ಸಿರುಗುಪ್ಪ ತಾಲೂಕು ಮುಸ್ಲಿಮರಿಂದ ಪವಿತ್ರ ಉಮ್ರಾ ಯಾತ್ರೆ
Holy Umrah pilgrimage by Muslims from Siruguppa Taluk
ಸಿರುಗುಪ್ಪ, 17: ಸಿರುಗುಪ್ಪ ತಾಲೂಕಿನ ಮುಸ್ಲಿಂ ಬಾಂಧವರು ಪವಿತ್ರ ಉಮ್ರಾ ಯಾತ್ರೆ ಕೈಗೊಂಡು ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾ ನಗರಗಳತ್ತ ಪ್ರಯಾಣ ಬೆಳೆಸಿದರು. ಯಾತ್ರಾರ್ಥಿಗಳನ್ನು ಬೀಳ್ಕೊಡಲು ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸಮುದಾಯದ ಹಿರಿಯರು ಆಗಮಿಸಿ ಶುಭ ಹಾರೈಸಿದರು. ಯಾತ್ರೆಯು ಸುಗಮವಾಗಿ ನೆರವೇರಲಿ ಹಾಗೂ ಎಲ್ಲರೂ ಕ್ಷೇಮವಾಗಿ ಮರಳಲಿ ಎಂದು ಪ್ರಾರ್ಥಿಸಿದರು.
ಯಾತ್ರಾರ್ಥಿಗಳು ಮೆಕ್ಕಾದ ಮಸ್ಜಿದ್ ಅಲ್ ಹರಾಮ್‌ನಲ್ಲಿ ಪವಿತ್ರ ಕಅಬಾಕ್ಕೆ ತವಾಫ್ ಹಾಗೂ ಸಈ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಬಳಿಕ ಮದೀನಾದ ಮಸ್ಜಿದ್ ಅನ್ ನಬವಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಉಮ್ರಾ ಯಾತ್ರೆಯು ಆತ್ಮಶುದ್ಧಿ, ದೇವಭಕ್ತಿ, ತಾಳ್ಮೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ಪಯಣವಾಗಿದ್ದು, ಯಾತ್ರಾರ್ಥಿಗಳಿಗೆ ಆಧ್ಯಾತ್ಮಿಕ ನೆಮ್ಮದಿ ಹಾಗೂ ಮನಃಶಾಂತಿ ದೊರೆಯಲಿ ಎಂದು ಸಮುದಾಯದ ಹಿರಿಯರು ಹಾರೈಸಿದರು. ಗಚ್ಛಿನ ಮನೆ ಮೆಹಬೂಬ್ ಭಾಷಾ, ಸರ್ವರ್ ಭಾಷಾ, ರಸೂಲ್ ಬೀ, ಜಮಾಲ್ ರಂಜಾನ್ ಸಾಬ್, ಜಮಾಲಮ್ಮ ಸೇರಿದಂತೆ ಹಲವರು ಉಮ್ರಾ ಯಾತ್ರೆಗೆ ತೆರಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 