ಸರಕಾರಿ ನೌಕರರ ಸಂಘದ ನೂತನ ಕಾರ್ಯಾಧ್ಯಕ್ಷರಿಗೆ ಸನ್ಮಾನ

ಸರಕಾರಿ ನೌಕರರ ಸಂಘದ ನೂತನ ಕಾರ್ಯಾಧ್ಯಕ್ಷರಿಗೆ ಸನ್ಮಾನ Honors for the new working president of the Government Employees Association

ಕೊಪ್ಪಳ 05: ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಕಾರ್ಯಾಧ್ಯಕ್ಷರಾಗಿ ನೇಮಕವಾದ ಬೀರ​‍್ಪ ಅಂಡಗಿ ಅವರನ್ನು ವಿವಿಧ ಸಂಘಟನೆಗಳು ಸರಕಾರಿ ನೌಕರರ ಭವನದಲ್ಲಿ ಸನ್ಮಾನಿಸಿದರು. 

ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ, ಜಿಲ್ಲಾ ಗೌರವಾಧ್ಯಕ್ಷರಾದ ಈರ​‍್ಪ ಬಳ್ಳೋಳ್ಳಿ, ಹೊಸ ಬಂಡಿಹರ್ಲಾಪುರ ಪ್ರಥಮ ದರ್ಜೇ ಕಾಲೇಜಿನ ಪ್ರಾಚಾರ್ಯಾರಾದ ನಿಂಗಪ್ಪ ಕಂಬಳಿ, ಸರಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಶರಣಪ್ಪ ರಡ್ಡೇರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಹೇಶ ಟಂಕಸಾಲಿ, ರಮೇಶ ಬುಡ್ಡನಗೌಡ, ಗವಿಸಿದ್ದಪ್ಪ ಕೇರಿ, ಸುರೇಶ ತೋಟದ, ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ದ್ಯಾಮಣ್ಣ ಮುರಡಿ, ಹನುಮಂತಪ್ಪ ಕುರಿ, ಮಲ್ಲಪ್ಪ ಗುಡದನ್ನವರ, ಬಾಲನಾಗಮ್ಮ, ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಭಾರತಿ ಹವಳೆ, ಸುಜಾತ ಕುರಿ ಸೇರಿದಂತೆ ಅನೇಕರು ಹಾಜರಿದ್ದರು.