ಲೋಕದರ್ಶನ ವರದಿ
ಹೊಸಪೇಟೆ 19: ಶಿಕ್ಷಣ ದಾಸೋಹದ" ಉದ್ದೇಶ ಹೊಂದಿದ್ದ ವಿಜಯನಗರ ಕಾಲೇಜು ಆಡಳಿತ ಮಂಡಳಿ ಇತ್ತೀಚಿನ ಕೆಲವು ವರ್ಷಗಳಿಂದ ತಮ್ಮ ಮೂಲ ಉದ್ದೇಶವನ್ನು ಮರೆತು ಶಿಕ್ಷಣವನ್ನು ಲಾಭದ ಅಂಗಡಿಯಾಗಿ ಪರಿಗಣಿಸುತ್ತಿರುವುದು ಹಾಗೂ ಶೈಕ್ಷಣಿಕ ನೀತಿ-ನಿಯಮಗಳನ್ನು ಹಾಡು-ಹಗಲೆ ಗಾಳಿಗೆ ತೂರುತ್ತಿರುವುದು ತನ್ನ ಐತಿಹಾಸವಾದ ಚರಿತ್ರೆಯನ್ನು ತನ್ನ ಕೈಯಾರೆ ಅಳಿಸಿ ಹಾಕುವ ಪ್ರಯತ್ನಕ್ಕೆ ಹೊರಳಿದೆ.
ವಿಜಯನಗರ ಕಾಲೇಜು ಪದವಿ ಮತ್ತು ಪದವಿ ಪೂರ್ವ ಕಾಲೇಜನ್ನು ಹೊಂದಿದ್ದು ಅದು ಸಕರ್ಾರದಿಂದ ಅನುದಾನವನ್ನು ಪಡೆದುಕೊಂಡು ಬಂದ ಶಿಕ್ಷಣ ಸಂಸ್ಥೆಯಾಗಿದೆ. ಇದು ಯು.ಜಿ.ಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಕಾಯಿದೆಗೆ ಒಳಪಟ್ಟಿರುತ್ತದೆ. ಹಾಗೂ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ನ್ಯಾಕ್) ಅಡಿಯಲ್ಲಿ ಈ ಕಾಲೇಜಿಗೆ ಕೆಲವು ವರ್ಷಗಳ ಹಿಂದೆ "ಎ+" ದಜೆಯ ಬಂದಿರುತ್ತದೆ.
ಸರ್ಕಾರಿ ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ 1200 ಜನ ವಿದ್ಯಾಥರ್ಿಗಳು ಹಾಗೂ ಪದವಿಯಲ್ಲಿ ಸುಮಾರು 3500 ಮತ್ತು ಪಿ.ಜಿ ಕೋರ್ಸಗಳಾದ ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಕೆಮಿಸ್ಟ್ರಿ,ಎಂ.ಕಾಂ, ಎಂ.ಎ ಇಂಗ್ಲೀಷ್, ಎಂ.ಎ ಅರ್ಥಶಾಸ್ತ್ರ ಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ.
ನಿಯಮದ ಪ್ರಕಾರ ಸರಕಾರಿ ಪದವಿ ಪೂರ್ವ ಕಾಲೇಜು 9.30 ಕ್ಕೆ ಪ್ರಾರಂಭವಾಗ ಬೇಕು ಆದರೆ ವಿಜಯನಗರ ಕಾಲೇಜಿನಲ್ಲಿ ಅದು 11.30 ಕ್ಕೆ ಪ್ರಾರಂಭವಾಗುತ್ತದೆ. ಕನಿಷ್ಠ 6 ಗಂಟೆಗಳ ಕಾಲ ತರಗತಿಯನ್ನು ನಡೆಸಲು ಅವಕಾಶವಿರಬೇಕು ಆದರೆ ಇಲ್ಲಿ ಕೇವಲ 4 ಗಂಟೆಗಳು ಸಹ ವಿದ್ಯಾಥರ್ಿಗಳಿಗೆ ಸರಿಯಾಗಿ ತರಗತಿಗಳು ಸೀಗುತ್ತಿಲ್ಲವೆಂಬ ಆರೋಪವಿದೆ. ಪದವಿಯ ಪರೀಕ್ಷೆಗಳು ಇಲ್ಲವೇ ಪಿ.ಯು.ಸಿಯ ಪರೀಕ್ಷೆಗಳು, ಪತ್ರಿಕೆಯ ಮೌಲ್ಯ ಮಾಪನದ ಸಮಯದಲ್ಲಿ ಕಾಲೇಜಿನಲ್ಲಿ ತರಗತಿಗಳು ನಡೆಯುವುದು ಕಷ್ಟಸಾಧ್ಯವಾಗಿದೆ.
