ಸಿ ಎಸ್ ನಾಡಗೌಡರಗೆ ಸಂಪುಟ ದರ್ಜೇ ಸಚಿವ ಸ್ಥಾನ ನೀಡಿ ಗೌರವಿಸ: ಸಚೀನ ಪಾಟೀಲ

ಮುದ್ದೇಬಿಹಾಳ 17: ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಕಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರನ್ನು ಈ ಬಾರಿ ಸಂಪುಟ ದರ್ಜೇ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಯುವ ಮುಖಂಡ ಸಚೀನ ಪಾಟೀಲ ಆಗ್ರಹಿಸಿದ್ದಾರೆ. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಕಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಕಳೇದ ಆರು ಬಾರಿ ಶಾಸಕರಾಗಿ ಹಿಂದಿನ ಮುಖ್ಯಮಂತ್ರಿ ಎಸ್ ಬಂಗಾರ​‍್ಪನವರ ನೇತೃತ್ವದ ಸರಕಾರದಲ್ಲಿ ಕಾರ್ಮಿಕ ಸಚಿವಾರಿ, ದೇಹಲಿ ವಿಶೇಷ ಪ್ರನಿಧಿಯಾಗಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಅನುಭವಿ ಹಾಗೂ ಸರಳ ಸೌಜ್ಜನ ಸ್ವಚ್ಛ ರಾಜಕಾರಿಣಿಯಾಗಿ ಬೆಳದು ಬಂದವರು,. ಅವರ 40 ವರ್ಷಗಳ ರಾಜಕೀಯ ಜೀವನದಲ್ಲೊ ಒಂದೂ ಕಪ್ಪು ಚುಕ್ಕೆಯಿಲ್ಲದೇ ಜನಾನುರಾಗಿಯಾಗಿ, ಕ್ರೀಯಾಶಿಲರಾಗಿ ಪಕ್ಷ ಸಂಘಟನೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡು 2023ರಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ತಮ್ಮ ಗೇಲುವಿನ ಜೊತೆಗೆ ಇಡೀ ರಾಜ್ಯದಾಧ್ಯಂತ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಸ್ಥಾನಗಳಳ್ಲಿ ಗೆಲ್ಲಿಸುವಂತೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರವರ ಕೈಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂದಿ, ಯುವ ನಾಯಕ ರಾಹುಲ ಗಾಂಧಿಯವರ, ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೇರಿದಂತೆ ಹಲವಾರು ನಾಯರುಗಳಿಗೆ ನಿಕಟವ್ಯಕ್ತಿಗಳಾಗಿ  ರಾಜ್ಯದ ಸಂಭಾವಿತ ಏಕೈಕ ನಾಯಕರಾಗಿದ್ದಾರೆ. 

ಕಾರಣ ಈ ಬಾರಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಹಾಗೂ ಡಿ ಕೆ ಶಿವಕುಮಾರವರು ಶಿ ಎಸ್ ನಾಡಗೌಡರ ಅವರನ್ನು ಈ ಬಾರಿ ಸಂಪುಟ ದರ್ಜೇ ಸಚಿವರನ್ನಾಗಿ ಮಾಡುವ ಮೂಲಕ ಚುನಾವಣಾ ಸಮಯದಲ್ಲಿ ಸಚಿವರನ್ನಾಗಿ ಮಾಡುವ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಇದರಿಂದ ನಮ್ಮ ಮತಕ್ಷೇತ್ರದ ಜನ ನಿಮ್ಮ ಋನಿಯಾಗಿತ್ತಾರೆ ಎಂದು ಒತ್ತಾಯಿಸಿದ್ದಾರೆ.