ಹಾಂಕಾಂಗ್ ಹಿಂಸಾಚಾರ : ಅಮೆರಿಕ ಕಳವಳ

ವಾಷಿಂಗ್ಟನ್ , ನ 19 :      ಹಾಂಗ್ ಕಾಂಗ್ ಹಿಂಸಾಚಾರದಿಂದ ಅಮೆರಿಕ  ಕಳವಳಗೊಂಡಿದ್ದು  ಪರಿಸ್ಥಿತಿ ನಿಯುಯಂತ್ರಣಕ್ಕೆ ಎಲ್ಲಾ ಪಕ್ಷಗಳಿಂದ ಸಂಯಮ, ಸಹಕಾರ  ಬಯಸುವುದಾಗಿ  ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಹೇಳಿದ್ದಾರೆ.   ಎಲ್ಲಾ  ಪಕ್ಷಗಳು  ಸಂಯಮ ಕಾಪಾಡಿಕೊಳ್ಳಬೇಕು  ಯಾವುದೇ ಕಡೆಯಿಂದ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಹಾಂಗ್ ಕಾಂಗ್ ನಲ್ಲಿ  ಶಾಂತಿ ಕಾಪಾಡುವ ಹೊಣೆ  ಹಾಂಗ್ ಕಾಂಗ್ ಸರ್ಕಾರ ಹೊಂದಿದೆ.  ಕಾನೂನು ಜಾರಿ ಪ್ರಯತ್ನಗಳಿಂದ ಮಾತ್ರ ಅಶಾಂತಿ ಮತ್ತು ಹಿಂಸಾಚಾರ  ಪರಿಹರಿಸಲಾಗುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಹಾಂಕಾಂಗ್ ನಲ್ಲಿ ಜನರ ಮೇಲಿನ  ಬಲಪ್ರಯೋಗ'ವನ್ನು ಅಮೆರಿಕ ಖಂಡಿಸಿದ್ದು, ಜನರ  ಸ್ವಾತಂತ್ರ ರಕ್ಷಿಸುವಂತೆ ಚೀನಾಕ್ಕೂ ಕರೆ ನೀಡಿದೆ.  ಅಸಮರ್ಥನೀಯ ಬಲಪ್ರಯೋಗವನ್ನು   ಖಂಡಿಸುತ್ತೇವೆ ಹಾಗೂ ಹಿಂಸೆ ತೊರೆದು ರಚನಾತ್ಮಕ ಮಾತುಕತೆಯಲ್ಲಿ ತೊಡಗುವಂತೆ  ಎಲ್ಲ ಪಕ್ಷಗಳನ್ನು ಒತ್ತಾಯಿಸುವುದಾಗಿ  ಅವರು ಹೇಳಿದ್ದಾರೆ .