ವಾಷಿಂಗ್ಟನ್, ನ 12 : ಹಾಂಕಾಂಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಅಮೆರಿಕ ಸರ್ಕಾರ ಖಂಡಿಸಿದೆ. ರಾಜಕೀಯ ಒಲವುಗಳನ್ನು ಬದಿಗೊತ್ತಿ, ಹಾಂಕಾಂಗ್ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ಬಲಿಯಾದವರಿಗೆ ನಮ್ಮ ಸಹಾನುಭೂತಿಯನ್ನು ಅರ್ಪಿಸುತ್ತೇವೆ ಮತ್ತು ಎಲ್ಲಾ ಪಕ್ಷಗಳಿಗೆ, ಪೊಲೀಸ್ ಮತ್ತು ಪ್ರತಿಭಟನಾಕಾರರಿಗೆ ಸಂಯಮವನ್ನು ತೋರಿಸಲು ಕರೆ ನೀಡುತ್ತೇವೆ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಮೋರ್ಗನ್ ಒರ್ಟಾಗಸ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಹಾಂಗ್ ಕಾಂಗ್ ಸರ್ಕಾರವು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸುವಂತೆ ಅಮೆರಿಕದ ಒತ್ತಾಯಿಸುತ್ತದೆ ಮತ್ತು ಪ್ರತಿಭಟನೆಗೆ ಕಾರಣವಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಂತೆ ಸೂಚಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಒತ್ತಿ ಹೇಳಿದ್ದಾರೆ.