ಹೋಮಿಯೋಪಥಿ ಓಷಧಿಗಳು ಹಿರಿಯ ನಾಗರಿಕರಿಗೆ ಅತ್ಯುತ್ತಮ: ಕರ್ನಲ್ ದೇವಾಶಿಶ್ ಡೇ

ಹೋಮಿಯೋಪಥಿ ಓಷಧಿಗಳು ಹಿರಿಯ ನಾಗರಿಕರಿಗೆ ಅತ್ಯುತ್ತಮ: ಕರ್ನಲ್ ದೇವಾಶಿಶ್ ಡೇ  Homeopathic medicines are best for senior citizens: Colonel Devashish Dey

ಲೋಕದರ್ಶನ ವರದಿ 

ಬಾಗಲಕೋಟೆ ಏ 21 : ನಗರದ ಬಿವಿವಿಎಸ್ ಕ್ಯಾಂಪಸನಲ್ಲಿರುವ ಎನ್‌.ಸಿ.ಸಿ ಬಟಾಲಿಯನ್ ದಲ್ಲಿ ನಿವೃತ್ತ ಸೇನಾ ನೌಕರಿಗಾಗಿ ಬಿ.ವ್ಹಿ.ವ್ಹಿ.ಎಸ್‌. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಯೋಜಿಸಿದ ಎರಡು ದಿನಗಳ ಉಚಿತ ಹೋಮಿಯೋಪಥಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ಹೋಮಿಯೋಪಥಿ ಓಷಧಿಗಳು ಹಿರಿಯ ನಾಗರಿಕರಿಗೆ ಸೂಕ್ತ ಹಾಗೂ ಅತ್ಯುತ್ತಮವಾಗಿವೆ ಎಂದು 37 ಕರ್ನಾಟಕ ಬಟಾಲಿಯನ್ ಅಧಿಕಾರಿ ಕರ್ನಲ್ ದೇವಾಶಿಶ್ ಡೇ ಅಭಿಪ್ರಾಯಪಟ್ಟು ಬಿವಿವಿ ಸಂಘ ಜನ ಸಾಮಾನ್ಯರ ಬಗ್ಗೆ ಇರುವ ಸೇವಾ ಮನೋಭಾವವನ್ನು ಶ್ಲಾಘನೆ ಮಾಡಿ, ಈ ಶಿಬಿರದ ಸದುಪಯೋಗ ಪಡೆದುಕೊಬೇಕೆಂದು ಹೇಳಿದರು.   

ಪ್ರಾಧ್ಯಾಪಕಿಯರಾದ ಡಾ.ವಿಜಯಲಕ್ಷ್ಮಿ ಪಾಟೀಲ. ಡಾ.ತೃಪ್ತಿ ಶಿಂದೆ ಹೋಮಿಯೋಪಥಿ ಚಿಕಿತ್ಸಾ ವಿಧಾನ ಕುರಿತು ಸವಿಸ್ತಾರವಾಗಿ ಮಾತನಾಡಿದರು. ವೇದಿಕೆಯ ಮೇಲೆ ಈ.ಸಿ.ಎಚ್ ಘಟಕದ ಕರ್ನಲ್ ಉಮಾಕಾಂತ ಫಲ್ಹಾರಿ. ಮೇಜರ್ ಸುಬೇದಾರ ಮಚೇ0ದ್ರ ಪಾಟೀಲ ಉಪಸ್ಥಿತರಿದ್ದರು. 

ನಿವೃತ್ತ ಸೇನಾ ನೌಕರರ ಸಂಘದ ಅಧ್ಯಕ್ಷ ಅರ್ಜುನ ಕೋರಿ ಸ್ವಾಗತಿಸಿ ವಂದಿಸಿದರು. ಶಿಬಿರದಲ್ಲಿ ವೈದ್ಯಾಧಿಕಾರಿ ಡಾ.ಮೇಘಾ ತಳವಾರ. ಪ್ರಾಧ್ಯಾಪಕರುಗಳಾದ ಡಾ.ರವಿ.ಕೋಟೆಣ್ಣವರ. ಡಾ.ಅಖಿಲಾ ಹುಲ್ಲೂರ. ಡಾ.ವಿಜಯಲಕ್ಷ್ಮಿ ಪೂಜಾರ. ಡಾ.ವಿಜಯಕುಮಾರ ಸಂಕೇಶ್ವರಿ. ಡಾ.ಐಶ್ವರ್ಯಾ ಪಾಟೀಲ ಹಾಗೂ ಕಲಿಕಾ ವೈದ್ಯರು. ಭಾಗವಹಿಸಿ ಚಿಕಿತ್ಸೆ ನೀಡಿದರು. ಶಿಬಿರದಲ್ಲಿ ನೂರಾರು ಮಾಜಿ ಸೈನಿಕರು ಹಾಗೂ ಕುಟುಂಬ ವರ್ಗದವರು ಚಿಕಿತ್ಸೆ ಪಡೆದುಕೊಂಡರು.