ಬಾಗಲಕೋಟೆ:: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ತೋವಿವಿಯ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತೋವಿವಿಯು ತ್ವರಿತ ಪ್ರಗತಿಯ ಕುರಿತು ಮತ್ತು ಕನರ್ಾಟಕದ ರೈತರಿಗೆ ಸಮರ್ಪಕ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದೆ. ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿ ಬಗ್ಗೆ ರೈತರಿಗೆ ಸಾಕಷ್ಟು ಮಾರ್ಗದರ್ಶನ ನೀಡಿ ರೈತರ ಏಳಿಗೆಗೆ ಶ್ರಮಿಸಿದ್ದನ್ನು ಶ್ಲಾಘಿಸಿದರು. ವಿದ್ಯಾಥರ್ಿಗಳು ಶೈಕ್ಷಣಿಕ ಪ್ರಗತಿ ಜೊತೆಗೆ ಭವಿಷ್ಯದಲ್ಲಿ ಒಳ್ಳೆಯ ಗುರಿ ಇಟ್ಟುಕೊಳ್ಳಬೇಕು. ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಶ್ರೇಣಿಯನ್ನು ಹೊಂದಬೇಕೆಂದರು.
ಇದೇ ಸಂದರ್ಭದಲ್ಲಿ ಉನ್ನತ ಸಾಧನೆಗೈದ ಪ್ರತಿಭಾನ್ವಿತ ವಿಜ್ಞಾನಿಗಳಾದ ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾದ್ಯಾಪಕ ಡಾ.ಫಕರುದ್ದಿನ್ ಅವರಿಗೆ ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ, ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ.ಜಗದೀಶ ಎನ್ ಅವರಿಗೆ ಡಾ.ಎಸ್.ಬಿ.ದಂಡೀನ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ಮತ್ತು ಬೆಂಗಳೂರಿನ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ನಿದರ್ೇಶಕ ಡಾ.ವಿಷ್ಣುವರ್ಧನ ಅವರಿಗೆ ಬಾಹ್ಯಾಯೋಜನೆ ಪ್ರೋತ್ಸಾಹಕ ಪ್ರಶಸ್ತಿ ಮತ್ತು ಉತ್ತೇಜಕರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಅತ್ತ್ಯುತ್ತಮ ಶಿಕ್ಷಕೇತರ ಸಿಬ್ಬಂದಿ ಪ್ರಶಸ್ತಿಯನ್ನು ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿ ರಾಮನಗೌಡ ಪಾಟೀಲ, ಹಿರಿಯ ಸಹಾಯಕ ಮಂಜುನಾಥ ನಿಡಗುಂದಿ, ತೋಟಗಾರಿಕೆ ಮಹಾವಿದ್ಯಾಲಯದ ಕ್ಷೇತ್ರ ಸಹಾಯಕ ಮಂಜಪ್ಪಾ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳನ್ನು ಸಹ ಸನ್ಮಾನಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಕುಮಾರ ಜಯಂತ ಪೂಜಾರಿ, ಬಸವರಾಜ ದೇವಜಿ, ಅಜಯ್ ಎಸ್.ಎಂ, ಮತ್ತು ಸುಮಂತ ಬಿ.ಟಿ., ಕುಮಾರಿ. ಲಾವಣ್ಯ ಎಸ್. ಎಂ, ಮಧುಮತಿ ಪಾಟೀಲ್, ಅನಿತಾ ಎಲ್. ಆರ್, ಶೀಲಾ ರಿಯಾಮಿ, ಶಿಖಾ ಮನೋಹರನ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಕುಮಾರ. ಅಕಾಶ ಮಲ್ಲೆದಾ, ವೇಣುಗಣಪತಿ ಹೆಗಡೆ, ತೇಜಸ್ವಿ ಎಸ್.ಎನ್., ಸಹನಾ ಪಿ. ವಿ, ಶೃತಿದೇವಿ ಮಠ, ಹರ್ಷದಾ ಮದಲಿ, ಶ್ರೀನಿಧಿ ಬಿ.ಆರ್, ರಷ್ಮಿತಾ ಜಿ., ಸೌಮ್ಯ ಹೆಚ್. ಎಸ್, ಪೂಜಿತಾ ಜೈನ್, ಹಿಮಾ ಎನ್. ಪ್ರಸಾದ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೌರಭ ಕಲ್ಯಾಣೆ, ಶ್ರೀಕಾಂತ, ರಾಕೇಶ ಜೆ.ಸಿ, ಶಿವಕುಮಾರ ಚೌಧರಿ, ಗೀರಿಶ ಕುಮಾರ, ಚಂದ್ರಕಾಂತ ಎಮ್, ಅಕ್ಷಯ ಯಂಕಂಚಿ. ಸಹನಾ ಎಸ್. ವಿ, ಪೂಜಾ ಕೆ. ಜೆ, ದಶರ್ಿನಿ ಜಿ. ರಷ್ಮಿತಾ ಜಿ, ಸೌಮ್ಯ ಮಿರಗಿ, ನಿಧಿ ರೈ, ಸುಹಾನಾ ಭೀಮಯ್ಯ, ಪೂಜಾ ಕೆ. ಜೆ., ಅವರನ್ನು ಸನ್ಮಾನಿಸಲಾಯಿತು.
2018-19ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕೇತರ ಸಿಬ್ಬಂದಿಗಳಾದ ಎಚ್.ವಿ.ಸುಬ್ಬಾರಾವ್, ಎಲ್.ಡಿ.ಲಮಾಣಿ, ಬಸವರಾಜ ನಿಂಗನಗೌಡರ್, ಎಮ್.ಎಚ್.ಶೆಲ್ಲಿಕೇರಿ, ಪಕ್ಕೀರವ್ವ ಇಳಿಗೇರ ಮತ್ತು ಎಮ್.ಆರ್.ಗುತ್ತಿ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಡಾ.ಟಿ.ಬಿ.ಅಲ್ಲೊಳ್ಳಿ, ಸಂಶೋಧನಾ ನಿದರ್ೇಶಕ ಡಾ.ಎನ್.ಬಸವರಾಜ, ವಿಸ್ತರಣಾ ನಿದರ್ೇಶಕ ಡಾ. ವೈ.ಕೆ.ಕೋಟಿಕಲ್, ಡೀನ್ (ಸ್ನಾತಕೋತ್ತರ) ಡಾ.ಎಮ್.ಎಸ್.ಕುಲಕಣರ್ಿ, ಡೀನ್, ವಿದ್ಯಾಥರ್ಿ ಕಲ್ಯಾಣ ಹಾಗೂ ಆಡಳಿತಾಧಿಕಾರಿ ಡಾ.ಎಸ್.ಆಯ್.ಅಥಣಿ, ಹಣಕಾಸು ನಿಯಂತ್ರಣಾಧಿಕಾರಿ ಎನ್.ಮುರಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.