ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ಶಿಬಿರ
Honors and free health camps for talented students and retired employees
ಗದಗ:11:ಎಸ್ ಎಸ್ ಎಲ್ ಮತ್ತು ಪಿಯುಸಿ ಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ಶಿಬಿರ ಜೂನ್-15ರ ರವಿವಾರ ಮುಂಜಾನೆ 9 ಗಂಟೆಗೆ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಗಾಣಿಗ ಸಮುದಾಯ ಭವನದಲ್ಲಿ ಈ ಸಮಾರಂಭ ಏರಿ್ಡಸಲಾಗಿದೆ ಎಂದು ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ಗದಗ ಜಿಲ್ಲಾಧ್ಯಕ್ಷರಾದ ಬಸವರಾಜ ಬಿಂಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಾ.ಸಂಗಮೇಶ ಅಸೂಟಿ ಸೇರಿದಂತೆ ಅನೇಕ ವೈದ್ಯರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗಿಯಾಗುವರು. ಹೃದಯ ಹಾಗೂ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ ಒದಗಿಸಲಾಗುವುದು, ಆದ್ದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರೂ ಇದರ ಪ್ರಯೋಜನವನ್ನ ಪಡೆದುಕೊಳ್ಳಬೇಕು.ಪ್ರತಿಭಾ ಪುರಸ್ಕಾರಕ್ಕೆ ಈಗಾಗಲೇ 80-90 ಜನ ವಿದ್ಯಾರ್ಥಿಗಳು ತಮ್ಮ ಹೆಸರನ್ನ ನೊಂದಾಯಿಸಿದ್ದು, ಗಾಣಿಗ ಸಮಾಜ ಬಾಂಧವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನ ನೊಂದಾಯಿಸಿ ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಸಮಾರಂಭದ ಸಾನಿಧ್ಯವನ್ನ ಪ.ಪೂ.ಡಾ.ಮಹಾಂತ ಬಸವಲಿಂಗ ಸ್ವಾಮಿಗಳು ವಹಿಸುವರು.ಅಧ್ಯಕ್ಷತೆ ಗಾಣಿಗ ಸಮಾಜದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ, ಉದ್ಘಾಟಕರಾಗಿ ಡಾ.ಹೃದಯ ರೋಗ ತಜ್ಞರು ಹಾಗೂ ಲೇಖಕರಾದ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಮುಖ್ಯ ಅತಿಥಿಗಳಾಗಿ ಷಣ್ಮುಖಪ್ಪ ಬಡ್ನಿ, ನಿಂಗಪ್ಪ ಕೆಂಗಾರ, ಬಿ ಬಿ ಐನಾಪೂರ ಭಾಗವಹಿಸುವುದಾಗಿ ಬಸವರಾಜ ಬಿಂಗಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಗಾಣಿಗ ಸಮಾಜದ ಗೌರವಾಧ್ಯಕ್ಷ ಷಣ್ಮುಖಪ್ಪ ಬಡ್ನಿ, ಉಪಾಧ್ಯಕ್ಷ ಬಿ ಬಿ ಐನಾಪುರ, ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಸಹ ಕಾರ್ಯದರ್ಶಿ ಸುರೇಶ ಮರಳಪ್ಪನವರ, ಕೋಶಾಧ್ಯಕ್ಷರಾದ ಎಸ್ ವಿ ಪವಾಡಿಗೌಡ್ರ, ಅಶೋಕ ಮಂದಾಲಿ, ಫಕ್ಕಿರೇಶ ಸಿಂದಗಿ, ಬಸನಗೌಡ ಹನಮಂತಗೌಡ್ರ, ಐ ಎಮ್ ಕಿರೇಸೂರ ಸೇರಿದಂತೆ ಜಿಲ್ಲೆಯ ಗಾಣಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 