ಪೌರಕಾಮರ್ಿಕ ಸುಬ್ಬಯ ನಾಯ್ಕಗೆ ಸನ್ಮಾನ ಶ್ರಮಜೀವಿಗಳಿಗೆ ಗೌರವ ನೀಡಲು ಕಲಿಸಿದ್ದು ಶರಣರ ಕಾಯಕ ತತ್ವ: ನಾಗರಾಜ

ಲೋಕದರ್ಶನ ವರದಿ

ಕಾರವಾರ 02: ಶ್ರಮಜೀವಿಗಳಿಗೆ ಗೌರವ ನೀಡುವುದನ್ನು ಕಲಿಸಿದ್ದು ಶರಣರ ಕಾಯಕ ತತ್ವ. ಹನ್ನೇರಡನೇ ಶತಮಾನ ಕನ್ನಡ ನಾಡಿಗೆ ಮೂರು ಪ್ರಮುಖ ತತ್ವಗಳನ್ನು ಹಾಕಿ ಕೊಟ್ಟಿತು. ಆ ತತ್ವಗಳೇ  ಕಾಯಕ, ದಾಸೋಹ ಮತ್ತು ಸಮಾನತೆಗಳಾಗಿವೆ. 

ಮನುಷ್ಯ ಶ್ರಮಕ್ಕೆ ಗೌರವ ನೀಡುವುದನ್ನು ಕಲಿಸಿದ್ದು ಶರಣರು. ಪ್ರಮುಖವಾಗಿ ಬಸವಣ್ಣ ಕಾಯಕಕ್ಕೆ ನೀಡಿದ ಮಹತ್ವ ಇಡೀ ಸಮಾಜದಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲೂಕಿನ ಅಧ್ಯಕ್ಷರಾದ ನಾಗರಾಜ ಹರಪನಹಳ್ಳಿ ಅಭಿಪ್ರಾಯಪಟ್ಟರು.

ಅವರು ಆಝಾದ್ ಯುಥ್ ಕ್ಲಬ್  ಹಾಗೂ ಕಾರವಾರ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್  ಸಂಯುಕ್ತವಾಗಿ ವಿಶ್ವ ಕಾಮರ್ಿಕ ದಿನಾಚರಣೆಯ ನಿಮಿತ್ತ ಕಾರವಾರದ ಕನ್ನಡ ಭವನದಲ್ಲಿ  ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪೌರಕಾಮರ್ಿಕ ಸುಬ್ಬಯ್ಯ ಆರ್.ನಾಯ್ಕರನ್ನು  ಸನ್ಮಾನಿಸಿ ಮಾತನಾಡಿದರು.    ಕಾಯಕ ಎಂಬ ಪ್ರಯೋಗಶೀಲ ತತ್ವ ವಿಶ್ವಕ್ಕೆ ಮಾದರಿಯಾಗಿದೆ. ಮಾಕ್ರ್ಸ ಪ್ರತಿಪಾದಿಸಿದ ಶ್ರಮ ಮತ್ತು ಗೌರವ ನಮ್ಮ ಶರಣರ ಪರಂಪರೆಯಲ್ಲಿದೆ ಎಂದರು.ಕಾಯಕದ ಜೊತೆಗೆ ವೃತ್ತಿಗೆ ಗೌರವ ಮತ್ತು ಸಮಾನತೆಯನ್ನು ಸಾರಿದ ಶರಣರು ಮೇ ದಿನಕ್ಕೆ ಅರ್ಥತಂದು ಕೊಟ್ಟವರು. ಮೇ ಡೇ ಅಂದರೆ ಶ್ರಮಿಕರ ದಿನವೇ ಆಗಿದೆ.  ಕಾಮರ್ಿಕರು ನಗರದ ಉಸಿರು. ಅವರಿಲ್ಲದೇ ನಗರದ ಸೌಂದರ್ಯ ಸಾಧ್ಯವಿಲ್ಲ ಎಂದರು. 

