ಶೈಕ್ಷಣಿಕ ಮತ್ತು ಕ್ರೀಡಾ ಪ್ರತಿಭೆಯ ಸಾಧನೆಗೆ: ಸನ್ಮಾನ ಗೌರವ
Honored for academic and sports talent
ಗಂಗಾವತಿ 23: ಕೊಪ್ಪಳದಫಾನಘಂಟಿಕಲ್ಯಾಣಮಂಟಪದಲ್ಲಿಹೈಬ್ರಿಡ್‌ನ್ಯೂಸ್‌ಮತ್ತುಮಹಿಳಾಧ್ವನಿಸಂಸ್ಥೆಸಹಯೋಗದಲ್ಲಿಆಯೋಜಿಸಲಾಗಿದ್ದ "ಪ್ರತಿಭಾಪುರಸ್ಕಾರಹಾಗೂ ಸಾಧಕರಿಗೆಪ್ರಶಸ್ತಿ ಪ್ರಧಾನ ಸಮಾರಂಭ" ವಿಜೃಂಭಣೆಯಿಂದ ನೆರವೇರಿತು.ಈ ಸಂಧರ್ಭದಲ್ಲಿಗಂಗಾವತಿಯ ಬೇತಲ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿನಿ ಕು. ರೇಖಾ ಮುರುಗೇಶ್‌ಅವರುಕನ್ನಡ ವಿಷಯದಲ್ಲಿಅತಿಉತ್ತಮ ಅಂಕಗಳನ್ನು ಪಡೆದು ಶೈಕ್ಷಣಿಕವಾಗಿಕೀರೀಟವನ್ನೇತೊಟ್ಟಿದ್ದಾರೆ. ಅಲ್ಲದೆ, ಅವರುರಾಷ್ಟ್ರಮಟ್ಟದಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ, ಪದಕ ಗಳಿಸಿರುವ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆಯೊಂದಿಗೆಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದಕ್ರೀಡಾ ಶಿಕ್ಷಕ ಬಾಬುಸಾಬ್‌ಅವರು, “ರೇಖಾಅವರುಕನ್ನಡದಲ್ಲಿಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆಕ್ರೀಡಾಕ್ಷೇತ್ರದಲ್ಲಿಯೂರಾಷ್ಟ್ರಮಟ್ಟದ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಮತೋಲನ ಸಾಧಿಸುವುದು ಸುಲಭವಲ್ಲದ ನಡುವೆಯೂ, ಸಮಯದ ಶಿಸ್ತಿನಿಂದ, ಅವಿರತ ಪರಿಶ್ರಮದಿಂದಅವರುಎರಡೂ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ 2025ನೇ ಸಾಲಿನ ಪದ್ಮಶ್ರೀ ಪುರಸ್ಕೃತರು ಭೀಮವ್ವ ಶಿಳ್ಳೇಕ್ಯಾತರ, ಶ್ರೀ ಸಿದ್ದೇಶ್ವರ ಸಂಸ್ಥಾನದ ಮರುಳಾರಾಧ್ಯ ಶಿವಚಾರ್ಯ ಸ್ವಾಮೀಜಿ, ಹೈಬ್ರಿಡ್ ನ್ಯೂಸ್‌ನ ಬಿ.ಎನ್. ಹೊರಪೇಟೆ, ಮಹಿಳಾ ಧ್ವನಿ ಸಂಸ್ಥೆಯ ಸ್ಥಾಪಕಿ ಪ್ರಿಯಾದರ್ಶಿನಿ ಮತ್ತುಇತರಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 