ಹಿರೇಮಲ್ಲನಕೆರೆ ಟಾಪರ್ ವಿದ್ಯಾರ್ಥಿನಿಯರಿಗೆ ಸನ್ಮಾನ

ಹಿರೇಮಲ್ಲನಕೆರೆ ಟಾಪರ್ ವಿದ್ಯಾರ್ಥಿನಿಯರಿಗೆ ಸನ್ಮಾನ  Hiremallana Kere topper students felicitated

ಹೂವಿನ ಹಡಗಲಿ  28: ತಾಲೂಕಿನ ಹಿರೇಮಲ್ಲನಕೆರೆ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶ 100 ಲಭಿಸಿದೆ ಎಂದು ಮುಖ್ಯ ಗುರುಗಳಾದ ಜಿ ಎಂ ಕಾಂತೇಶ್ ತಿಳಿಸಿದ್ದಾರೆ. 

ಮಂಗಳವಾರ ಶಾಲೆಯ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳ ಮನೆಗಳಿಗೆ ಎಸ್ ಡಿ ಎಂ ಸಿ ಪದಾಧಿಕಾರಿಗಳು ಶಿಕ್ಷಕರೊಂದಿಗೆ ಭೇಟಿ ನೀಡಿ ಗೌರವ ಸನ್ಮಾನ ನೆರೆವೇರಿಸಿದರು.ಡಿಸ್ಟಿಂಕ್ಷನ್ 16 ಪ್ರಥಮ 25ದ್ವಿತೀಯ 4 ತೃತೀಯ 5ಪರೀಕ್ಷೆಗೆ ಹಾಜರಾದ ಎಲ್ಲಾ 50ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಪ್ಸನಾ ಎಸ್ 599(95.84)ಶ್ವೇತಾ ಎಸ್ 592(94.56)ಸರಸ್ವತಿ ಟಿ 581(92.96)ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರೇಣುಕಾರಾಜಾ ರೆಡ್ಡಿ ಡಿ ಸದಸ್ಯ ಹೊಂಬಳ ನಾಗರಾಜ್ ಸರ್ವ ಸದಸ್ಯರು ಶಿಕ್ಷಕರಾದಬಸಯ್ಯ ನರೇಗಲ್ ಕವಿತಾ ಕೆ ಎಂ ರೇಣುಕಾ ಕೆ ಸತೀಶ್ ಎಚ್ ನೇತ್ರಾವತಿ ಬಿ ಲಕ್ಯಾನಾಯ್ಕ್‌ ಲಿಂಗರಾಜು ಕೆ ವಿಶ್ವನಾಥ್ ಎಸ್ ಟಿ ಭಾರತಿ ಇದ್ದರು.