ಪ್ರತಿಯೊಬ್ಬ ಕಾಮರ್ಿಕರ ರಕ್ಷಣೆಗೆ  ಕಾನೂನು ಇದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಕಾನೂನಿನ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆ ಯಾವುದೇ ಕ್ಷೇತ್ರದಲ್ಲಿ ತಮಗೆ ಅನ್ಯಾಯವಾದಾಗ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿ ತಮಗೆ ಆದ ಅನ್ಯಾಯದ ವಿರುದ್ಧ ಹೋರಾಡ ಬಹುದಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ಎಸ್.ಎ.ಖಾಜಿ ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿ ಆಗಮಿಸಿದ  ಕಾರವಾರದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಸಮೀರ್ ಸಕ್ಸೇನ ಮಾತನಾಡಿ ಕಾಮರ್ಿಕರು ತಮ್ಮ ಶ್ರಮವನ್ನು ದೇಶಕ್ಕಾಗಿ ಅರ್ಪಣೆ ಮಾಡಿದ ತ್ಯಾಗಿಗಳು ಅವರನ್ನು ಗೌರವಿಸುವುದು ಉತ್ತಮ ಕಾರ್ಯ ಎಂದು ಹೇಳಿದರು. ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ವಿನಾಯಕ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅಝಾದ್ ಕ್ಲಬ್ ಸಂಸ್ಥಾಪಕ ನಜೀರ್ ಅಹಮದ್ ಯು.ಶೇಖ್ ವೇದಿಕೆಯಲ್ಲಿದ್ದರು. 

ಸನ್ಮಾನ ಪಡೆದ ಸುಬ್ಬಯ್ಯ :

1990ರಿಂದ ನಗರ ಸಭೆ ಕಾರವಾರದಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಬ್ಬಯ್ಯ ರಾಮಾ ನಾಯ್ಕ ಅವರು 29 ವರ್ಷದಲ್ಲಿ ಸೇವೆಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. 

ಸುಬ್ಬಯ್ಯ ನಾಯ್ಕ ನಗರಸಭೆಯ ಒಬ್ಬ ಪ್ರಾಮಾಣಿಕ ಹಾಗೂ ನಿಷ್ಟಾವಂತ ವಾಹನ ಚಾಲಕರಾಗಿದ್ದು, ಕಾಯಾ ವಾಚಾ ಮನಸ್ಸಿನಿಂದ ದುಡಿಯುವ ಒಬ್ಬ ಕಾಮರ್ಿಕರಾಗಿದ್ದಾರೆ. ವಾಹನ ಚಾಲಕರಾದರೂ ಪ್ರಾರಂಭದ ದಿನಗಳಲ್ಲಿ ರಾತ್ರಿ ಒಂದು ಗಂಟೆಯವರೆಗೂ ಮನೆ ಮನೆಗೂ ನೀರನ್ನು ಸರಬರಾಜು ಮಾಡಿದವರಾಗಿದ್ದಾರೆ. ನಗರಸಭೆಯ ಉದ್ಯಾನವನಕ್ಕೆ ದಿನಾಲು ನೀರು ಹಾಕುವ ಕೆಲಸವನ್ನು ಮಾಡಿದ್ದಲ್ಲದೇ ಶವಗಳನ್ನು ಸಾಗಿಸುವ ಕೆಲಸವನ್ನೂ ಸಹ ಮಾಡಿದ ಶ್ರಮಿಕರಾಗಿದ್ದಾರೆ ಎಂದು ಫೈರೋಜಾ ಬೇಗಂ ಶೇಖ್ ಸುಬ್ಬಯ್ಯ ಅವರನ್ನು ಸಭೆಗೆ ಪರಿಚಯಿಸಿದರು.  

ಈ ಸನ್ಮಾನ ಕಾರ್ಯಕ್ರಮವನ್ನು ಕಾರವಾರದ ಸುಪ್ರಸಿದ್ಧ ಗುತ್ತಿಗೆದಾರರಾಗಿದ್ದ ದಿವಂಗತ ಜಿ.ಕೆ.ರಾಮ ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿತ್ತು.  ಕ್ಲಬ್ನ ಕಾರ್ಯದಶರ್ಿ ಮೊಹಮ್ಮದ್ ಉಸ್ಮಾನ್ ಶೇಖ್ ಸದಸ್ಯ ಮೊಹಮ್ಮದ್ ಅಸಿಫ್ ಶೇಖ್, ಭಾರತ್ ಸ್ಕೂಲ್ನ ಪ್ರಾಂಶುಪಾಲರಾದ ಮೊಹಮ್ಮದ್ ಖಲೀಲುಲ್ಲಾ, ಶಾಂತಿ ನಾಯ್ಕ, ಮೋಹನ ನಾಯ್ಕ, ಲಕ್ಷ್ಮಣ ನಾಯ್ಕ, ಸಚಿನ ನಾಯ್ಕ, ನವೀನ ನಾಯ್ಕ, ನೀಲಮ್ಮ ನಾಯ್ಕ, ನಗರ ಸಭೆಯ ಪೌರ ಕಾಮರ್ಿಕರು ಮತ್ತಿತರರು ಉಪಸ್ಥಿತರಿದ್ದರು.