ಗದುಗಿನಲ್ಲಿ ಐತಿಹಾಸಿಕ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಯಶಸ್ವಿ
Historic Atirudha Mahayaga Junior Kumbh Mela a success in Gadug
ಗದಗ 19 : ಅತಿರುದ್ರ ಯಾಗ ಎಂದರೆ ಕೊನೆ ಇಲ್ಲದ ಯಾಗ ಎಂದರ್ಥ ಗದುಗಿನ ಜನತೆಯ ಸಂಕಲ್ಪದಿಂದ ಮಾಡಿದ ಈ ಮಹಾಯಾಗ ಮುಂದಿನ ದಿನಗಳಲ್ಲಿ ಸ್ಮರಣೀಯ ದಿನವಾಗಲಿದೆ. ಇಲ್ಲಿನ ಜನತೆಗೆ ಶಿವನು ಸದಾ ರಕ್ಷಣೆ ಮಾಡುವನು ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಹೇಳಿದರು. ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನ. 11 ರಿಂದ 18 ರ ವರೆಗೆ ಜರುಗಿದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ಮಹಾಯಾಗ ವಯಕ್ತಿಕವಾಗದೆ ಲೋಕಕಲ್ಯಾಣಕ್ಕಾಗಿ ಮಾಡಲಾಗಿದೆ. ಈ ಮಹಾಯಾಗದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೆ ವರ್ಷದೊಳಗೆ ಶಿವನು ಒಳ್ಳೆಯದನ್ನೆ ಮಾಡುತ್ತಾನೆ. ಎಲ್ಲರೂ ಶಕ್ತಿಮೀರಿ ಸೇವೆ ಮಾಡಿದ್ದಾರೆ. ಇದು ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿ ಶಿವನು ನಾವೇಲ್ಲರೂ ಈ ಮಹಾಯಾಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾನೆ. ಇಲ್ಲಿ ನಡೆದ ಮಹಾಯಾಗ ಬರಿ ಗದುಗಿನ ಜನತೆಯ ಕಲ್ಯಾಣಕ್ಕಾಗಿ ಅಲ್ಲ, ಇದು ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅಲ್ಲದೆ, ಇಡಿ ಜಗತ್ತಿನ ಕಲ್ಯಾಣಕ್ಕಾಗಿ ನಡೆದಿದೆ ಎಂದು ಹೇಳಿದರು.
ಮಣಕವಾಡದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ಸಂತರ ಆಗಮನ ವಸಂತದ ಆಗಮನವಾದಂತೆ. ವಸಂತದ ಗಾಳಿ ಬಾಡಿದ ಗಿಡದಲ್ಲಿ ಚಿಗುರು ಮೂಡಿಸುವಂತೆ ಸಾಧು-ಸಂತರುಗಳು ಸತ್ತಂತ್ತಿರುವ ಜನರ ಬದುಕನ್ನು ಹಸನಗೊಳಿಸುತ್ತಾರೆ. ಹೋಮ ಮಾಡಿದರೆ ನಾನು ಮತ್ತು ನನ್ನ ಕುಟುಂಬಕ್ಕೆ ಉತ್ತಮ ಫಲ ನೀಡಲಿ ಎಂಬುದಾಗಿರುತ್ತದೆ. ಆದರೆ, ಯಾಗವು ಸಮಸ್ತ ಲೋಕ ಕಲ್ಯಾಣಕ್ಕಾಗಿ ಜನರಿಗೆ ಸುಖ, ಶಾಂತಿ ನೀಡಲಿ ಎಂಬುದಾಗಿರುತ್ತದೆ. ಕೆಟ್ಟ ಪದಗಳು ಪರಸ್ಪರ ದ್ವೇಷ ಸಾಧಿಸುವಂತೆ ಮಾಡುತ್ತದೆ ಎಂದಾದರೆ ಶಿವನ ನಾಮಸ್ಮರಣೆಯು ಎಷ್ಟೊಂದು ಶಕ್ತಿ ತುಂಬುತ್ತದೆ ಎಂದು ನೀವು ಉಹಿಸಬಹುದು. ಸಾಲುಮರದ ತಿಮ್ಮಕ್ಕ ತನಗೆ ಶಿಶು ಹುಟ್ಟಲಿಲ್ಲ ಎಂಬ ಕೊರಗನ್ನು ದೂರು ಮಾಡಲು ನಾಲ್ಕೂವರೆ ಕೀಲೋಮೀಟರ ವರೆಗೆ 385 ಆಲದ ಮರಗಳ ಸಸಿಗಳನ್ನು ನೆಟ್ಟು ಪರಿಸರವನ್ನು ಪರಿಶುದ್ದಗೊಳಿಸಿದ್ದಾರೆ. ಅದೇರಂತೆ ಎಲ್ಲರು ಪರಿಸರ ರಕ್ಷಣೆ ಮಾಡಬೇಕು. ಇಡಿ ಎಷ್ಯಾ ಖಂಡದಲ್ಲಿ ಕಪ್ಪತಗುಡ್ಡದ ಶುದ್ದ ಗಾಳಿ ಹೆಸರು ಮಾಡಿದೆ. ಯಜ್ಞದಿಂದ ಹೊರಹೊಮ್ಮಿದ ಹೊಗೆಯು ಪರಿಸರವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು.
ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ನರಗುಂದ ಶಾಸಕರಾದ ಸಿ.ಸಿ.ಪಾಟೀಲ ಅವರು ಮಾತನಾಡಿ, ಗದುಗಿನಲ್ಲಿ ನ. 11 ರಿಂದ 18ರ ವರೆಗೆ ನಡೆದ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳವು ಯಶಸ್ವಿಯಾಗಿ ನಡೆಯಲು ಪೂಜ್ಯಶ್ರೀ ಮಹಾಂತ ಸಹದೇವಾನಂದ ಗಿರಿ ಜಿ ಮಹಾರಾಜರು ಕಾರಣರಾಗಿದ್ದಾರೆ. ಇದೊಂದು ನನ್ನ ಜೀವನದ ಅವಿಸ್ಮರಣೆಯ ದಿನವಾಗಿದೆ. ಗದುಗಿನ ಜನತೆ ಎಂಟು ದಿನಗಳವರೆಗೆ ಲೌಕಿಕ ಜಗತ್ತನ್ನು ತೊರೆದು ದೇವಲೋಕದಲ್ಲಿ ಇದ್ದಂತೆ ವಾತಾವರಣ ನಿರ್ಮಾಣವಾಗಿತ್ತು ಎಂದರೆ ತಪ್ಪಾಗಲಾರದು. ಸನಾತನ ಧರ್ಮ, ಹಿಂದೂ ಸಂಸ್ಕೃತಿ ಉಳಿಯಬೇಕಾದರೆ ಸಾಧು ಸಂತರ ಮಾರ್ಗದರ್ಶನ ಅಗತ್ಯವಿದೆ. ಗದುಗಿನಲ್ಲಿ ನಡೆದ ಕುಂಭಮೇಳ ಪ್ರಯಾಗರಾಜದಲ್ಲಿ ನಡೆದ ಕುಂಭಮೇಳಕ್ಕಿಂತ ಕಡಿಮೆ ಇರಲಿಲ್ಲ. ಭಕ್ತರು ಎಂಟು ದಿನಗಳವರೆಗೆ ಇಲ್ಲಿ ಕಲಿತ ಸಂಸ್ಕಾರವನ್ನು ಮನೆಯಲ್ಲಿ ಮಕ್ಕಳಿಗೆ ಮುಂದುವರೆಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ, ಗದುಗಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಮಹಿಳೆಯರ ಕುಂಭಮೇಳವು ಪ್ರಮುಖ ಪಾತ್ರವಹಿಸಿದೆ. ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದವರು ಸ್ವಾರ್ಥಕ್ಕಾಗಿ ಅಲ್ಲ, ಲೋಕಕಲ್ಯಾಣಕ್ಕಾಗಿ ತನು-ಮನ-ಧನದಿಂದ ಸೇವೆ ಮಾಡಿದ್ದಾರೆ. ಇದು ದೇಶದ ಅಭಿವೃದ್ದಿ ಮತ್ತು ಶಾಂತಿ ಸ್ಥಾಪನೆ ಮಾಡುವದಕ್ಕಾಗಿ ಮಾಡಲಾಗಿದೆ. ದೇಶದ ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಜನರು ಪ್ರಯತ್ನ ಮಾಡಿದರೂ ಅದು ಸಾದ್ಯವಾಗಿಲ್ಲ ಅಂತಹ ಪವಿತ್ರ ಹಿಂದೂ ಧರ್ಮವನ್ನು ಉಳಿಸಿಕೊಂಡು ನಾವೇಲ್ಲರೂ ಹೋಗಬೇಕಾಗಿದೆ. ನಮ್ಮ ದೇಶವು ಆರ್ಥಿಕವಾಗಿ ಶ್ರೀಮಂತವಾಗಿಲ್ಲ ಆದರೆ, ಧಾರ್ಮಿಕವಾಗಿ ನಾವುಗಳು ಜಗತ್ತಿಗೆ ಶ್ರೀಮಂತರಾಗಿದ್ದೆವೆ. ಎಂದು ಹೇಳಿದರು. ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಅವರು ಮಾತನಾಡಿ, ಗದುಗಿನಲ್ಲಿ ಎಂಟು ದಿನಗಳ ವರೆಗೆ ನಡೆದ ಕುಂಭಮೇಳ ಇತಿಹಾಸ ನಿರ್ಮಾಣ ಮಾಡಿದೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ತಿಂಗಳಿಂದ ಎಲ್ಲರೂ ಕೆಲಸ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾಂತ ಪೂಜ್ಯಶ್ರೀ ಸಹದೇವಾನಂದ ಗಿರಿ ಮಹಾರಾಜರು ನೇತೃತ್ವವಹಿಸಿದ್ದರು. ಶಿರೋಳ ಮಠದ ಪೂಜ್ಯಶ್ರೀ ಯಚ್ಚರೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು. ಇದೇ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸೇವಾ ಸಮಿತಿಯ ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ರವಿ ದಂಡಿನ, ಫಕ್ಕೀರಸಾ ಭಾಂಡಗೆ, ಬಿ.ಬಿ. ಅಸೂಟಿ, ರಾಜು ಕುರಡಗಿ, ಬಸವರಾಜ ಬಿಂಗಿ, ವಿ.ಕೆ. ಗುರುಮಠ, ಪ್ರಕಾಶ ಬೊಮ್ಮನಹಳ್ಳಿ, ಗೋಪಾಲ ಅಗರವಾಲ, ಅವಿನಾಶ ಜೈನ, ವೆಂಕಟೇಶ ಕುಲಕರ್ಣಿ, ಲಿಂಗರಾಜ ಗುಡಿಮನಿ, ರಾಘವೇಂದ್ರ ಬರಾಡ, ಸಂತೋಷ ಚನ್ನಪ್ಪನವರ, ನಾರಾಯಣ ಕುಡತರಕರ, ರವಿ ಗುಂಜೀಕರ, ರಮೇಶ ಸಜ್ಜಗಾರ, ವಿಜಯಲಕ್ಷಿ-್ಮ ಮಾನ್ವಿ, ಪ್ರೀತಿ ಹೊನಗುಡಿ, ಅನುರಾಧಾ ಬಸವಾ, ಮೇಘಾ ಮುದಗಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 