ಸರ್ಕಾರಿ ಜಾಗ ಒತ್ತುವರಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಹೊನ್ನೂರ್ಪ. ಪಾಲಿಕೆ ಸದಸ್ಯೆಯ ಪತಿ ವಿರುದ್ಧದ ವಂಚನೆ ಆರೋಪ ಸುಳ್ಳು ಎಂದ ಹೊನ್ನೂರ್ಪ
Honnurpa clarifies allegations of encroachment on government land. Honnurpa calls fraud allegations
ಬಳ್ಳಾರಿ 24: ನಗರದ ಹೊರವಲಯದ ಬೂದಿಹಾಳ್ ಗ್ರಾಮದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬಡ ಜನರಿಗೆ ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೊನ್ನೂರ್ಪ ಹಾಗೂ ಪಾಲಿಕೆ ಸದಸ್ಯೆಯ ಪತಿ ಶಿವರಾಜ್ ಸ್ಪಷ್ಟನೆ ನೀಡಿದ್ದಾರೆ.ಬಳ್ಳಾರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹೊನ್ನೂರ್ಪ ತಂದೆ ಸಂಕಣ್ಣ, ಬೂದಿಹಾಳ್ ಗ್ರಾಮದ ಸರ್ವೆ ನಂ.125ಪಿ ವ್ಯಾಪ್ತಿಯ ಸುಮಾರು 4.10 ಎಕರೆ ಜಮೀನು ನಮ್ಮ ತಾತಂದಿರ ಕಾಲದಿಂದಲೂ ಸುಮಾರು 60 ವರ್ಷಗಳಿಂದ ನಮ್ಮ ವಶದಲ್ಲಿದ್ದು, ಪಹಣಿಯಲ್ಲೂ ನಮ್ಮ ಹೆಸರಿದೆ ಎಂದು ತಿಳಿಸಿದರು.
ಬಡತನ, ಆರೋಗ್ಯ ಸಮಸ್ಯೆ ಹಾಗೂ ಮಕ್ಕಳ ಮದುವೆ ಖರ್ಚಿನ ಹಿನ್ನೆಲೆ ಕೆಲವು ಸಂಬಂಧಿಕರಿಗೆ ಹಾಗೂ ಮನೆ ಇಲ್ಲದ ನಿರ್ಗತಿಕರಿಗೆ ಗುಡಿಸಲು ಮತ್ತು ಜೋಪಡಿಗಳನ್ನು ಹಾಕಿಕೊಳ್ಳಲು ಹಣ ಪಡೆದು ಅವಕಾಶ ನೀಡಿದ್ದಾಗಿ ಹೇಳಿದರು. ಈ ವೇಳೆ ವಾರ್ಡಿನ ಕಾರ್ೊರೇಟರ್ ಪತಿ ಶಿವರಾಜ್ ಅವರ ಸಮ್ಮುಖದಲ್ಲಿ ಹಣ ಪಡೆದುಕೊಂಡಿದ್ದು, ಕಾರಣ ತಾವು ಓದಿಲ್ಲದ ಕಾರಣ ಮತ್ತು ಅವರು ದೊಡ್ಡ ವ್ಯಕ್ತಿಯಾಗಿರುವುದರಿಂದ ಅವರ ಎದುರಲ್ಲೇ ವ್ಯವಹಾರ ನಡೆಸಿದ್ದೇನೆ ಎಂದು ತಿಳಿಸಿದರು. ಈ ಪ್ರಕರಣಕ್ಕೆ ಶಿವರಾಜ್ ಅವರಿಗೆ ಯಾವುದೇ ಸಂಬಂಧ ಇಲ್ಲ ಕೇವಲ ಮೂರನೇ ವ್ಯಕ್ತಿಯಾಗಿ (ಸಾಕ್ಷಿದಾರರು)ಎಂದು ಹೊನ್ನೂರ್ಪ ಸ್ಪಷ್ಟಪಡಿಸಿದರು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವರಾಜ್, ತಾವು ಯಾವುದೇ ಭೂಮಿಯನ್ನು ಖರೀದಿ ಮಾಡಿಲ್ಲ ಅಥವಾ ಮಾರಾಟ ಮಾಡಿಲ್ಲ ಎಂದು ಹೇಳಿದರು.
ವಾರ್ಡಿನ ಮುಖಂಡನಾಗಿರುವ ಕಾರಣ ಹೊನ್ನೂರ್ಪ ಅವರು ಕೆಲವರೊಂದಿಗೆ ಮಾಡಿಕೊಂಡ ಒಪ್ಪಂದದ ವೇಳೆ ಸಾಕ್ಷಿಯಾಗಿ ಮಾತ್ರ ಇದ್ದೆ ಎಂದರು.“ಜಮೀನಿನ ಪಹಣಿಯಲ್ಲಿ ನಿಮ್ಮ ಹೆಸರು ಇದ್ದರೂ ಅದು ಸರ್ಕಾರಿ ಭೂಮಿ ಆಗಿರುವುದರಿಂದ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನಾನು ತಿಳಿಸಿದ್ದೆ. ಆದರೆ ಖರೀದಿದಾರರು ಕೇವಲ ಗುಡಿಸಲು ಹಾಕಿಕೊಂಡು ವಾಸಿಸುವುದಾಗಿ ತಿಳಿಸಿದರು. ನಂತರ ಅವರು ಮಾಡಿಕೊಂಡ ಒಪ್ಪಂದದಂತೆ ಹಣವನ್ನು ನನ್ನ ಕೈಯಿಂದ ಲೆಕ್ಕ ಮಾಡಿ ಹೊನ್ನೂರ್ಪ ಅವರಿಗೆ ನೀಡಲಾಗಿದೆ. ಈ ಜಮೀನಿಗೂ ಹಾಗೂ ಖರೀದಿದಾರರಿಗೂ ನನಗೆ ಯಾವುದೇ ಸಂಬಂಧ ಇಲ್ಲ” ಎಂದು ಶಿವರಾಜ್ ಸ್ಪಷ್ಟನೆ ನೀಡಿದರು. ಹಾಗೂ ಸಂತ್ರಸ್ತರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ ಅವರಿಗೆ ನೀಡಿದ ಹಣವನ್ನು ಮರುಪಾವತಿ ಮಾಡಿಸುತ್ತೇನೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 