ಪಿ.ಯು.ಸಿ ಮತ್ತು ಪದವಿ ವಿದ್ಯಾರ್ಥಿಗಳಿಂದ ನಿಯಮ ಮೀರಿ ವಿದ್ಯಾಥರ್ಿಗಳಿಂದ ಶುಲ್ಕವನ್ನು ಸಂಗ್ರಹಿಸುತ್ತಿದೆ. ಉಪನ್ಯಾಸಕರಿಗೆ ಯು.ಜಿ.ಸಿ ನಿಗಧಿ ಪಡಿಸಿದ ಸಂಬಳವನ್ನು ನೀಡುತ್ತಿಲ್ಲವೆಂಬ ಆರೋಪವಿದೆ.
ಈಗಾಗೀ ತಕ್ಷಣವೇ ಪದವಿ ಕಾಲೇಜಿನಲ್ಲಿ ನಡೆಸುತ್ತಿರುವ ಪದವಿ ಪೂರ್ವ ಅನುದಾನಿತ ಕಾಲೇಜಿನ ತರಗತಿಗಳನ್ನು ಹೊಸದಾಗಿ ಕಟ್ಟಿದ ಕಟ್ಟಡಕ್ಕೆ ವಗರ್ಾಯಿಸಿ ಹಾಗೂ ಸ್ವತಂತ್ರ ಪದವಿ ಪೂರ್ವ ಖಾಸಗಿ ಕಾಲೇಜನ್ನು ಸರಕಾರ ನಿಯಮದ ಪ್ರಕಾರ ಸರಕಾರಿ ಪದವಿ ಪೂರ್ವ ಕಾಲೇಜಿನ 3 ಕಿ.ಲೋ ಮೀಟರ್ ದೂರದಲ್ಲಿ ಪ್ರಾರಂಭಿಸಲು ಆದೇಶಿಸಬೇಕು. ನಿಯಮ ಮೀರಿ ವಿದ್ಯಾಥರ್ಿಗಳಿಂದ ಸಂಗ್ರಹಸುತ್ತಿರುವ ಶುಲ್ಕವನ್ನು ತಕ್ಷಣವೇ ನಿಲ್ಲಿಸಬೇಕು. ಈಗಾಗಲೇ ಖಾಲಿ ಇರುವ ಪದವಿಯ
ಯು.ಜಿ.ಸಿಯ ನಿಯಮಗಳ ಪ್ರಕಾರ ಉಪನ್ಯಾಸಕರಿಗೆ ಸಂಬಳವನ್ನು ಕೊಡುತ್ತಿರುವ ಖಾತ್ರಿಯನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಸಕರ್ಾರ ಪಡಿಸಿಕೊಳ್ಳಬೇಕೆಂದು ಪ್ರತಿಭಟನಾ ಮನವಿ ಮೂಲಕ ತಮ್ಮ ಸಕರ್ಾರಕ್ಕೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಹೊಸಪೇಟೆ ತಾಲೂಕು ಸಮಿತಿ ಒತ್ತಾಯಿಸುತ್ತಿದ್ದೇವೆ ಎಂದರು.