ಚನ್ನಮ್ಮನ ಕಿತ್ತೂರಿನಲ್ಲಿ ವಾಣಿಜ್ಯ ಸಿಲೆಂಡರಗಳನ್ನು ನೀಡುತ್ತಿಲ್ಲವೆಂದು ಆಗ್ರಹಿಸಿ ಪಟ್ಟಣದ ಹೋಟೆಲ್ ವ್ಯಾಪಾರಸ್ಥರು ಕಿತ್ತೂರು ತಹಶೀಲ್ದಾರರಿಗೆ ಮನವಿ

  ಚನ್ನಮ್ಮನ ಕಿತ್ತೂರಿನಲ್ಲಿ  ವಾಣಿಜ್ಯ ಸಿಲೆಂಡರಗಳನ್ನು ನೀಡುತ್ತಿಲ್ಲವೆಂದು ಆಗ್ರಹಿಸಿ ಪಟ್ಟಣದ ಹೋಟೆಲ್  ವ್ಯಾಪಾರಸ್ಥರು  ಕಿತ್ತೂರು ತಹಶೀಲ್ದಾರರಿಗೆ ಮನವಿ   Hoteliers in the town have appealed to the Kittur Tahsildar, alleging that commercial cylinders are

ಲೋಕದರ್ಶನ ವರದಿ 

ಚನ್ನಮ್ಮನ ಕಿತ್ತೂರು  27ಃ ವಾಣಿಜ್ಯ ಬಳಕೆಯ ಸಿಲೆಂಡರ್‌ಗಳು ನಿಗದಿತ ದರ ಹಾಗೂ ಸಮರ​‍್ಕವಾಗಿ ದೊರೆಯುತ್ತಲ್ಲವೆಂದು ಆಗ್ರಹಿಸಿ ಖಾಲಿ ಸಿಲೆಂಡರ್ ಮೂಲಕ  ಹೋಟೆಲ್ ಮಾಲಿಕರ ಸಂಘಟನೆ ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆಯವರು ತಹಶೀಲ್ದಾರ ಕಚೇರಿಗೆ ಆಗಮಿಸಿ ಗ್ರೇಡ್ 2 ತಹಶೀಲ್ದಾರ ಪಿ ವಾಯ್ ಕೋರಿ ಇವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. 

ಕರ್ನಾಟಕ ಯುವ ರಕ್ಷಣಾವೇದಿಕೆಯ ಅಧ್ಯಕ್ಷ ಕಿರಣ ವಾಳದ ಮಾತನಾಡಿ ವಾಣಿಜ್ಯ ಬಳಕೆಯ ಸಿಲೆಂಡರ್‌ಗಳು ಸಣ್ಣ ಸಣ್ಣ ಹೊಟೇಲ್‌ಗಳಿಗೆ ಸಮರ​‍್ಕವಾಗಿ ಪೂರೈಕೆಯಾಗುತ್ತಿಲ್ಲ ಮತ್ತು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವದು ಕಂಡು ಬಂದಿದ್ದು ಇದರಿಂದ ಚಿಕ್ಕ ಚಿಕ್ಕ ಹೊಟೇಲ್ ಉದ್ಯಮ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ನಿಗದಿತ ದರಕ್ಕೆ ಮತ್ತು ಸಮರ​‍್ಕವಾಗಿ ಎಲ್ಲರಿಗೂ ವಾಣಿಜ್ಯ ಸಿಲೆಂಡರ್ ದೊರೆಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹ ಪಡಿಸಿದರು. 

ಗ್ಯಾಸ್ ವಿತರಕರು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಾಣಿಜ್ಯ ಬಳಕೆ ಸಿಲೇಂಡರ ನೀಡುತ್ತಿಲ್ಲ. ತಮ್ಮಗೆ ಬೇಕಾದ ವ್ಯಾಪಾರಸ್ಥರಿಗೆ ಮಾತ್ರ ಒಂದೇ ಬಾರಿ 10 ಸಿಲೇಂಡರ ನೀಡುತ್ತಾರೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಿಲೇಂಡರ ನೀಡುತ್ತಿಲ್ಲ. ಗ್ಯಾಸ್ ವಿತರಕರ ತಾರತಮ್ಯ ಧೋರಣೆ ಮಾಡುತ್ತಿದ್ದಾರೆ. ಗ್ರಾಹಕರ ಜೊತೆ ಸೌಜ್ಯನ್ಯದಿಂದ ವರ್ತಿಸುತ್ತಿಲ್ಲ ಎಂದು ವಿತರರಕರ ವಿರುದ್ದ ತಮ್ಮ ಅಸಮಾದಾನ ಹೊರ ಹಾಕಿದರು.  

ಮನವಿ ಸ್ವಿಕರಿಸಿ ಗ್ರೇಡ್ 2 ತಹಶೀಲ್ದಾರ ಪಿ ವಾಯ್ ಕೋರಿ ಮಾತನಾಡಿ ನಮ್ಮಲ್ಲಿ ಯಾವದೇ ಸಿಲೆಂಡರ್ ಕೊರತೆ ಇಲ್ಲ ಈಗಾಗಲೇ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು  ಎಲ್ಲರಿಗೂ ಸಮರಾ​‍್ವಗಿ ಸಿಲೆಂಡರ್ ಒದಗಿಸುವಂತೆ ಎಜೆನ್ಸಿಯವರಿಗೆ ಮೇಲ್ದಾಧಿಕಾರಿಗಳು  ಸೂಚನೆ ನೀಡುತ್ತಾರೆ ಎಂದು ಹೇಳಿದರು. 

ಕರ್ನಾಟಕ ಯುವ ರಕ್ಷಣಾ ವೇದಿಕೆಯ ಬಸವರಾಜ ಸಂಪಗಾವಿ, ಶಂಕರ ಗಂಗಪ್ಪನವರ, ಉಮೇಶ ಹುಂಬಿ, ಪೈ ಹೊಟೇಲ್, ಗಣೇಶ ಪ್ರಸಾದ, ದುರ್ಗಾಂಬಾ, ಮಂದಾರ್ತಿ, ಮಹಾಲಕ್ಷ್ಮೀ, ದರ್ಶಿಣಿ, ಗಜರಾಜ ಕ್ಯಾಂಟೀನ್, ಸಾಯಿಫಾಸ್ಟಪುಡ್, ವಿಜೇತಾ ಮುಂತಾದ ಹೊಟೇಲ್‌ಗಳ ಮಾಲಿಕರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.