ಲೋಕದರ್ಶನ ವರದಿ
ಹೊಸಪೇಟೆ 20: ನಗರದಲ್ಲಿ ವಿವಿಧ ಸಂಘಗಳ ಮಹಿಳೆಯರಿಗೆ ಸಂಘಗಳನ್ನು ಕಟ್ಟಿಕೊಳ್ಳುವಂತೆ ಮಾಡಿ, ಮಹಿಳೆಯರಿಗೆ ಬಳಿಕ ಸಾಲ ನೀಡಿ, ಸಾಲ ವಸೂಲಾತಿಗೆ ಏಜೆಂಟರ ಮೂಲಕ ಮಾನಸಿಕ ಕಿರುಕುಳ ಮತ್ತು ದೌರ್ಜನ್ಯ ಮಾಡುತ್ತಿರುವ ಹಣಕಾಸು ಸಂಸ್ಥೆಗಳನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಿ ತಾಯಮ್ಮಶಕ್ತಿ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಬಳಿಕ ಉಪ ವಿಭಾಗಾಧಿಕಾರಿ ಕೆ.ಎನ್.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ಮಾತನಾಡಿ, ನಗರ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಹುಟ್ಟಿಕೊಂಡಿರುವ ಹಣಕಾಸು ಸಂಘ ಸಂಸ್ಥೆಗಳಾದ ಸ್ಪಂದನ, ಗ್ರಾಮಶಕ್ತಿ, ಆರ್ಬಿಐ, ಆಶಾವಾದ ಹಾಗು ಮಂಜುನಾಥ ಸಂಸ್ಥೆಗಳು ಹಿಂದು ಮುಂದು ನೋಡದೇ, ಮಹಿಳೆಯರಿಗೆ ಸಾಲ ನೀಡಿ, ಶೂರಿಟಿಗಾಗಿ ಎಲ್ಲಾ ಮಹಿಳಾ ಸದಸ್ಯರ ಸಹಿ ಪಡೆದುಕೊಳ್ಳುತ್ತಿವೆ.
ಮಹಿಳೆಯರು ಸಾಲ ಕಟ್ಟಲಾಗದೇ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವರು ಊರು ಬಿಟ್ಟು ಹೋಗುವಂಥಹ ಪರಿಸ್ಥಿತಿ ನಿಮರ್ಾಣವಾಗಿದೆ. ಈ ಕುರಿತು ನಮ್ಮ ಸಂಘಕ್ಕೆ ಅನೇಕ ದೂರುಗಳು ಬಂದಿವೆ. ಹೀಗಾಗಿ ಕೂಡಲೇ ಇಂಥ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಲ ನೀಡುವ ಸಂಸ್ಥೆಗಳು ಕೆಲವು ನಿಯಮಗಳನ್ನು ಅನುಸರಿಸಬೇಕು. ಮೊದಲು ಸಂಘದ ಸದಸ್ಯರು ಬೇರೆ ಕಡೆ ಸಾಲ ಪಡೆದಿದ್ದಾರೆಯೇ? ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
ಸಾಲ ತೆಗೆದುಕೊಳ್ಳುವ ಸದಸ್ಯರ ಆದಾಯದ ಮೂಲ, ಅವರು ಸಮರ್ಥರೇ ಎಂಬುದನ್ನು ನೋಡಿ ಸಾಲ ನೀಡಬೇಕು. ಸಾಲ ಕಟ್ಟಲಾಗದೇ ಊರು ಬಿಡುವ ಪ್ರಸಂಗ ಬಂದರೆ ಅವರಿಗೆ ಸಾಂತ್ವಾನ ಹೇಳೋ ಕೆಲಸ ಆಗಬೇಕು. ಸಾಲಕ್ಕೆ ಎಲ್ಲರನ್ನು ಹೊಣೆ ಮಾಡದೇ ಒಂದಿಬ್ಬರನ್ನು ಹೊಣೆ ಮಾಡಿ ಸಾವಧಾನವಾಗಿ ಸಾಲ ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಉಪವಿಭಾಗಾಧಿಕಾರಿ ಕೆ.ಎನ್.ಲೋಕೇಶ್ ಹಾಗು ಡಿವೈಎಸ್ಪಿ ರಘುಕುಮಾರ್ಗೆ ಮನವಿ ಸಲ್ಲಿಸಿದರು. ಸಂಘದ ಲಲಿತಾ, ಬೀನಾ, ರೂಪ, ರಾಧ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.