ನೂತನ ಪೌರಾಯುಕ್ತ ಸುರೇಶ ಬಬಲಾದ್ ಅವರಿಗೆ ಸನ್ಮಾನ

ನೂತನ ಪೌರಾಯುಕ್ತ ಸುರೇಶ ಬಬಲಾದ್ ಅವರಿಗೆ ಸನ್ಮಾನ  Honors for new Municipal Commissioner Suresh Babalad

ನೂತನ ಪೌರಾಯುಕ್ತ ಸುರೇಶ ಬಬಲಾದ್ ಅವರಿಗೆ ಸನ್ಮಾನ  

ಕೊಪ್ಪಳ 14 :  ಕೊಪ್ಪಳ ನಗರಸಭೆಗೆ ನೂತನ ಪೌರಾಯುಕ್ತರಾಗಿ ಸರ್ಕಾರದಿಂದ ನೇಮಕಗೊಂಡು ಇಲ್ಲಿಗೆ ಆಗಮಿಸಿದ ಸುರೇಶ್ ಜಿ ಬಬಲಾದ್ ರವರಿಗೆ ಸೋಮವಾರ ದಂದು ಬಿ ಎಸ್ ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಮಹಬೂಬ್ ಖಾನ್ ರವರು ಭೇಟಿಯಾಗಿ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಿದರು, ನಂತರ ಅವರೊಂದಿಗೆ ಮಾತನಾಡಿ ನಗರದ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಸಿಗಬಹುದಾದ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮತ್ತು ಸ್ವಚ್ಛತೆ ಕುಡಿಯುವ ನೀರಿನ ಸಮರ​‍್ಕ ವ್ಯವಸ್ಥೆ ಮತ್ತು ವಿದ್ಯುತ್ ದೀಪ ಗಳ ಅಳವಡಿಕೆ ಇತ್ಯಾದಿ ವ್ಯವಸ್ಥೆ ಕಲ್ಪಿಸಿಕೊಡಲು ಅವರಲ್ಲಿ ಮೆಹಬೂಬ್ ಖಾನ್ ಜನರ ಪರವಾಗಿ ಮನವಿ ಮಾಡಿ ಕೊಂಡರು, ಅವರ ಮನವಿಗೆ ನೇರ ಸ್ಪಂದನೆ ನೀಡಿದ ನೂತನ ಪೌರಾಯುಕ್ತಾರಾದ ಸುರೇಶ್ ಬಬಲಾದ ರವರು ಮಾತನಾಡಿ ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಜಿಲ್ಲಾ ಆಡಳಿತದ ಮಾರ್ಗದರ್ಶನದಲ್ಲಿ ಒಳ್ಳೆಯ ಕೆಲಸ ಮಾಡಿ ನಗರ ಸಭೆಗೆ ಬರುವ ಸಾರ್ವಜನಿಕರಿಗೆ ಸೌಕರ್ಯಗಳನ್ನು ಅವರ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಅವರು ಹೇಳಿದರು.