ದಿ. 14 ರಂದು ಗಡಿನಾಡು ಉತ್ಸವ ಐತಿಹಾಸಿಕ ಕಾರ್ಯಕ್ರಮ

Historical Program Gadinaadu Utsav on Dec. 14th

ಸಂಬರಗಿ 13: ಗಡಿ ಭಾಗದ ಬಳ್ಳಿಗೇರಿ ಗ್ರಾಮದಲ್ಲಿ ದಿ. 14 ರಂದು ಸಂಜೆ 6 ಗಂಟೆಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ "ಗಡಿನಾಡು ಉತ್ಸವ" ಎಂಬ ಐತಿಹಾಸಿಕ ಕಾರ್ಯಕ್ರಮ ಜರುಗಲಿದೆ. 

ಈ ಕಾರ್ಯಕ್ರಮ ಉದ್ಘಾಟನೆಗೆ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ ಬಿ ಎನ್ ಜಗದೀಶ್ ಅಥಣಿಗೆ ಆಗಮಿಸುತ್ತಿದ್ದಾರೆ. ಅಥಣಿ ತಾಲೂಕಿನ ಹಾಗೂ ಸುತ್ತಮುತ್ತಲಿನ ಕನ್ನಡ ಮನಸುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಜಯ ಕರ್ನಾಟಕ ಸಂಘಟನೆಯ ಅಥಣಿ ತಾಲೂಕು ಘಟಕದ ಅಧ್ಯಕ್ಷ ಆಕಾಶ ನಂದಗಾಂವ ಹೇಳಿದರು.ಈ ಕಾರ್ಯಕ್ರಮಕ್ಕೆ ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾರಾಜರು ಕಕಮರಿ ಮಠ ಇವರು ದಿವ್ಯ ಸಾನಿಧ್ಯ ವಹಿಸಲಿದ್ದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ ಬಿ ಎನ್ ಜಗದೀಶ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳು ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಉದ್ಘಾಟನೆ ಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಮಾಜಿ ಶಾಸಕರುಗಳಾದ ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಶಹಜಹಾನ್ ಡೊಂಗರಗಾವ, ಹಾಗೂ ಮುಖಂಡರಾದ ನಿಂಗಪ್ಪ ಕೊಕಲೆ, ಸದಾಶಿವ ಬುಟಾಳಿ ಗಜಾನನ ಮಂಗಸೂಳಿ, ಧರೆಪ್ಪ ಟಕ್ಕಣ್ಣವರ, ಶಿವು ಗುಡ್ಡಾಪುರ ಚಂದ್ರಕಾಂತ್ ಇಮ್ಮಡಿ ಸೇರಿದಂತೆ ಅನೇಕ ಮುಖಂಡರು ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.     

ಈ ವೇಳೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೊಡಕರ ಮಾತನಾಡಿ . ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ' ಜಯ ಕರ್ನಾಟಕ ರತ್ನ" ಪ್ರಶಸ್ತಿಯನ್ನು ನೀಡಲಿದ್ದು ಅನೇಕ ಜಾನಪದ ಕಲಾವಿದರು ಕಲಾತಂಡಗಳು ಆಗಮಿಸಲಿವೆ ಎಂದರು. ಮುಖಂಡ ರವಿ ಬಡಕಂಬಿ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ವಿವಿಧ ಜಿಲ್ಲೆಯ ಪದಾಧಿಕಾರಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾಹಿತಿಗಳು, ವಿಶೇಷ ಆವ್ಹಾನಿತರು, ಕನ್ನಡಪರ ಹೋರಾಟಗಾರರು, ಅಥಣಿ, ಬಳ್ಳಿಗೇರಿ, ಗುಂಡೆವಾಡಿ, ಕೀರಣಗಿ ಸೇರಿದಂತೆ ಸುತ್ತಲೂ ಹತ್ತಾರು ಗ್ರಾಮಗಳಿಂದ ಅಷ್ಟೇ ಅಲ್ಲದೆ ತಾಲೂಕಿನ ಹಲವಾರು ಗ್ರಾಮಗಳಿಂದ ಕನ್ನಡ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.  

ಈ ವೇಳೆ ಕನ್ನಡ ಪರ ಹೋರಾಟಗಾರ ದೀಪಕ್ ಬುರ್ಲಿ ಜಯ ಕರ್ನಾಟಕ ಸಂಘಟನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ ಪವಾರ ಪ್ರಶಾಂತ ತೊಡಕರ, ಮುಖಂಡ ರವಿ ಬಡಕಂಬಿ, ಕರವೇ ಅಧ್ಯಕ್ಷ ದೀಪಕ ಬುರ್ಲಿ, ಸಚಿನ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.