ಹೊಸಪೇಟೆ: ಅನಧಿಕೃತ ಮಸೀದಿ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಮನವಿ
ಹೊಸಪೇಟೆ 18: ತಾಲೂಕಿನ ಹಳೇ ಮಲಪನಗುಡಿ ಗ್ರಾಮದ ತಾಯಮ್ಮನ ಗುಡಿ ಹತ್ತಿರ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕು ಹಿಂದು ಜಾಗರಣ ವೇದಿಕೆ ಮತ್ತು ಮಲಪನಗುಡಿ ನಾಗರಿಕ ಬಳಗ ಸ್ಥಳೀಯ ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಅಮರನಾಥ್ ಗೆ ಮನವಿ ಸಲ್ಲಿಸಿತು.
ಗ್ರಾಮದಲ್ಲಿ ಕೇವಲ ಬೆರಳೆಣಿಕೆ ಮುಸ್ಲಿಂ ಮನೆಗಳಿರುವ ಸ್ಥಳದಲ್ಲಿ ನಿಯಮಬಾಹಿರವಾಗಿ ಮಸೀದಿ ನಿಮರ್ಿಸಲಾಗುತ್ತಿದೆ. ಕಾಮಗಾರಿ ಆರಂಭದಲ್ಲಿ ಕೇಳಿದಾಗ ಶಾಲೆ ನಿರ್ಮಿಸಲಾಗುತ್ತಿದೆ ಎಂದಿದ್ದರು. ಈಗ ಮಸೀದಿ ನಿರ್ಮಿಸಲಾಗುತ್ತಿದೆ. ಸಮೀಪದ ಕೊಂಡನಾಯಕನಹಳ್ಳಿ, ಹೊಸ ಮಲಪನಗುಡಿಗಳಲ್ಲಿ ದೊಡ್ಡ ಮಸೀದಿಗಳಿದ್ದರೂ ಇಲ್ಲಿ ಮಸೀದಿ ನಿರ್ಮಿಸುತ್ತಿರುವುದು ಸ್ಥಳೀಯರಿಗೆ ತೊಂದರೆಯಾಗಲಿದೆ. ನಮಾಜ್ ವೇಳೆ ಅತಿಹೆಚ್ಚು ಶಬ್ಧ ಮಾಡುವುದರಿಂದ ಮಕ್ಕಳು, ಗರ್ಭಿಣಿಯರಿಗೆ ಸಮಸ್ಯೆಯಾಗಲಿದೆ. ಅಲ್ಲದೆ ಶೇ.80 ಅಧಿಕ ಹಿಂದು ಜನರು ವಾಸಿಸುವ ಸ್ಥಳದಲ್ಲಿ ಮಸೀದಿ ಕಟ್ಟುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಕಟ್ಟಡ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆಗಳ ಮುಖಂಡರಾದ ಗಣೇಶ್ ನೀರ್ಲಿಗಿ, ಮೌನೇಶ್ ಬಡಿಗೇರ್, ಬಿ.ನವೀನ್ ಕುಮಾರ್, ಹಳೇ ಮಲಪನಗುಡಿ ಗ್ರಾಪಂ ಸದಸ್ಯ ಬಿ.ತಾಯಪ್ಪ, ಗ್ರಾಮದ ಮುಖಂಡರಾದ ಕುರಟ್ಟಿ ವಾಸಪ್ಪ, ಕೆ.ಭರ್ಮಪ್ಪ, ಬಿ.ರಮೇಶ್, ಕುರಟ್ಟಿ ಬೀರಪ್ಪ, ಮಠದ ಈಶ್ವರಯ್ಯ, ತಾಪಂ ಮಾಜಿ ಸದಸ್ಯ ಬಿ.ಶಂಕ್ರಪ್ಪ ಇತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 