ಲೋಕದರ್ಶನವರದಿ
ಮುಧೋಳ: ಉಣ್ಣುವಾಗ. ಉಡುವಾಗ. ತೊಡುವಾಗ, ದುಡಿಯುವಾಗ, ಹಾಡುವಾಗ, ಪ್ರತಿ ಕ್ಷಣವು ನಮ್ಮ ಬದುಕಿನ ಪ್ರತಿಕ್ಷಣವು ಜನಪದದಿಂದ ಕೂಡಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಆಕಾಶವಾಣಿ ಬಿ.ಗ್ರೇಡ್, ಕಲಾವಿದೆ ಮುತ್ತವ್ವ ಲಕ್ಷೇಶ್ವರ ಅಭಿಪ್ರಾಯ ಪಟ್ಟರು.
ಅವರು ಮುಧೋಳದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮುಗಳಖೋಡದ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಜರುಗಿದ. ಜಾನಪದ ಕಲಾಮೇಳವನ್ನು ಡೊಳ್ಳು ನುಡಿಸಿ ಉದ್ಘಾಟಿಸಿ ಮನದಿಂಗಿತವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಕಲೆಯನ್ನು ಆರಾಧಿಸುವ ಕಲಾವಿದರು ಮನೆಗೊಬ್ಬರು ಹುಟ್ಟಬೇಕು. ಕೇವಲ ಮಾತಿನಿಂದ ಕಲೆ ಉಳಿಯದು ಎಂದರು.
ಕಲಾವಿದರಾದ ನಿಂಗವ್ವ ಸುನಗಾರ, ನಿಂಗವ್ವ ಕನ್ನೋಳ್ಳಿ, ಅನ್ನವ್ವ ಡಂಗಿ, ಶಿವಲಿಂಗವ್ವ ಪೊಲೀಸ, ಲಕ್ಷ್ಮೀಬಾಯಿ ಡಂಗಿ, ಮುಂತಾದವರು ಉಪಸ್ಥಿತರಿದ್ದರು.
ಕುಳಲಿಯ ಶಿವಪುತ್ರ ಗಣಿ ಸಂಗಡಿಗರಿಂದ ಭಜನೆ, ಯಲ್ಲವ್ವ ಮೀಸಿ ಸಂಗಡಗರಿಂದ ಚೌಡಕಿ ಪದ, ಬಂದವ್ವ ಸುನಗಾರ ಸಂಗಡಿಗರಿಂದ ಸಂಪ್ರದಾಯ ಪದ, ಚಿಕ್ಕೂರಿನ ಲಕ್ಷ್ಮಪ್ಪ ಕಾಳವಗೋಳ ಸಂಗಡಿಗರಿಂದ ಡೊಳ್ಳಿನ ಪದ, ಶಿವಲಿಂಗವ್ವ ಪೊಲೀಸ ಸಂಗಡಿಗರಿಂದ ಶೋಭಾನೆ ಪದ, ರಾಮಪ್ಪ ವಜ್ಜರಮಟ್ಟಿ ಸಂಗಡಿಗರಿಂದ ತತ್ವಪದ, ಮುಂತಾದ ಕಲಾ ತಂಡಗಳಿಂದ ಜನಪದ ಸೇವೆ ಜರುಗಿತು.
ಲೋಕನಾಯಕಿ ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ ಸ್ವಾಗತಿಸಿ ಹೊಂದಿಸಿದರು