ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಹೊಟ್ಟಿಗೌಡರ : ಅವಿರೋಧ ಆಯ್ಕೆಗೆ ಸದಸ್ಯರಲ್ಲಿ ಮನವಿ
Hottigoudara for Haveri District KaSaPa President: Appeal to members for unanimous election
ರಾಣೆಬೆನ್ನೂರು, ಆ.9: ಮುಂಬರುವ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೇವಾಕಾಂಕ್ಷಿಯಾಗಿದ್ದು, ಮತದಾರರು ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ವರ್ತಕ ಗದಿಗೆಪ್ಪಗೌಡ ಗು. ಹೊಟ್ಟಿಗೌಡ ಮನವಿ ಮಾಡಿದರು.
ನಗರದ ವಾಗೀಶನಗರದಲ್ಲಿರುವ ಕಸಾಪ ಭವನದಲ್ಲಿ ಭಾನುವಾರ ತಮ್ಮ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಪ್ರಸ್ತುತ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ವ್ಯವಹಾರಿಕ ಹಾಗೂ ಓದ್ಯೋಗಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಆಜೀವ ಸದಸ್ಯರ ಅಪೇಕ್ಷೆ, ಬೆಂಬಲ ಹಾಗೂ ಪ್ರೋತ್ಸಾಹದ ಮೇರೆಗೆ ಮೊದಲ ಸುತ್ತಿನಲ್ಲಿ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆದಿದ್ದೇನೆ. ಆದ್ದರಿಂದ ಚುನಾವಣೆಯ ಬದಲು ಅವಿರೋಧ ಆಯ್ಕೆ ನಡೆಯಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲೆಯ ಹಿರಿಯ-ಕಿರಿಯ ಸಾಹಿತಿಗಳು ಹಾಗೂ ಕಸಾಪ ಸದಸ್ಯರ ಸಮ್ಮುಖದಲ್ಲಿ ಹೊಟ್ಟಿಗೌಡರ ಸೇವಾಕಾಂಕ್ಷೆಯ ಮತಪ್ರಚಾರ ಪರಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಾಲಿ ಅಧ್ಯಕ್ಷ ಎಚ್.ಬಿ. ಲಿಂಗಯ್ಯ, ಮಾಜಿ ಅಧ್ಯಕ್ಷರಾದ ಡಾ. ಕೆ.ಹೆಚ್. ಮುಕ್ಕಣ್ಣನವರ, ಜಿ.ಬಿ. ಮಾಸಣಗಿ, ಮಾರುತಿ ಶಿಡ್ಲಾಪುರ, ಬಿ.ಎಂ. ಜಗಾಪುರ, ವೈ.ಬಿ. ಆಲದಕಟ್ಟಿ, ಶಿವಾನಂದ ಸಂಗಾಪುರ, ನಾಗರಾಜ ಹೆಸರೂರ, ಎಸ್.ಎಲ್. ದೊಡ್ಡಗೌಡ್ರ, ವಾಸಣ್ಣ ಕುಸಗೂರ, ಗಣ್ಯರಾದ ವಿ.ಪಿ. ಲಿಂಗನಗೌಡರ, ವೀರೇಶ ಮೋಟಗಿ, ಏಕನಾಥ ಭಾನುವಳ್ಳಿ, ರುಕ್ಮಿಣಿ ಸಾಹುಕಾರ, ಭಾರತಿ ಜಂಬಿಗಿ, ಪಿ.ಜೆ. ಮರಿಯಮ್ಮನವರ, ಸುಧೀರ್ ಕುರುವತ್ತಿ ಸೇರಿದಂತೆ ಹಲವರು ಹೊಟ್ಟಿಗೌಡರ ಅವಿರೋಧ ಆಯ್ಕೆಗೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ.ಪಿ. ಶಿಡೇನೂರ, ಅಧ್ಯಕ್ಷ ಪ್ರಭಾಕರ ಶಿಗ್ಲಿ, ಬಾಬಣ್ಣ ಪಾಟೀಲ, ಎ.ಬಿ. ಪಾಟೀಲ, ವೀರೇಶ ಜಂಬಿಗಿ, ಸಿ.ಆರ್. ಅಸುಂಡಿ, ಶಿವಪ್ಪ ಗುರಿಕಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ನಗರದ ವರ್ತಕರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 