ಹೊಳಗುಂದಿ : ಸಂಭ್ರಮದ ಹನುಮಪ್ಪ ಸ್ವಾಮಿಯ ಮುಳ್ಳು ಗದ್ದುಗೆ ಉತ್ಸವ
Holagundi: A festive festival to pay homage to Lord Hanuman's thorny throne
ಲೋಕದರ್ಶನ ವರದಿ
ಹೂವಿನಹಡಗಲಿ: 20- ಹೊಸ ವರುಷದ ಯುಗಾದಿ ಹಬ್ಬದಲ್ಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ಶ್ರೀ ಹನುಮಪ್ಪ ಸ್ವಾಮಿಯ ರಥೋತ್ಸವ ನಿಮಿತ್ತ ಶುಕ್ರವಾರ ಸಾಯಂಕಾಲ 5.30ಕ್ಕೆ ಜರುಗಿದ ಭೇಟಿ ಮುಳ್ಳು ಗದ್ದುಗೆ ಉತ್ಸವ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ 10ಗಂಟೆಗೆ ಭಕ್ತರು ಗ್ರಾಮದ ಹೊರವಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಭೇಟಿ ಮುಳ್ಳಿನ ಕಂಟಿಗಳನ್ನು ಕಡಿದು ಕೊಂಡು ದೇಗುಲ ಮುಂಭಾಗದಲ್ಲಿ ಮುಳ್ಳಿನ ಗದ್ದುಗೆ ಸಿದ್ದಪಡಿಸುತ್ತಾರೆ. ಸಂಜೆ 5.30ಕ್ಕೆ ರಾಶಿ ರಾಶಿ ಹಾಕಿರುವ ಭೇಟಿ ಮುಳ್ಳಿನ ಕಂಟಿಗಳ ಮೇಲೆ ಬರಗಾಲಲ್ಲಿ ಪೂಜಾರಿ ಬಸವರಾಜ್ ಮುಳ್ಳು ಗದ್ದುಗೆ ಹಾಯ್ದರು. ಈ ಉತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸಂಭ್ರಮದ ಹನುಮಪ್ಪನ ರಥೋತ್ಸವ: ಹೊಳಗುಂದಿ ಗ್ರಾಮದಲ್ಲಿ ಗುರುವಾರ ಸಂಜೆ 5.30ಕ್ಕೆ ಹನುಮಪ್ಪ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ತೇರನ್ನು ಎಳೆಯಲು ಚಾಲನೆ ನೀಡಲಾಯಿತು. ಸಮಾಳ, ನಂದಿಕೋಲು ಸೇರಿದಂತೆ ಮಂಗಳ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು.ದೇಗುಲ ಅಧ್ಯಕ್ಷ ಸಿ.ಬಸವರಾಜ್, ಟಿ.ಹನುಮಂತಪ್ಪ, ಪರಶುರಾಮಪ್ಪ, ಹಾವನೂರು ರಾಜಶೇಖರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಚಂದ್ರ ದರ್ಶನ : ಪ್ರತಿವರ್ಷ ದಂತೆ ಯುಗಾದಿ ಪಾಂಡ್ಯ ನಂತರ ಶುಕ್ರವಾರ ಚಂದ್ರ ದರ್ಶನ ಮಾಡಿ ತಂದೆ -ತಾಯಿ, ಗುರು-ಹಿರಿಯರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 