ಹಿರೂರ ಪಿಕೆಪಿಎಸ್ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ
Hirura PKPS President-Vice President elected unopposed
ಹಿರೂರ ಪಿಕೆಪಿಎಸ್ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ
ತಾಳಿಕೋಟಿ 02: ತಾಲೂಕಿನ ಹಿರೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಂಗಣ್ಣ ಅಡಿವೆಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಭೀರ್ಪ ಗುರುಬಸಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಗಣ್ಣ ಅಡಿವೆಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭೀರ್ಪ ಗುರುಬಸಪ್ಪ ಪೂಜಾರಿ ಇವರಿಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಇವರಿಬ್ಬರೂ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ಐ.ಜೆ. ನಾಯಕ ಅವರು ಅಧಿಕೃತವಾಗಿ ಘೋಷಿಸಿದರು. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್. ಬಿರಾದಾರ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘಕ್ಕೆ ಆಯ್ಕೆಯಾದ 12 ಜನ ನೂತನ ಸದಸ್ಯರೆಲ್ಲರೂ ಭಾಗವಹಿಸಿದ್ದರು. ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಣ್ಣ ಅಡಿವೆಪ್ಪ ಬಿರಾದಾರ ಅವರು ಮಾತನಾಡಿ ಸಂಘದ ಎಲ್ಲ ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರೆಲ್ಲರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಭೀರ್ಪ ಗುರುಬಸಪ್ಪ ಪೂಜಾರಿ ಅವರು ಕೃತಜ್ಞತೆ ಸಲ್ಲಿಸಿದರು. ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಸಿದ್ದಣ್ಣಗೌಡಪ್ಪ ಚೌದ್ರಿ, ಚಂದ್ರಶೇಖರ್ ತಿಪ್ಪಣ್ಣ ಧನ್ನೂರ, ಶಿವಾನಂದ ಸಂಗನಗೌಡ ಪಾಟೀಲ, ಮುರ್ತುಜಾ ಇ. ಮುಲ್ಲಾ, ಈಶ್ವರ್ಪ ಸಂಗಣ್ಣ ಮಂಟಗಿ, ಸುಭಾಸ ನಿಂಗಪ್ಪ ಹರಿಜನ, ಶರಣಪ್ಪ ಸಂಗಪ್ಪ ತಳವಾರ, ಮಾದೇವಿ ನೀಲಪ್ಪ ಆಲ್ಯಾಳ, ಸವಿತಾ ಸಂಗನಗೌಡ ಅಸ್ಕಿ, ಚಾಂದಬಿ ಅಲ್ಲಾಭಕ್ಷ ಬಳವಾಟ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಿ.ಜಿ.ಪಡಸಲಗಿ ಇವರನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಗ್ರಾಮದ ಗಣ್ಯರಾದ ದೇವೇಂದ್ರ್ಪಗೌಡ ಬಿರಾದಾರ, ಸಂಗನಗೌಡ ಅಸ್ಕಿ, ಬಸನಗೌಡ ವಂದಲಿ, ಸಿದ್ದನಗೌಡ ಬಿರಾದಾರ, ತುಕಾರಾಂ ಗೊಂದಳಿ, ಬಸನಗೌಡ ಚೌಧರಿ, ಲಕ್ಷ್ಮಣಗೌಡ ಬಿರಾದಾರ, ಗುರಣ್ಣ ಚೌಧರಿ, ಶಾಂತಗೌಡ ಬಿರಾದಾರ,ಖಾಜೇಶಾ ಮಕಾಂದಾರ, ದಿಗಂಬರ ಕುಲಕರ್ಣಿ ಸೋಮಶೇಖರ ಯರಗಲ್, ರಾಮನಗೌಡ ಚೌದರಿ,ಆರ್. ಎಸ್. ಪಾಟೀಲ ಚೋಕಾವಿ ಹಾಗೂ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 