ಮಿಲಾನ್, ನ 5 ದ್ವಿಚಕ್ರ ವಾಹನ ಕಂಪನಿ ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿ. ಮುಂದಿನ ವರ್ಷದೊಳಗೆ ಪ್ರೀಮಿಯಮ್- 2 ಶ್ರೇಣಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.
ಮಂಗಳವಾರ 'ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಕಾರ್ಯನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರಭು ನಾಗರಾಜ್ , ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಶ್ರೇಣಿಯ ದ್ವಿಚಕ್ರ ವಾಹನಗಳ ಬೇಡಿಕೆ ಸಾಕಷ್ಟು ಹೆಚ್ಚುತ್ತಿದೆ. ಅದರಲ್ಲೂ ಯುವಕರಲ್ಲಿ ಪ್ರೀಮಿಯಮ್ ವರ್ಗದ ವಾಹನಗಳತ್ತ ಆಸಕ್ತಿ ಹೆಚ್ಚಾಗಿದೆ ಎಂದರು.
ಈಗಾಗಲೇ ಯೂರೋಪಿಯನ್ ಮಾರುಕಟ್ಟೆಯಲ್ಲಿರುವ ಸ್ಕೂಟರ್ ಗಳನ್ನು ಜಪಾನ್ ಮೂಲಕ ಕಂಪನಿಯೊಂದು ಭಾರತದಲ್ಲಿ ಪರಿಚಯಿಸಲಿದೆ.
ಕಂಪನಿ ಯೂರೋಪ್ ನಲ್ಲಿ ಪರಿಸರದ ಗುಣಮಟ್ಟವನ್ನು ಅನುಸರಿಸುತ್ತಿದ್ದು, ಈ ವಾಹನಗಳು ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪರಿಚಯಿಸಲಿದೆ. ಈ ಹಿಂದೆ ಯೂರೋಪಿಯನ್ ಪ್ರಾಂತ್ಯದ ಕಂಪನಿ ಜಾಗತಿಕ ಮಾರುಕಟ್ಟೆಗೆ ಸಿಬಿಆರ್ 1000 ಆರ್ ಆರ್ ಮೋಟಾರ್ ಸೈಕಲ್ ಅನ್ನು ಪರಿಚಯಿಸಿತ್ತು. ಇದರ ಜೊತೆಗೆ, ಎಸ್ ಎಚ್ 125 ಐ, ಸಿಎಂಎಸ್ 500 ರೆಬೆಲ್ ಮತ್ತು ಆಫ್ರಿಕಾ ಟ್ವಿನ್ ಕೂಡ ಬಿಡುಗಡೆಗೊಂಡಿದ್ದವು.
ಈ ಎಲ್ಲಾ ವಾಹನಗಳನ್ನು 2020ರ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸ ಮಾಡಲಾಗಿದೆ. ಇವುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ನಂತರ ಗ್ರಾಮೀಣ ಪ್ರದೇಶದತ್ತಲೂ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದೇವೆ ಎಂದು ನಾಗರಾಜ್ ಹೇಳಿದರು.
ಭಾರತಕ್ಕೆ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ದ್ವಿಚಕ್ರ ವಾಹನವನ್ನು ದಿನನಿತ್ಯದ ಕೆಲಸಗಳಿಗೆ ಬಳಸುವುದರಿಂದ ಬೇಡಿಕೆ ಹೆಚ್ಚಿದೆ. ಆದ್ದರಿಂದ ಬೇಡಿಕೆಗಳನ್ನು ಪೂರೈಸಲು ಮೂಲಭೂತ ಸೌಕರ್ಯಗಳನ್ನು ಹೊಂದುವುದು ಅನಿವಾರ್ಯವಾಗಿದೆ ಎಂದರು.