರವಾಗಿ ಹೃತಿಕ್ ಅವರಿಗೆ ಆಕ್ಸ್ಫರ್ಡ್  ನಲ್ಲಿ ಮಾತನಾಡಲು ಆಹ್ವಾನ ನೀಡಲಾಗಿದ್ದು, ಅವರು ತುಂಬಾ ಉತ್ಸುಕರಾಗಿದ್ದಾರಂತೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೃತಿಕ್, ಸೂಪರ್ 30' ಚಿತ್ರದಲ್ಲಿನ ನಟನೆ ಕೇವಲ ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಮೆಚ್ಚುಗೆ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ವೃತ್ತಿಯ ಮೂಲಕ ಸಾಧ್ಯವಾದಷ್ಟು ಸಂತೋಷ, ಸ್ಫೂರ್ತಿ ಮತ್ತು ಜ್ಞಾನವನ್ನು ಹಂಚಿಕೊಳ್ಳುವುದು ನಟನಾಗಿ ನನ್ನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. 

"ಸೂಪರ್ 30' ಇದೊಂದು ಜ್ಞಾನ ಹಂಚಿಕೊಳ್ಳುವ ನಿಸ್ವಾರ್ಥ ವ್ಯಕ್ತಿಯ ಜೀವನಗಾಥೆ. ಭಾರತ ಮತ್ತು ವಿದೇಶಿ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು. ಈ ಪ್ರತಿಷ್ಠಿತ ಒಕ್ಕೂಟದಲ್ಲಿ ಮಾತನಾಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ 

ಸದ್ಯ ಹೃತಿಕ್ 'ವಾರ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ಮತ್ತು ವಾಣಿ ಕಪೂರ್ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ.