ಸದ್ಯ ಉಸಿರಾಡುವುದಕ್ಕೆ ಎಷ್ಟು ಬೇಕೋ ಪರಿಹಾರ ಕೊಟ್ಟಿದ್ದಾರೆ : ಎಸ್.ಆರ್. ವಿಶ್ವನಾಥ್
ಬೆಂಗಳೂರು,ಅ 05: ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಿರುವುದು ರಾಜ್ಯಕ್ಕೆ ಆಶಾಕಿರಣವಾಗಿದೆ.ಸದ್ಯ ಉಸಿರಾಡುವುದಕ್ಕೆ ಎಷ್ಟು ಬೇಕೋ ಅಷ್ಟು ಕೊಟ್ಟಿದ್ದಾರೆ. ಮತ್ತೆ ಹೆಚ್ಚಿನ ಅನುದಾನ ಬರುತ್ತದೆ ಪ್ರಧಾನಿ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಸರ್ಕಾರ ದಿಂದ ರಾಜ್ಯಕ್ಕೆ 1200 ಕೋಟಿ ರೂ ನೀಡಿದ್ದು ಇದು ಮೊದಲ ಕಂತಾಗಿದೆ.ರಾಜ್ಯದ ಜನತೆ ಹಾಗು ಮುಖ್ಯಮಂತ್ರಿ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಉಸಿರಾಡುವುದಕ್ಕೆ ಎಷ್ಟು ಬೇಕೋ ಅಷ್ಟು ಸದ್ಯ ಕೊಟ್ಟಿದ್ದಾರೆ. ಮತ್ತೆ ಹೆಚ್ಚಿನ ಅನುದಾನ ಬರುತ್ತದೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ.ಈ ಮುಂಚೆ ಸಾಕಷ್ಟು ಟೀಕೆ ಟಿಪ್ಪಣಿ ವ್ಯಕ್ತವಾಗಿತ್ತು. ಇಂದು ನಮ್ಮ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನೆರೆ ಭಾಗದಲ್ಲಿ ಸಚಿವರು, ಶಾಸಕರು ವಾಸ್ತವ್ಯ ಮಾಡಿದರೆ ನೆರೆ ಪರಿಹಾರ ಕಾರ್ಯಕ್ರಮಗಳಿಗೆ ಮತ್ತಷ್ಟು ತೀವ್ರಗೊಳ್ಳಲಿದೆ. ನೆರೆ ಭಾಗದ ಶಾಲೆ, ಕಲ್ಯಾಣ ಮಂಟಪದಲ್ಲಿ ಹಾಗೂ ಇತರೆ ಕಡೆ ಉಳಿದುಕೊಂಡಿದ್ದಾರೆ ಅಂತಹ ಸ್ಥಳಗಳಲ್ಲಿ ಸಚಿವರು, ಉಸ್ತುವಾರಿ ಸಚಿವರು,ಶಾಸಕರು ಒಂದೆರಡು ದಿನ ವಾಸ್ತವ್ಯ ಮಾಡಲಿ. ಅದರಿಂದ ಅಲ್ಲಿನ ಸಮಸ್ಯೆ ಏನಿದೆ ಎಂದು ಅರಿತು ಬಂದಿರುವ ಪರಿಹಾರ ಸದ್ಬಳಕೆ ಮಾಡಬಹುದಾಗಿದೆ. ಸಂತ್ರಸ್ತರ ಸಂಕಷ್ಟ ಏನಿದೆ ಎಂದು ಗೊತ್ತಾಗುತ್ತದೆ. ಈ ಮನವಿಯನ್ನು ಮುಖ್ಯಮಂತ್ರಿ ಕಡೆಯಿಂದ ಮಾಡುತ್ತೇನೆ. ಆ ಅಭಾಗದ ಶಾಸಕರು ಸಂತ್ರಸ್ತರ ಜತೆ ವಾಸ್ತವ್ಯ ಮಾಡುವುದು ಒಳ್ಳೆಯದು ಎಸ್.ಆರ್ವಿಶ್ವನಾಥ್.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 